Advertisement

ಮೂರ್‍ನಾಲ್ಕು ದಿನಗಳಲ್ಲಿ ಗ್ರಾಮೀಣಪ್ರದೇಶಕ್ಕೂ ಬಸ್‌ ಸೇವೆ: ಚೋಳನ್‌

08:02 AM May 20, 2020 | Suhan S |

ಹುಬ್ಬಳ್ಳಿ : ಸರಕಾರದ ಸೂಚನೆಯಂತೆ ವಿವಿಧ ಜಿಲ್ಲೆಗಳಿಗೆ ಬಸ್‌ ಸೇವೆ ಆರಂಭಿಸಲಾಗಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಗ್ರಾಮೀಣ ಬಸ್‌ ಸೇವೆ ಆರಂಭಿಸಲು ಚಿಂತನೆ ನಡೆಸಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳವಾರ ಶೇ.30 ಬಸ್‌ಗಳನ್ನು ಮಾತ್ರ ಕಾರ್ಯಾಚರಣೆಗೊಳಿಸಲಾಗಿದೆ. ಹಂತ ಹಂತವಾಗಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಎರಡ್ಮೂರು ದಿನಗಳಲ್ಲಿ ನಿಗಮದ ಶೇ.50 ಬಸ್‌ ಸಂಚಾರ ಆರಂಭವಾಗಲಿದೆ. ಶೇ.100 ಅನುಸೂಚಿಗಳು ಕಾರ್ಯಾಚರಣೆಗೊಳ್ಳಲು ಕನಿಷ್ಟ 2-3 ತಿಂಗಳು ಬೇಕಾಗುತ್ತದೆ ಎಂದರು. ಮಾಸಿಕ ಪಾಸ್‌ ಕಷ್ಟ: ಒಂದು ಬಸ್‌ನಲ್ಲಿ 30 ಪ್ರಯಾಣಿಕರನ್ನು ಸಾಗಿಸಿದರೆ ಸಾಕಷ್ಟು ನಷ್ಟವಾಗಲಿದ್ದು, ಸರಕಾರ ಭರಿಸುವುದಾಗಿ ಭರವಸೆ ನೀಡಿದೆ. ನಷ್ಟದ ಪ್ರಮಾಣ ತಗ್ಗಿಸಲು ಕೈಗಾರಿಕೆ, ಎಪಿಎಂಸಿ ಸೇರಿದಂತೆ ಇನ್ನಿತರ ಕಚೇರಿಗಳಿಗೆ ಬಸ್‌ ಸೌಲಭ್ಯ, ಪಾರ್ಸಲ್‌ ಸೇವೆಗೆ ಉತ್ತೇಜನ ನೀಡಲಾಗುವುದು. ಸದ್ಯದ ದರದಲ್ಲಿ ಮಾಸಿಕ ಪಾಸ್‌ ಸೇವೆ ನೀಡುವುದು ಕಷ್ಟ. ವಿದ್ಯಾರ್ಥಿ ಪಾಸ್‌ ದರವನ್ನು ಸರಕಾರ ನಿರ್ಧರಿಸಲಿದೆ ಎಂದರು.

ನಗದು ರಹಿತ ವ್ಯವಹಾರಕ್ಕೆ ಆದ್ಯತೆ ನೀಡಲಾಗುತ್ತಿದ್ದು, ಮೂರ್‍ನಾಲ್ಕು ಕಂಪನಿ ಜತೆ ಚರ್ಚಿಸಲಾಗಿದೆ. ಪೇಟಿಎಂ, ಗೂಗಲ್‌ ಪೇ ಮಾದರಿ ಹಣ ನೀಡಿ ಟಿಕೆಟ್‌ ಪಡೆವ ಸೌಲಭ್ಯ ಪರಿಚಯಿಸುವ ಕೆಲಸ ನಡೆಯುತ್ತಿದೆ. ಮೂರ್‍ನಾಲ್ಕು ದಿನಗಳಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಗೆ ತರಲಾಗುವುದು. ಚಿಲ್ಲರೆ ಸಮಸ್ಯೆ ನಿವಾರಣೆಗೆ ಟಿಕೆಟ್‌ ದರವನ್ನು ಸಮ ಪ್ರಮಾಣಕ್ಕೆ (9ರೂ. ಇದ್ದರೆ 10 ರೂ.) ತರುವ ಕೆಲಸ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next