ಹುಬ್ಬಳ್ಳಿ: ಮಹಾನಗರ ವ್ಯಾಪ್ತಿಯ ಕೆಲ ರಸ್ತೆಗಳಲ್ಲಿ ಬsಊಗಳ ನಿಲುಗಡೆಯಿಂದ ವಾಹನ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೆಡೆ ಈಗಿರುವ ನಿಲುಗಡೆ ಸ್ಥಳ ಬದಲಾಗಿದ್ದು, ಸೂಕ್ತ ಸ್ಥಳಗಳಲ್ಲಿ ನಗರ ಸಾರಿಗೆ ಬಸ್‌ಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.
ಬಸ್‌ಗಳ ನಿಲುಗಡೆಯಿಂದ ವಾಹನ ದಟ್ಟಣೆಯಾಗುತ್ತಿರುವ ಕುರಿತು ಮಹಾನಗರ ಪೊಲೀಸ್ ಆಯುಕ್ತ ಲಾಭೂರಾಮ ಹಾಗೂ ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದರು.
ವಾಹನ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಸ್‌ಗಳ ನಿಲುಗಡೆಯನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಸಾರಿಗೆ ಸಂಸ್ಥೆ ಸಿಬ್ಬಂದಿ ಜಂಟಿ ಸಮೀಕ್ಷೆ ನಡೆಸಿ ಸ್ಥಳ ಗುರುತಿಸಿದ್ದು, ಇದೀಗ ಗುರುತಿಸಿರುವ ಸ್ಥಳದಲ್ಲಿ ಮಾತ್ರ ಬಸ್ ಗಳನ್ನು ನಿಲ್ಲಿಸಬೇಕು ಹಾಗೂ ಅದೇ ಸ್ಥಳದಿಂದ ಪ್ರಯಾಣಿಕರು ಬಸ್ ಹತ್ತಬೇಕಾಗಿದೆ.
ಕಿತ್ತೂರು ಚನ್ನಮ್ಮ ವೃತ್ತದಿಂದ ಗಬ್ಬೂರು ಕಡೆಗೆ ಹೋಗುವ ಪ್ರಯಾಣಿಕರು ಯುನಿವರ್ಸೆಲ್ ಆಟೋಮೊಬೈಲ್ ಅಂಗಡಿ, ಕೇಶ್ವಾಪುರಕ್ಕೆ ಹೋಗುವವರು ಶಿವಾಜಿ ವೃತ್ತ, ಕುಸಗಲ್ಲಗೆ ಹೋಗುವವರು ಕವಡೆ ಫ್ಯಾಕ್ಟರಿ, ಗದಗಗೆ ಹೋಗುವವರು ರೈಲ್ವೆ ಮಜ್ದೂರು ಯೂನಿಯನ್ ಕಚೇರಿ ಎದುರು, ನ್ಯೂ ಇಂಗ್ಲಿಷ್ ಸ್ಕೂಲ್-ಹಳೇ ಹುಬ್ಬಳ್ಳಿ ಭಾರತ ಆಗ್ರೋ ಸ್ಪೇರ್ ಅಂಗಡಿ ಎದುರು, ಕಿತ್ತೂರು ಚನ್ನಮ್ಮ ವೃತ್ತ-ಗಬ್ಬೂರು ಹೋಗುವವರು ವಲಯ ಕಚೇರಿ ಎದುರು ನಿಲುಗಡೆ ಮಾಡಬೇಕಿದೆ.
ಹಳೇ ಬಸ್ ನಿಲ್ದಾಣ-ಧಾರವಾಡ ಕಡೆಗೆ ಹೋಗುವ ಬಸ್‌ಗಳು ಕ್ರಮವಾಗಿ ಶ್ರೀ ಆಟೋಮೊಬೈಲ್ ಸ್ಟೋರ್, ಎಸ್‌ಬಿಐ ಬ್ಯಾಂಕ್ ಮುಂದುಗಡೆ, ನರ್ಸರಿ ಎದುರಿಗೆ ಪೆಟ್ರೋಲ್ ಬಂಕ್ ಹತ್ತಿರ, ಡಾಮಿನ್ಸ್/ ರಿನಾಲ್ಟ್ ಶೋರೂಂ ಎದುರು, ಬೆಲ್ಲದ ಶೋರೂಂ ಎದುರು, ಸಿಗ್ನಲ್‌ಗಿಂತ 100 ಅಡಿ ಮುಂದೆ, ವಿಶಾಲ ಸಿಲ್ಕ್ ಎದುರು, ಪೊಲೀಸ್ ಆಯುಕ್ತ ಹಾಗೂ ನಗರಾಭಿವೃದ್ಧಿ ಕಚೇರಿ ನಡುವೆ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ.
ಹಳೇ ಬಸ್ ನಿಲ್ದಾಣದಿಂದ-ಕಾಟನ್ ಮಾರ್ಕೇಟ್ ರಸ್ತೆ ಹೊಸೂರು, ನೀಲಿಜನ್ ರಸ್ತೆ ಮೂಲಕ ಸಂಚರಿಸಿ ತಿರುಮಲ ಟ್ರೇಡರ್ ಮುಂಭಾಗದಲ್ಲಿ ಸಂಚರಿಸುವುದು. ಕೆಲವು ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿದ್ದು, ಆ ಸ್ಥಳಗಳಲ್ಲಿ ಮಾತ್ರ ವಾಹನಗಳ ನಿಲುಗಡೆ ಮಾಡಬೇಕು ಹಾಗೂ ಪ್ರಯಾಣಿಕರು ಅದೇ ಸ್ಥಳದಿಂದ ಬಸ್ ಹತ್ತಬೇಕೆಂದು ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.