Advertisement

ನಿಲ್ದಾಣಕ್ಕಿಲ್ಲ ಉದ್ಘಾಟನೆ ಭಾಗ್ಯ

06:11 PM Apr 06, 2021 | Team Udayavani |

ಕುಕನೂರು: ಪಟ್ಟಣದಲ್ಲಿ 3.5 ಕೋಟಿ ವೆಚ್ಚದಲ್ಲಿ ಹೈಟೆಕ್‌ ಬಸ್‌ ನಿಲ್ದಾಣ ನಿರ್ಮಾಣ ಮಾಡಲಾಗಿದ್ದು, ಕಾಮಗಾರಿಮುಗಿದು ಸುಮಾರು ಒಂದು ವರ್ಷ ಕಳೆದರೂ ಇನ್ನೂ ಉದ್ಘಾಟನೆಗೆ ಕಾಲ ಕೂಡಿ ಬಂದಿಲ್ಲ. ಉದ್ಘಾಟನೆ ಆಗದ ಪರಿಣಾಮ ವಾಣಿಜ್ಯ ಮಳಿಗೆಗಳಿಂದ ಬರುವ ಆದಾಯಕ್ಕೂ ಖೋತಾ ಬಿದ್ದಿದೆ.

Advertisement

ಬಸ್‌ ನಿಲ್ದಾಣ ಆಗುವವರಿಗೂ ಪ್ರಯಾಣಿಕರ ಪರದಾಟ ಒಂದಡೆ ಆಗಿತ್ತಾದರೂ ಈಗ ಸರಿಯಾದ ಸಮಯಕ್ಕೆ ಯಾವ ಸ್ಥಳಕ್ಕೆ ಬಸ್‌ ಬರುತ್ತವೆ ಎಂದು ಪ್ರಯಾಣಿಕರುಪರದಾಡುವಂತಾಗಿದೆ. ಪಟ್ಟಣದ ನಿಲ್ದಾಣಕ್ಕೆ ಹೊಸವ್ಯಕ್ತಿ ಬಂದು ಇದು ಯಾವ ಊರು ಎಂದು ತಲೆ ಎತ್ತಿನಿಲ್ದಾಣದ ನಾಮಫಲಕ ನೋಡಿದರೆ ಅದೂ ಕಾಣಸಿಗದೇ ಗೊಂದಲ ಉಂಟು ಮಾಡುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಪಟ್ಟಣದಲ್ಲಿ ಮೊಬೈಲ್‌ ಹಾಗೂಇನ್ನಿತರೆ ವಸ್ತುಗಳ ಕಳ್ಳರ ಹಾವಳಿ ಹೆಚ್ಚಾಗಿದ್ದು, ಸಿಸಿಕ್ಯಾಮರಾ ಕಣ್ಗಾವಲು ಸಹ ಇಲ್ಲದಂತಾಗಿದೆ.

ಆದಾಯ ಖೋತಾ: ನಿಲ್ದಾಣದಲ್ಲಿ 7 ವಾಣಿಜ್ಯಮಳಿಗೆಗಳು ಇದ್ದು, ತಿಂಗಳಿಗೆ ಅಂದಾಜು 1.20 ಲಕ್ಷ ರೂ.ಲಾಭ ನೀಡುತ್ತವೆ. ಅಂದರೆ ವರ್ಷಕ್ಕೆ 12.50 ಲಕ್ಷ ಆಗಿದೆ. ನಿಲ್ದಾಣ ಸುಮಾರು ಒಂದು ವರ್ಷ ಕಳೆದರೂಉದ್ಘಾಟನೆಯಾಗದೇ ಇರುವುದರಿಂದ ವರ್ಷಕ್ಕೆ12.50 ಲಕ್ಷ ರೂ.ನಷ್ಟವನ್ನು ಸಂಸ್ಥೆ ಹೊರಬೇಕಾಗಿದೆ.ಇನ್ನು ಪಟ್ಟಣದಲ್ಲಿ ಡಿಪೋ ಇರುವುದರಿಂದ ನೂರಾರುಬಸ್‌ಗಳು ಸಂಚರಿಸುತ್ತವೆ. ಸಾವಿರಾರು ಪ್ರಯಾಣಿಕರುಬಸ್‌ ನಿಲ್ದಾಣದ ಮೂಲಕ ಪ್ರಯಾಣಿಸುತ್ತಾರೆ.ಆದರೆ ಇಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯವೇಇಲ್ಲದೇ ಜನರು ಪರದಾಡುವಂತಾಗಿದೆ. ಸ್ಥಳಾವಕಾಶಇಲ್ಲದ್ದರಿಂದ ಎಲ್ಲೆಂದರಲ್ಲಿ ದ್ವಿಚಕ್ರವಾಹನ, ಆಟೋಗಳ ನಿಲ್ದಾಣವಾಗಿದೆ.

ಸ್ವಚ್ಛತೆ ಕೊರತೆ: ಪಟ್ಟಣದ ಮಧ್ಯಭಾಗದಲ್ಲಿರುವ ಬಸ್‌ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಅದರ ಮಾರ್ಗವನ್ನು ಬಂದ್‌ ಮಾಡಿದ್ದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಎಲ್ಲೆಂದರಲ್ಲಿ ಉಗುಳುತ್ತಿದ್ದು, ಬಸ್‌ ನಿಲ್ದಾಣ ಕಾಂಪೌಂಡ್‌ ಬಳಿ ಮೂತ್ರ ಮಾಡುವುದರಿಂದ ಮಹಿಳಾ ಪ್ರಯಾಣಿಕರು ಮುಜುಗರ ಪಡುವಂತಾಗಿದೆ.

ದೊರಯದ ಸ್ಪಂದನೆ: ಸಮಸ್ಯೆಗಳ ಬಗ್ಗೆ ಮಾತನಾಡಲು ಘಟಕ ವ್ಯವಸ್ಥಾಪಕರಾದ ಹಾಗೂ ಜನಪ್ರತಿನಿಧಿ ಗಳಬಳಿ ಹೊದರೆ ಜನಪ್ರತಿನಿಧಿ ಗಳ ವೇಳೆ ನಿಗದಿ ಆಗುತ್ತಿಲ್ಲ ಎನ್ನುವ ಉತ್ತರ ಸಿಗುತ್ತದೆ. ಕೆಲವರು ಹೈಟೆಕ್‌ ಬಸ್‌ನಿಲ್ದಾಣ ಉದ್ಘಾಟನೆ, ಮೂಲ ಸೌಕರ್ಯಗಳ ಕುರಿತುಮಾಹಿತಿ ಕೇಳಬೇಕೆಂದು ದೂರವಾಣಿ ಮೂಲಕಸಂಪರ್ಕಿಸಿದರೂ ಸಿಗುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ.

Advertisement

ಸ್ಥಳೀಯ ಶಾಸಕರು ನೂತನ ಬಸ್‌ ನಿಲ್ದಾಣದಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸಾರ್ವಜನಿಕರಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಬಸ್‌ ನಿಲ್ದಾಣಉದ್ಘಾಟಿಸಿ ವಾಣಿಜ್ಯ ಮಳಿಗೆ ಪ್ರಾರಂಭಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶೌಚಾಲಯಕ್ಕೆ ತೆರಳಬೇಕು ಎಂದರೆ ಸುಮಾರು ಅರ್ಧ ಕಿ.ಮೀ ಅಷ್ಟು ದೂರಹೋಗಬೇಕು. ಅಷ್ಟರಲ್ಲಿ ಬಸ್‌ ಮಿಸ್‌ ಆಗುವಸಾಧ್ಯತೆ ಇರುತ್ತದೆ. ನಿಲ್ದಾಣದಲ್ಲಿ ಕುಡಿವ ನೀರಿನಸಮಸ್ಯೆ ಇದ್ದು, ಹೊರಗಡೆ ಹೋಟೆಲ್‌ ಆಶ್ರಯ ಪಡೆಯಬೇಕು. ಇಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಶಂಕರ ಬಂಡಾರಿ, ಭೀಮ ಆರ್ಮಿ, ಕುಕನೂರು.

ಸುಮಾರು ಒಂದು ವರ್ಷದಿಂದ ಹೊಸ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಮೂಲ ಸೌಕರ್ಯಕ್ಕೆ ಪರದಾಡುತ್ತಿದ್ದಾರೆ.ನಾಮಫಲಕವಿಲ್ಲ, ಹೋಟೆಲ್‌, ಬುಕ್‌ಸ್ಟಾಲ್‌, ಇತರೆ ಮಳಿಗೆಗಳು ಇಲ್ಲದೇ ಒಂದಿಲ್ಲೊಂದು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಈಕರಸಾ ಸಂಸ್ಥೆಗೂ ನಷ್ಟವಾಗುತ್ತದೆ. – ಪ್ರಯಾಣಿಕರು

ಸುಮಾರು ತಿಂಗಳಿಂದ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ್ಣ ಸೌದಿ ಅವರನ್ನು ಉದ್ಘಾಟಿಸಲು ದಿನಾಂಕ ಕೇಳುತ್ತಿದ್ದೇವೆ. ಆದರೆ ಕೆಲಸದ ಒತ್ತಡದಿಂದ ಅವರ ವೇಳೆ ನಿಗದಿಯಾಗುತ್ತಿಲ್ಲ. –ವಸಂತಕುಮಾರ, ಎಇಇ ಕೆಎಸ್‌ಆರ್‌ಟಿಸಿ ಕೊಪ್ಪಳ

 

-ಎಲ್‌.ಮಂಜುನಾಥ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next