Advertisement

ಬಸ್‌ ಹಾಯ್ದು ಬಾಲಕ ಸಾವು

02:04 PM Jun 10, 2019 | Suhan S |

ಚಿಕ್ಕೋಡಿ: ಬಸ್‌ ಹಾಯ್ದು ಬಾಲಕನೋರ್ವ ಸ್ಥಳದಲ್ಲಿಯೇ ಮೃತಟ್ಟಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ರಸ್ತೆ ತಡೆ ನಿರ್ಮಿಸುವಂತೆ ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ರವಿವಾರ ನಡೆದಿದೆ.

Advertisement

ಗೋಕಾಕ ತಾಲೂಕಿನ ಕಲ್ಲೋಳಿ ಗ್ರಾಮದ ಶಾನೂರ ತುಕಾರಾಮ ಉಮರಾಣಿ (10) ಮೃತಪಟ್ಟ ಬಾಲಕ. ಈತನು ಶಾಲೆಯ ರಜೆಗೆಂದು ಅಜ್ಜಿಗೆ ಮನೆಗೆ ಬಂದಿದ್ದನು. ಎರಡು ಮೂರು ದಿನಗಳಲ್ಲಿ ಮರಳಿ ಸ್ವಗ್ರಾಮಕ್ಕೆ ತೆರಳುವಷ್ಟರಲ್ಲಿಯೇ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದು ಕುಟುಂಬಸ್ಥರಲ್ಲಿ ಹಾಗೂ ಗ್ರಾಮಸ್ಥರಲ್ಲಿ ದು:ಖ ಮಡುಗಟ್ಟಿದೆ.

ಉಮರಾಣಿ ಗ್ರಾಮದ ಮಧ್ಯೆ ಹಾದು ಹೋಗಿರುವ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗೆ ಗ್ರಾಮದ ಹತ್ತಿರ ವೇಗ ತಡೆ ಹಾಕುವಂತೆ ಹಲವು ಬಾರಿ ಮನವಿ ಮಾಡಿದರೂ ಕೂಡಾ ಸರ್ಕಾರ ನಿರ್ಲಕ್ಷ ಮಾಡಿದೆ. ಹೀಗಾಗಿ ಗ್ರಾಮದ ಬಳಿ ವಾಹನಗಳು ಅತಿಯಾದ ವೇಗದಿಂದ ಚಲಿಸುವ ಕಾರಣದಿಂದ ವಾರಕ್ಕೊಮ್ಮೆ ರಸ್ತೆ ಅಪಘಾತ ಸಂಭವಿಸಿ ಪ್ರಾಣ ಹಾನಿಯಾಗುತ್ತಿದೆ. ಆದರೂ ಸರ್ಕಾರ ವೇಗ ತಡೆ ಹಾಕದೇ ಇರುವುದು ದುರ್ದೈವದ ಸಂಗತಿಯಾಗಿದೆ ಎಂದು ಗ್ರಾಮಸ್ಥರು ರಸ್ತೆ ಬಂದ್‌ ಮಾಡಿ ಟೈಯರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸದಸ್ಯ ಪವನ ಕತ್ತಿ, ಮುಖಂಡರಾದ ಮುರಗೇಪ್ಪ ಅಡಿಸೇರಿ, ಲಕ್ಷ್ಮಣ ಪೂಜೇರಿ, ಕಲಗೌಡ ಪಾಟೀಲ, ಧನಪಾಲ ಭೀಮನಾಯಿಕ, ಸಂಜು ಜಿಡ್ಡಿಮನಿ, ಅಜಿತ್‌ ಕಾಂಬಳೆ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next