Advertisement
ಹೌದು ಬಳ್ಳಾರಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹತ್ತಿರವಿರುವ ತಾಲೂಕು ಎಂದರೆ ಕುರುಗೋಡು ತಾಲೂಕು ಬಳ್ಳಾರಿ ಮತ್ತು ಕುರುಗೋಡು ತಾಲೂಕಿಗೆ ಅವಿನಾಭಾವ ನಂಟು ಇದೆ ಕಾರಣ ಬಳ್ಳಾರಿ ತಾಲೂಕಿನ ಹಲವು ಗ್ರಾಮಗಳು ಕುರುಗೋಡು ತಾಲೂಕಿಗೆ ಒಳಪಡುತ್ತಿದ್ದೂ ಈ ಹಿಂದೆ ಕೂಡ ಕುರುಗೋಡು ವಿಧಾನಸಭಾ ಕ್ಷೇತ್ರವಾಗಿದ್ದಾಗ ಬಳ್ಳಾರಿ ಗ್ರಾಮೀಣ ಭಾಗದ ಅನೇಕ ಮತಗಳು ಕೂಡ ಕುರುಗೋಡಿಗೆ ಇದ್ದಿದ್ದು ಆದ್ದರಿಂದ ಬಳ್ಳಾರಿ ಮತ್ತು ಕುರುಗೋಡಿಗೆ ನಂಟು ಇದೆ ಎನ್ನಲಾಗುತ್ತದೆ.
Related Articles
Advertisement
ಕುರುಗೋಡು ಡಿಪೋದಲ್ಲಿ ಒಟ್ಟು 41 ಬಸ್ ಗಳು ಇದ್ದು, ಇದರಲ್ಲಿ ಬರೆ ಡಕೋಟಾ ಬಸ್ ಗಳೆ ಜಾಸ್ತಿ. ರಸ್ತೆಯಲ್ಲಿ ಸಂಚರಿಸುವಾಗ ದಾರಿ ಮಧ್ಯದಲ್ಲೇ ಅನೇಕ ಬಾರಿ ಕೈ ಕೊಟ್ಟಿವೆ ಇದರಿಂದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗಿದೆ.
ಈಗಾಗಲೇ ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ಅನೇಕ ಬಾರಿ ಪ್ರತಿಭಟನೆಗಳು ನಡೆಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆಗಳು ಕೂಡ ಇವೆ.
ಪಟ್ಟಣದ ಮುಷ್ಟಗಟ್ಟೆ, ವಿರಾಪುರ, ಕ್ಯಾದಿಗೆಹಾಳ್, ಪಟ್ಟಣ ಶೇರಗು, ಗುತ್ತಿಗನೂರು, ಒರ್ವಾಯಿ, ಗೆಣಿಕೇಹಾಳ್, ವದ್ದಟ್ಟಿ, ಕೋಳೂರು, ಸೋಮಸಮುದ್ರ ಸೇರಿದಂತೆ ಇನ್ನೂ ಅನೇಕ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾಗಿ ಬಸ್ ಇಲ್ಲದಂತಾಗಿದೆ. ಇದರಿಂದ ಶಿಕ್ಷಣ ಪಡೆದು ಕೊಳ್ಳಲು ತುಂಬಾ ತೊಂದರೆ ಆಗುತ್ತಿದೆ.
ಅಲ್ಲದೆ ಪಟ್ಟಣದ ಜನತೆ ಕೂಡ ದೂರದ ಜಿಲ್ಲೆ ಮತ್ತೆ ತಾಲೂಕುಗಳಿಗೆ ತೆರಳುವುದಕ್ಕೆ ಕೂಡ ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ಮುಖ್ಯ ವೃತ್ತದಲ್ಲೇ ಬಿರು ಬಿಸಿಲಿನಲ್ಲೇ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಸಮಸ್ಯೆಯಿಂದ ಸರಿಯಾದ ಸಮಯಕ್ಕೆ ತರಗತಿಗಳು ಮುಗಿಸಿಕೊಂಡು ಮನೆಗೆ ತಲಪದೇ ಇರುವ ಕಾರಣ ಪೋಷಕರು ಮಕ್ಕಳನ್ನು ಶಿಕ್ಷಣದಿಂದ ವಂಚಿತಗೊಳಿಸಿ ಕೃಷಿ ಕೆಲಸಗಳಿಗೆ ದೂಡುತ್ತಿರುವುದು ವಿಪರ್ಯಾಸವಾಗಿದೆ.
ಇದನ್ನೂ ಓದಿ :ಉತ್ತಮ ಇಳುವರಿಗಾಗಿ ಕೊಟ್ಟಿಗೆ ಗೊಬ್ಬರದತ್ತ ರೈತರ ಚಿತ್ತ
ಶಾಸಕರ ನಿರ್ಲಕ್ಷ್ಯ :
ಕ್ಷೇತ್ರದ ಶಾಸಕ ಜೆ. ಎನ್. ಗಣೇಶ್ ಅವರಿಗೆ ಅನೇಕ ಬಾರಿ ದೂರವಾಣಿ ಮೂಲಕ ಹಾಗೂ ಲಿಖಿತ ರೂಪದಲ್ಲಿ ಬಸ್ ಒದಗಿಸುವಂತೆ ಮನವಿ ಮಾಡಿದರು ಯಾವುದೇ ಪ್ರಯೋಜನೆ ವಾಗಿಲ್ಲ ಅಲ್ಲದೆ ಶಾಲೆ ಕಾಲೇಜ್ ಕಡೆ ಕಾರ್ಯಕ್ರಮ ಗಳಿಗೆ ಬಂದಾಗ ಕೂಡ ತಿಳಿಸಿದರು ಸದ್ಯದ ಮಟ್ಟಿಗೆ ಅಧಿಕಾರಿಗಳ ಹತ್ತಿರ ಮಾತನಾಡಿ ಶೀಘ್ರವೇ ಬಸ್ ಕಲ್ಪಿಸಲಾಗುವುದು ಎಂದು ಹೇಳಿದವರೇ ಲಾಸ್ಟ್ ಬಸ್ ಗ್ರಾಮೀಣ ಭಾಗಕ್ಕೆ ಹೋಗುತ್ತಿದ್ದವೋ ಇಲ್ವೋ ಎಂದು ತಿಳಿದುಕೊಳ್ಳುವಲ್ಲಿ ಶಾಸಕರು ಎಡವಿದ್ದರೆ
ತರಗತಿಗಳು ಮಿಸ್ :
ದೂರದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳು ಬೆಳಿಗ್ಗೆ ಸರಿಯಾದ ಸಮಯಕ್ಕೆ ಬಸ್ ಬಾರದ ಕಾರಣ ಬೆಳಿಗ್ಗೆ ನಡೆಯುವ ತರಗತಿಗಳು 1 ರಿಂದ 2 ಮಿಸ್ ಆಗುತ್ತವೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಕ್ಕೆ ಬಿದ್ದಂತಾಗುತ್ತದೆ.
ಬಸ್ ಪಾಸ್ ಇದ್ರೂ ಸರಿಯಾಗಿ ಉಪಯೋಗ ಇಲ್ಲ :
ಅತಿ ಹೆಚ್ಚು ಹಣ ನೀಡಿ ವರ್ಷ ಪೂರ್ತಿ ಪ್ರಯಾಣಿಸಲಾಗದೆ ಸರಕಾರದ ಸೌಲಭ್ಯಕ್ಕನುಗುಣವಾಗಿ ವಿದ್ಯಾರ್ಥಿಗಳು ವಾರ್ಷಿಕ ಬಸ್ ಪಾಸ್ ಮಾಡಿಸಿದ್ರು ಸರಿಯಾಗಿ ಉಪಯೋಗ ಆಗುತ್ತಿಲ್ಲ. ಕೆಲವೊಮ್ಮೆ ಬಸ್ ಬಾರದೆ ಸಂದರ್ಭದಲ್ಲಿ ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ತೆರಳಬೇಕಾಗಿದೆ.
ಪರೀಕ್ಷೆ ಸಂದರ್ಭದಲ್ಲಿ ತುಂಬಾ ಕಷ್ಟ :ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಕಾಲೇಜ್ ನಲ್ಲಿ ನಡೆಯುವ ಇಂಟ್ರನಾಲ್ ಹಾಗೂ ವಾರ್ಷಿಕ ಪರೀಕ್ಷೆಗಳ ಸಂದರ್ಭದಲ್ಲಿ ಸರಿಯಾಗಿ ಬಸ್ ಬಾರದ ಕಾರಣ ಹಲವು ವಿದ್ಯಾರ್ಥಿಗಳು ಬೈಕ್ ಡ್ರಾಪ್ ತಗೊಂಡು ಹೋದ್ರೆ ಇನ್ನೂ ಹಲವು ವಿದ್ಯಾರ್ಥಿಗಳು ಸೇರಿ ತಲಾ ಒಬ್ಬರಿಗೆ ಇಷ್ಟು ಅಂತ ಮಾತನಾಡಿಕೊಂಡು ಟಾಟಾ ಎಸ್ ನಲ್ಲಿ ಹೋಗಿ ಬರಬೇಕಾಗಿದೆ. ಶಿಕ್ಷಕರಿಂದ ಹೊಡೆತ : ಕ್ಲಾಸ್ ಗಳಿಗೆ ಬಸ್ ಸಮಸ್ಯೆಯಿಂದ ತಡವಾಗಿ ಹೋದ್ರೆ ಕ್ಲಾಸ್ ಶಿಕ್ಷಕರು ಕ್ಲಾಸ್ ಒಳಗಡೆ ಕರೆದುಕೊಳ್ಳದೆ ಹೊರಗಡೆ ನಿಲ್ಲಿಸಿ ಶಿಕ್ಷೆ ಕೊಡುತ್ತಾರೆ. ಇಲ್ಲಾಂದ್ರೆ ಹೊಡೆಯುತ್ತಾರೆ. ಇತರ ನಿತ್ಯ ಅನುಭವಿಸಿ ದಿನ ಬಸ್ ಸಮಸ್ಯೆ ಅಂತ ಹೇಳಿ ಸಾಕಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳುತ್ತಾರೆ. ಬರೆ ಆಶ್ವಾಸನೆ : ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ಮಾಡಿದಾಗ ಮಾತ್ರ ಅಧಿಕಾರಿಗಳು ಹಾಗೂ ಜನ ಪ್ರತಿನಿದಿಗಳು ಇಂದಿನಿಂದ ಸರಿಯಾದ ಸಮಯಕ್ಕೆ ಬಸ್ ಬರುತ್ತದೆ ಎಂದು ಭರವಸೆ ನೀಡಿ ಹೋಗುತ್ತಾರೆ. ಅವಾಗ ಸದ್ಯದ ಮಟ್ಟಿಗೆ ಎರಡು -ಮೂರು ದಿನ ಮಾತ್ರ ಸರಿಯಾಗಿ ಬರುತ್ತದೆ ಮತ್ತೆ ಅದೇ ತರ ಸಮಸ್ಯೆ ಶುರುವಾಗುತ್ತದೆ ವರ್ಷದಲ್ಲಿ ಅನೇಕ ಬಾರಿ ಪ್ರತಿಭಟನೆ ಮಾಡಿ ಮನವಿ ಮಾಡಿದರು ಪ್ರಯೋಜನೆ ವಾಗಿಲ್ಲ. ಬರೆ ಕೇವಲ ಭರವಸೆ ಯಲ್ಲಿ ಕೈ ತೊಳಿಯುತ್ತಾರೆ. ಆಗ್ರಹ : ಸದ್ಯ ಬೇಸಿಗೆಯ ರಜೆ ಮುಗಿಸಿಕೊಂಡು ಈಗಾಗಲೇ ಎಲ್ಲ ಕಡೆ ಶಾಲಾ -ಕಾಲೇಜ್ ಪ್ರಾರಂಭವಾಗಿದ್ದು, ದೂರದ ತಾಲೂಕು ಗಳಿಗೆ ಗ್ರಾಮೀಣ ಭಾಗದಿಂದ ಅತಿ ಹೆಚ್ಚು ವಿದ್ಯಾರ್ಥಿ ಗಳು ವಿದ್ಯಾಭ್ಯಾಸ ಕ್ಕೆ ತೆರಳುತ್ತಿದ್ದೂಅವರಿಗೆ ಸರಿಯಾದ ಸಮಯಕ್ಕೆ ಬಸ್ ಒದಗಿಸಬೇಕು ಒಂದು ವೇಳೆ ಇಲ್ಲವಾದರೆ ರಸ್ತೆಗಿಳಿದು ಪ್ರತಿಭಟನೆಮಾಡುವುದು ಅನಿವಾರ್ಯ ಎಂದು ವಿದ್ಯಾರ್ಥಿಗಳ ಆಗ್ರಹ ವಾಗಿದೆ. ಬಸ್ ಸಮಸ್ಯೆ ಬಹಳ ಇದೆ. ಇದರಿಂದ ಮನೆಯ ಪೋಷಕರಿಂದ ಮತ್ತು ಶಿಕ್ಷಕರಿಂದ ಕಿರಿ ಕಿರಿ. ಬೆಳಿಗ್ಗೆ, ಮದ್ಯಾಹ್ನ, ಸಂಜೆ ಬರಬೇಕಾದರೆ ಗಂಟೆ ಗಟ್ಟಲೆ ಬಸ್ ನಿಲ್ದಾಣ ದಲ್ಲಿ ಕಾಯಬೇಕಾಗಿದೆ.ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿದಿಗಳಿಗೆ ತಿಳಿಸಿದರು ಪ್ರಯೋಜನೆ ಆಗಿಲ್ಲ. ವಿದ್ಯಾಭ್ಯಾಸ ಪಡೆಯುವುದಕ್ಕೆ ತುಂಬಾ ತೊಂದ್ರೆ ಆಗುತ್ತಿದೆ. – ಶಿವುಕುಮಾರ್, ರಾಜು, ರಾಮಾಂಜಿನಿ, ಗಣೇಶ್ ವಿದ್ಯಾರ್ಥಿಗಳು ಕುರುಗೋಡು. ನಮ್ಮ ಘಟಕದಲ್ಲಿ 41 ಬಸ್ ಇವೆ. ಹಾಗಾಗೇ ರಿಪೇರಿ ಬಂದಾಗ ಮಾಡಿಸಿ ಹಳ್ಳಿಗಳ ಮೇಲೆ ಕಳಿಸುತ್ತೇವೆ. ಸದ್ಯ ಶಾಲಾ -ಕಾಲೇಜ್ ಇಲ್ಲದಕ್ಕಾಗಿ ಕಳಿಸೋಕೆ ಆಗಿಲ್ಲ. ಇವಾಗ ಪ್ರಾರಂಭವಾಗಿದ್ದರಿಂದ ಸರಿಯಾದ ಸಮಯಕ್ಕೆ ಕಳಿಸುತ್ತೇವೆ. – ಗಂಗಾಧರ್ ಬಸ್ ಘಟಕದ ವ್ಯವಸ್ಥಾಪಕರು ಕುರುಗೋಡು