Advertisement

ಮುಷ್ಕರ ಹಿಂದೆಗೆತ: ತಮಿಳು ನಾಡಿನಲ್ಲಿ ಬಸ್‌ ಸೇವೆ ಮಾಮೂಲಿಗೆ

11:00 AM Jan 12, 2018 | udayavani editorial |

ಚೆನ್ನೈ : ರಾಜ್ಯ ಸಾರಿಗೆ ನೌಕರರು ವೇತನ ಹೆಚ್ಚಳ ಬೇಡಿಕೆಯನ್ನು ಆಗ್ರಹಿಸಿ ನಡೆಸುತ್ತಿದ್ದ  ತಮ್ಮ ಎಂಟು ದಿನಗಳ ಮುಷ್ಕರವನ್ನು ಹಿಂದೆಗೆದುಕೊಂಡ ಕಾರಣ ತಮಿಳು ನಾಡಿನಲ್ಲಿ ಇಂದು ಶುಕ್ರವಾರ ಬಸ್ಸು ಸೇವೆ ಮಾಮೂಲಿ ಸ್ಥಿತಿಗೆ ಮರಳಿತು.

Advertisement

ಜನವರಿ 14ರ ಪೊಂಗಾಲ್‌ ಹಬ್ಬಕ್ಕೆ ಮುನ್ನ ರಾಜ್ಯದಲ್ಲಿನ ಬಸ್‌ ಮುಷ್ಕರ ಕೊನೆಗೊಂಡದ್ದು ರಾಜ್ಯದ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. 

ಪೊಂಗಾಲ್‌ ಪ್ರಯುಕ್ತ ರಾಜ್ಯ ಸರಕಾರ ಇಂದು ಶುಕ್ರವಾರವೇ ಶಾಲೆ, ಕಾಲೇಜುಗಳಿಗೆ ರಜೆ ಸಾರಿರುವುದರಿಂದ ವಿದ್ಯಾರ್ಥಿಗಳಿಗೆ ಇನ್ನು ಐದು ದಿನಗಳ ನಿರಂತರ ರಜೆ ಸಿಕ್ಕಂತಾಗಿದೆ. 

ಸಿಐಟಿಯು ನಾಯಕ ಎ ಸೌಂದರ್‌ ರಾಜನ್‌ ಅವರು ರಾಜ್ಯಸಾರಿಗೆ ನೌಕರರು ತಮ್ಮ ಅನಿರ್ದಿಷ್ಟಾವಧಿ ಮುಷ್ಕರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಸಾರಿಗೆ ನೌಕರರ ವೇತನ ಹೆಚ್ಚಳ ಬೇಡಿಕೆಯನ್ನು ಪರಿಗಣಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದೊಂದಿಗೆ ಮಾತುಕತೆ ನಡೆಸಲು ಮದ್ರಾಸ್‌ ಹೈಕೋರ್ಟ್‌ ಸಂಧಾನಕಾರರನ್ನು ನೇಮಿಸಿರುವುದರಿಂದ ನಾವು ನಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂದೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next