Advertisement

ಶೀಘ್ರದಲ್ಲೆ ಪ್ರತಿ ಗ್ರಾಮಕ್ಕೂ ಬಸ್‌ ಸೌಲಭ್ಯ 

10:33 AM Jul 25, 2023 | Team Udayavani |

ದೇವನಹಳ್ಳಿ: ಗ್ರಾಮೀಣ ಜನರಿಗೆ ತಾಲೂಕು ಕೇಂದ್ರದಿಂದ ವಿವಿಧ ಹಳ್ಳಿಗಳಿಗೆ ಬಸ್‌ ಸೌಲಭ್ಯ ಕಲ್ಪಿಸಿದರೆ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

Advertisement

ಪಟ್ಟಣದ ಹೊಸ ಬಸ್‌ ನಿಲ್ದಾಣದಲ್ಲಿ ದೇವನಹಳ್ಳಿ ಇಂದ ವಿಜಯಪುರ ಸುತ್ತಮುತ್ತಲಿನ ಗ್ರಾಮಗಳಿಗೆ ಬಸ್‌ ಸೌಲಭ್ಯ ಚಾಲನೆ ನೀಡಿ ಮಾತನಾಡಿದರು. ಹಲವಾರು ಗ್ರಾಮಗಳಿಂದ ಬಸ್‌ ಸೌಲಭ್ಯದ ಸಂಬಂಧ ಪಟ್ಟಂತೆ ಮನವಿ ಮಾಡಿದ್ದರು.

ಚುನಾವಣಾ ಸಂದರ್ಭದಲ್ಲಿ ಪ್ರಚಾರದ ವೇಳೆಯಲ್ಲಿ ಬಸ್‌ ಸೌಲಭ್ಯದ ಬಗ್ಗೆ ಬಗ್ಗೆ ಸಾರ್ವ ಜನಿಕರು ಮನವಿ ಮಾಡಿಕೊಂಡಿದ್ದರು. ಅದರಂತೆ ದೇವನಹಳ್ಳಿಯಿಂದ- ಗೋಖರೆ ಬಿನ್ನಮಂಗಲ ಗೇಟ್‌, ತಮ್ಮೇನಹಳ್ಳಿಗೇಟ್- ಮಟ್ಟಬಾರ್ಲಿ, ಬೊಮ್ಮನಹಳ್ಳಿಗೇಟ್- ಯಲಿಯೂಲಿ ಯೂರುಕ್ರಾಸ್ ಯಲಿಯೂರು, ಹಳಿಯೂರು, ದೊಡ್ಡತತ್ತಮಂಗಲ, ಚಿಕ್ಕತತ್ತಮಂಗಲ, ಗಡ್ಡದನಾಯಕನಹಳ್ಳಿ, ಮಂಡಿಬೆಲೆ ಈ ಸ್ಥಳಗಳಿಗೆ ಬಸ್‌ ಸೌಲಭ್ಯಕ್ಕೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾಲಿಗೆ ಮತ್ತು ಇತರೆ ಕಡೆಗಳಿಗೆ ಹಂತ ಹಂತವಾಗಿ ಬಸ್‌ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಹೇಳಿದರು.

ಸಮಗ್ರ ಅಭಿವೃದ್ಧಿಗೆ ಒತ್ತು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಮತ್ತು ದೇವನಹಳ್ಳಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಲಾಗುವುದು. ಪ್ರತಿ ಗ್ರಾಮಕ್ಕೂ ಬಸ್‌ ಸೌಲಭ್ಯ ನೀಡಿದರೆ ಗ್ರಾಮಗಳು ಅಭಿವೃದ್ಧಿಯಾಗುತ್ತದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರಿಯಾದ ಸಮಯಕ್ಕೆ ಶಾಲೆ ಕಾಲೇಜು ಗಳಿಗೆ ಹೋಗಲು ಬಸ್‌ನ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಮಯವನ್ನು ನಿಗದಿಪಡಿಸ ಲಾಗುವುದು. ರೈತರು ಹಾಗೂ ಸಾರ್ವಜನಿಕರು ನಿಗದಿತ ಸಮಯಕ್ಕೆ ಪಟ್ಟಣ ಪ್ರದೇಶಗಳಿಗೆ ಬರಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಜನಪರ ಕಾಳಜಿ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌ ಮಾತನಾಡಿ, ಮೊದಲನೆಯದಾಗಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಸಚಿವರ ಗಮನಕ್ಕೆ ತರಲಾಗಿತ್ತು. ಜನಪರ ಕಾಳಜಿಯನ್ನು ಹೊಂದಿರುವ ಸಚಿವರು ದೇವನಹಳ್ಳಿಗೆ ಸಿಕ್ಕಿದ್ದಾರೆ. ಗಡ್ಡದನಾಯಕನಹಳ್ಳಿ ಗ್ರಾಮದಲ್ಲಿ ಬಸ್‌ ವ್ಯವಸ್ಥೆಯೇ ಇರಲಿಲ್ಲ. ಇದೀಗ ಬಸ್‌ ಸಂಚಾರ ಮಾಡುತ್ತಿರುವುದು ಸಂತಸವಾಗಿದೆ. ದೈವ ಬಲವಿಲ್ಲದೆ ಏನೂ ಆಗುವುದಿಲ್ಲ. ಈ ಗ್ರಾಮದಲ್ಲಿ ಚಿಕ್ಕಮಕ್ಳಳು, ವಿದ್ಯಾರ್ಥಿಗಳು, ಸೈಕಲ್‌ ಅಥವಾ ಬೈಕ್‌ ಸವಾರರಿಗೆ ಕಾದು ಹೋಗುವ ಪರಿಸ್ಥಿತಿ ಇತ್ತು ಎಂದು ಹೇಳಿದರು.

Advertisement

ಇದೇ ಸಂದರ್ಭದಲ್ಲಿ ತಹಶೀಲ್ದಾರ್‌ ಶಿವರಾಜ್‌, ಕಾಂಗ್ರೆಸ್‌ ಮುಖಂಡರಾದ ಒಬಿಸಿ ರಾಜ್ಯ ಉಪಾಧ್ಯಕ್ಷ ಸಿ.ಜಗನ್ನಾಥ್‌, ಎಸ್‌.ಆರ್‌.ರವಿಕುಮಾರ್‌, ಗೋಪಾಲಕೃಷ್ಣ, ರಾಮಚಂದ್ರಪ್ಪ, ಶ್ರೀಧರ್‌, ಮುನಿಕೃಷ್ಣ, ವೇಣುಗೋಪಾಲ್‌, ರಮೇಶ್‌, ವೆಂಕಟಾಚಲ, ಪುರಸಭಾ ಸದಸ್ಯರು, ಕೆಎಸ್‌ಆರ್‌ಟಿಸಿ ಜಿಲ್ಲಾ ಸಂಚಾರಿ ನಿಯಂತ್ರಣಾಧಿಕಾರಿ ವಿಮವರ್ಧನ ನಾಯ್ಡು, ಡಿಟಿಒ ಮಂಜುನಾಥ, ನರಸಿಂಹರೆಡ್ಡಿ, ಡಿಪೋ ವ್ಯವಸ್ಥಾಪಕಿ ಶಿಲ್ಪ, ಕಾನೂನು ವಿಭಾಗಾಧಿಕಾರಿ ರಾಧಾ, ಸಿಬ್ಬಂದಿಗಳಾದ ಚನ್ನಣ್ಣನವರ್‌, ಮಾರ್ಗ ಅಧಿಕಾರಿ ವಾಜೀದ್‌, ಸಾರ್ವಜನಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next