Advertisement

ಬಸ್‌ ನಿಲ್ದಾಣ ಕಾಮಗಾರಿ ಮಂದಗತಿ

12:14 PM Dec 16, 2021 | Team Udayavani |

ಅರಸೀಕೆರೆ: ನಗರದಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಲ್ಲಿ 3-4 ತಿಂಗಳಿಂದ ನಡೆಸುತ್ತಿರುವ ಅಭಿವೃದ್ಧಿಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಪ್ರತಿನಿತ್ಯ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಮುಗಿಸಿ ಸಮಸ್ಯೆ ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಸುಮಾರು 40 ವರ್ಷಗಳ ಹಿಂದೆ ಮಾಜಿ ಸಚಿವ  ಪಿ.ಜಿ.ಆರ್‌.ಸಿಂಧ್ಯಾ ಅವರು ರಾಜ್ಯ ರಸ್ತೆ ಸಾರಿಗೆ ಸಚಿವರಾಗಿದ್ದಾಗ ನೂತನವಾಗಿ ಉದ್ಘಾಟನೆಗೊಂಡ ಕೆಎಸ್ಆರ್ಟಿಸಿ ಬಸ್‌ ನಿಲ್ದಾಣ ಅಂದಿನ  ಜನಸಂಖ್ಯೆಗೆ ಅನುಗುಣವಾಗಿ ವಿಶಾಲ ವಾಗಿತ್ತು. ನಗರ‌ ಬೆಳೆಯತ್ತಾ ಬಂದಂತೆ ಬಸ್‌ಗಳ ಓಡಾಟಹೆಚ್ಚಾಗಿಪ್ರಮಾಣಿಕರಿಗೆತೊಂದರೆಯಾಗಿತ್ತು. 4-5 ವರ್ಷಗಳ ಹಿಂದಿನಿಂದ ಬಸ್‌ ನಿಲ್ದಾಣ ಸ್ಥಳಾಂತರ ಹಾಗೂ ಜಾಗ ವಿಸ್ತರಿಸಲು ಸಾರ್ವಜನಿಕರ ಒತ್ತಾಯ ನಿರಂತರವಾಗಿತ್ತು.

ಅಭಿವೃದ್ಧಿಗೆ ಒತ್ತು: ಸಾರ್ವಜನಿಕರ ಒತ್ತಾಸೆ ಮೇರೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು ಆಗಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಾರಿಗೆ ಸಚಿವರಾಗಿದ್ದ ಡಿ.ಸಿ.ತಮ್ಮಣ್ಣ ಅವರೊಂದಿಗೆ ಬಸ್‌ ನಿಲ್ದಾಣಕ್ಕೆ ಭೇಟಿ ನೀಡಿ ಇರುವ ಜಾಗದಲ್ಲಿಯೇ ಬಸ್‌ ನಿಲ್ದಾಣವನ್ನು ವಿಸ್ತರಣೆ ಮಾಡಿ ಅಭಿವೃದ್ಧಿಪಡಿ ಸುವ ವಾಗ್ಧಾನ  ಮಾಡಿದ್ದರು.

ಬಸ್‌ ನಿಲ್ದಾಣದ ಪಕ್ಕದಲ್ಲಿರುವ  ಪಶು ಆಸ್ಪತ್ರೆಯನ್ನು ಸ್ಥಳಾಂತರ  ಮಾಡಿ ಅದೇ ಜಾಗದಲ್ಲಿ ಗ್ರಾಮಾಂತರ ಬಸ್‌ ನಿಲ್ದಾಣ ಹಾಗೂ ಹಾಲಿ ಜಾಗದ ಮುಂಭಾಗದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ನಗರದಿಂದ ಬೇರೆ ಪ್ರಮುಖ ನಗರ ಗಳೆಡೆಗೆ ತೆರಳುವ ಬಸ್‌ಗಳಿಗೆ ವ್ಯವಸ್ಥೆ ಕಲ್ಪಿಸಿ ನಿಲ್ದಾಣ ಅಬಿವೃದ್ಧಿ ಪಡಿಸಲು ಯೋಜನೆ ರೂಪಿಸುವ  ಭರವಸೆ ನೀಡಿದ್ದರು.

ಮಂದಗತಿ ಕಾಮಗಾರಿ: ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ 68 ಲಕ್ಷ ರೂ ವೆಚ್ಚದಲ್ಲಿ ನಗರ ಬಸ್‌ ನಿಲ್ದಾಣದ ಅಭಿವೃದ್ಧಿ ಕಾಮಾಗಾರಿಗೆ ಬೆಂಗಳೂರಿನಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ.  ಆದರೆ ಸಂಬಂಧಪಟ್ಟ ಗುತ್ತಿಗೆದಾರರು ತ್ವರಿತವಾಗಿ ಅಭಿವೃದ್ಧಿ ಕಾಮಗಾರಿಗಳು ಮಾಡಿಸದೆ ಕಳೆದ 3-4 ತಿಂಗಳಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯು ತ್ತಿದೆ. ಪ್ರತಿನಿತ್ಯ ನೂರಾರು ಬಸ್‌ಗಳಲ್ಲಿ ಸಾವಿರಾರು ಪ್ರಯಾಣಿಕರು ಬೇರೆ ಬೇರೆ ಊರುಗಳ ಕಡೆಗಳಿಂದ ಬಂದು ಹೋಗುತ್ತಿದ್ದು, ಪ್ರಯಾಣಿಕರಿಗೆ ನಿಲ್ಲಲು ತಂಗುದಾಣ ಕೂರಲು ಸ್ಥಳವಿಲ್ಲದಂತಾಗಿದೆ.

Advertisement

ಸಾರ್ವಜನಿಕರಿಗಿಲ್ಲದ ಸೌಕರ್ಯ: ಮಳೆ ಬಂದರೆ ಪ್ರಯಾಣಿಕರಿಗೆ ಸರಿಯಾದ ಸೂರಿಲ್ಲದಂತಾಗಿದೆ. ಮಧ್ಯಾಹ್ನದ ಉರಿ ಬಿಸಿಲು ತಪ್ಪಿಸಿಕೊಳ್ಳಲು ಪ್ರಯಾ ಣಿಕರು ಪರದಾಡುವಂತಾಗಿದೆ. ಅಲ್ಲದೆ ಕಾಮಗಾರಿ ನಡೆಯುತ್ತಿರುವ ಜಾಗದಲ್ಲಿ ಹಳೆಯ ಕಬ್ಬಿಣದ ತಗಡು, ದೊಡ್ಡ ದೊಡ್ಡ ಕಂಬಗಳು, ತ್ಯಾಜ್ಯ ವಸ್ತುಗಳು ಬಿದ್ದಿದ್ದರು ಅದನ್ನು ಸರಿಯಾದ ಜಾಗಕ್ಕೆ ಹಾಕದ ಕಾರಣ ಮಹಿಳೆಯರು ಮತ್ತು ಮಕ್ಕಳು ಹಾಗೂ ವಯೋವೃದ್ಧರು ಬಸ್‌ ಹತ್ತುವಾಗ ಇಳಿಯುವಾಗ ಪರಿತಪಿಸುತ್ತಿದ್ದಾರೆ.

ಇದನ್ನೂ ಓದಿ;- ಭಾರತೀಯ ಹೆಣ್ಣು ಮಕ್ಕಳ ವಿವಾಹದ ವಯಸ್ಸು 18ರಿಂದ 21ಕ್ಕೆ ಏರಿಕೆ: ಕೇಂದ್ರ ಸಂಪುಟ ಅಸ್ತು

ಕೆಎಸ್ಸಾರ್ಟಿಸಿ ಸಂಸ್ಥೆಯ ಸಂಬಂದ ಪಟ್ಟ ಅಧಿಕಾರಿಗಳು ಪ್ರಯಾಣಿಕರಿಗೆ ಉಂಟಾಗುತ್ತಿ ರುವ ಸಮಸ್ಯೆಗಳ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದು ತ್ವರಿತವಾಗಿ ಬಸ್‌ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಯನ್ನು ಸಂಪೂರ್ಣಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

“ಬೆಂಗಳೂರಿನ ಖಾಸಗಿ ಕಂಪನಿಗೆ ಅಭಿವೃದ್ಧಿ ಕಾಮಗಾರಿ ನಡೆಸಲು ಗುತ್ತಿಗೆಯನ್ನು ನೀಡಲಾಗಿದೆ. ಇತ್ತೀಚೆಗೆ ತೀವ್ರವಾಗಿ ಸುರಿದ ಮಳೆಯಿಂದಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಈಗಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಲು ಅಲ್ಲದೆ ನಿಲ್ದಾಣ ಅವರಣದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೇರೆಡೆಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ”          ● ರಮೇಶ್‌, ಕೆಎಸ್ಸಾರ್ಟಿಸಿ ಎಂಜಿನಿಯರ್‌, ಚಿಕ್ಕಮಗಳೂರು ಘಟಕ

“ಬಸ್‌ ನಿಲ್ದಾಣಕ್ಕಾಗಿ ಲಕ್ಷಾಂತರ ರೂ. ವ್ಯಯ ಮಾಡಲಾಗುತ್ತಿದೆ. ಆದರೆ ಪ್ರಯಾಣಿಕರಿಗೆ ಮೂಲಸೌಲಭ್ಯಕಲ್ಪಿಸುವಲ್ಲಿ ವಿಫ‌ಲವಾಗಿದೆ. ಸಂಬಂಧ ಪಟ್ಟ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಯಾಣಿಕರಿಗೆ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕು.” ● ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌, ರೈತನಾಯಕ

– ರಾಮಚಂದ್ರ ಅರಸೀಕೆರೆ

Advertisement

Udayavani is now on Telegram. Click here to join our channel and stay updated with the latest news.

Next