ಇದಕ್ಕಾಗಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಥವಾ ಆಯಾ ಶಾಲಾ-ಕಾಲೇಜುಗಳ ಮೂಲಕವೂ ಪಡೆಯಬಹುದು. ಈ ಪ್ರಕ್ರಿಯೆಯು ತುಂಬಾ ಸರಳವಾಗಿದ್ದು, ಅನುಸರಿಸುವ ವಿಧಾನ ಹೀಗಿದೆ.
ಎಸ್ಸೆಸ್ಸೆಲ್ಸಿವರೆಗಿನ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳ ಮೂಲಕ ಪಡೆಯುವವರು ಶಾಲೆಯ ಅಧಿಕಾರಿಗಳಿಗೆ ಶುಲ್ಕ ಸಹಿತ ಬಸ್ ಪಾಸಿಗಾಗಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಪಡೆಯಲು ಬಿಎಂಟಿಸಿ ವೆಬ್‌ಸೈಟ್ ಅಥವಾ ಇ-ಗವರ್ನಾನ್ಸ್ ಆ್ಯಪ್‌ನಲ್ಲಿ 161 ಡಯಲ್ ಮಾಡುವ ಮೂಲಕ ಮೊಬೈಲ್‌ನಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಸಬಹುದು.
ನಿಗಮದ ವೆಬ್‌ಸೈಟ್ ಪರದೆ ಮೇಲೆ ಸ್ಟೂಡೆಂಟ್ ಪಾಸ್ ಆಯ್ಕೆ ಇರುತ್ತದೆ. ಅದನ್ನು ಆಯ್ಕೆ ಮಾಡಿ, ವಿದ್ಯಾರ್ಥಿಯ ಹಾಜರಾತಿ ಸಂಖ್ಯೆ (ಎನ್‌ರೋಲ್‌ಮೆಂಟ್ ಸಂಖ್ಯೆ) ಮತ್ತು ಹೆಸರು ನಮೂದಿಸಬೇಕು. ನಂತರ ಸಂಪೂರ್ಣ
ಮಾಹಿತಿ ಬರುತ್ತದೆ. ಅಲ್ಲಿ ಪೋಷಕರ ಮೊಬೈಲ್ ಸಂಖ್ಯೆ ನೀಡಿದರೆ, ಆ ಸಂಖ್ಯೆಗೆ ಅರ್ಜಿ ಸಲ್ಲಿಕೆಯಾದ ಬಗ್ಗೆ ಸಂದೇಶ ಬರುತ್ತದೆ. ವಾರದಲ್ಲಿ ಆ ವಿದ್ಯಾರ್ಥಿಗೆ ಪಾಸು ಕೂಡ ಬರುತ್ತದೆ. ಪ್ರಸ್ತುತ ಪ್ರಾಥಮಿಕದಿಂದ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ಈ ಸೇವೆ ಲಭ್ಯ ಇದೆ ಎಂದು ನಿಗಮದ ಪ್ರಕಟಣೆ ತಿಳಿಸಿದೆ.
Advertisement