Advertisement

ಮೊಬೈಲ್‌ನಲ್ಲಿ ಬ್ಯುಸಿಯಾಗಿದ್ದ ಪಾದಚಾರಿಗೆ ಬಸ್‌ ಢಿಕ್ಕಿViral Video

11:41 AM Mar 16, 2017 | Team Udayavani |

ಮಂಗಳೂರು: ಹಂಪನಕಟ್ಟೆಯ ಮುಖ್ಯ ರಸ್ತೆಯಲ್ಲಿ  ವೆನಲಾಕ್ ಆಸ್ಪತ್ರೆ ಎದುರು ಬುಧವಾರ ರಸ್ತೆಯಲ್ಲಿ ಮೊಬೈಲ್‌ ಫೋನ್‌ನಲ್ಲಿ ಮಾತನಾ ಡುತ್ತಾ ನಡೆದು ಹೋಗುತ್ತಿದ್ದ ಯುವಕನೊಬ್ಬ ಸಂಭವನೀಯ ಭೀಕರ ರಸ್ತೆ ಅಪಘಾತದಿಂದ ಕೂದಲೆಳೆಯ ಅಂತರದಲ್ಲಿ  ಪಾರಾಗಿದ್ದಾನೆ. 

Advertisement

ಬಿಹಾರ ಮೂಲದವನಾಗಿದ್ದು, ದೇರಳಕಟ್ಟೆಯಲ್ಲಿ  ಹೊಟೇಲ್‌ ಒಂದರಲ್ಲಿ ಕೆಲಸ ಮಾಡುತ್ತಿರುವ ಅಬ್ದುಲ್‌ ಹಕೀಂ (25) ಅಪಾಯದಿಂದ ಪಾರಾದ ವ್ಯಕ್ತಿ. ಆತನ ಕಾಲು ಮತ್ತು ಮೂಗಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯವೇನೂ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಳಗ್ಗೆ 10.45ರ ವೇಳೆಗೆ ಆತ ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ಹಂಪನಕಟ್ಟೆ ಸಿಗ್ನಲ್‌ ಕಡೆಯಿಂದ ಜಿಎಚ್‌ಎಸ್‌  ಕ್ರಾಸ್‌ ರೋಡ್‌ ಜಂಕ್ಷನ್‌ ಕಡೆಗೆ ರಸ್ತೆ ಮಧ್ಯದಲ್ಲಿಯೇ ನಡೆದುಕೊಂಡು ಹೋಗುತ್ತಿದ್ದಾಗ ಎದುರು ಕಡೆಯಿಂದ ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ ರಸ್ತೆ ಬದಿ ನಿಂತಿದ್ದ ಇನ್ನೊಂದು ಖಾಸಗಿ ಸರ್ವೀಸ್‌ ಬಸ್ಸನ್ನು ಓವರ್‌ ಟೇಕ್‌ ಮಾಡಿಕೊಂಡು ಬಂತು.

ಓವರ್‌ಟೇಕ್‌ ಮಾಡುವ ಭರದಲ್ಲಿ ನರ್ಮ್ ಬಸ್‌ ಚಾಲಕನು ಸುಗಮ ಸಂಚಾರಕ್ಕಾಗಿ ರಸ್ತೆಯಲ್ಲಿ ಅಳವಡಿಸಿದ್ದ ಟ್ರಾಫಿಕ್‌ ಕೋನ್‌ಗಳನ್ನು ಹೇಗೋ ತಪ್ಪಿಸಿಕೊಂಡು ಮುನ್ನುಗ್ಗಿದ್ದು, ಈ ಸಂದರ್ಭದಲ್ಲಿ ಅಬ್ದುಲ್‌ ಹಕೀಂ ಅವಧಿರಿಗೆ ಮುಖಾಮುಖೀ ಢಿಕ್ಕಿ ಹೊಡೆಯುವುದು ಸ್ವಲ್ಪದರಲ್ಲೇ ತಪ್ಪಿಹೋಯಿತು. ಬಸ್ಸಿನ ಮುಂಭಾಗ ಅಬ್ದುಲ್‌ ಹಕೀಂ ಅವರಿಗೆ ಸ್ವಲ್ಪ ಒರೆಸಿದ್ದು, ಅವರು ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದಾರೆ. ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ಈ ಅಪಘಾತದ ದೃಶ್ಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ವಾಟ್ಸ್‌ಆ್ಯಪ್‌ನಲ್ಲಿ  ವೈರಲ್‌ ಆಗಿ ಪ್ರಸಾರವಾಗಿದೆ. ಟಿ.ವಿ. ವಾಹಿನಿಗಳಲ್ಲಿಯೂ ಬಿತ್ತರವಾಗಿದೆ.  ಟ್ರಾಫಿಕ್‌ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ. 

Advertisement

ಪರಿವೆಯೇ ಇರುವುದಿಲ್ಲ: ಇಯರ್‌ ಫೋನ್‌ ಹಾಕಿಕೊಂಡು ಮತ್ತು ಮೊಬೈಲ್‌ ಫೋನ್‌ನಲ್ಲಿ ಮಾತ ನಾಡುತ್ತಾ ಪರಿವೆಯಿಲ್ಲದೆ ರಸ್ತೆ ಬದಿ ಮಾತ್ರವಲ್ಲ ರಸ್ತೆ ಮಧ್ಯೆ ಕೂಡ ಸಂಚರಿಸುವುದು ಈಗೀಗ ಒಂದು ಫ್ಯಾಶನ್‌ ಆಗಿದೆ. ಎರಡು ದಿನಗಳ ಹಿಂದೆ ಉಳ್ಳಾಲದಲ್ಲಿ ವ್ಯಕ್ತಿಯೊಬ್ಬರು ಮೊಬೈಲ್‌ ಫೋನ್‌ನಲ್ಲಿ ಮಾತನಾಡುತ್ತಾ ರೈಲು ಹಳಿಯ ಮೇಲೆ ಕುಳಿತಿದ್ದಾಗ ಹಿಂಬದಿಯಿಂದ ಬಂದ ರೈಲು ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. 

ಚಾಲಕರ ನಿರ್ಲಕ್ಷ : ಬಸ್‌ ಚಾಲಕರು ಕೂಡ ಎಲ್ಲೆಂದರಲ್ಲಿ ಮತ್ತು ನಿಗದಿತ ತಂಗುದಾಣ ಇಲ್ಲದಲ್ಲಿ ಬಸ್‌ ನಿಲ್ಲಿಸುವುದು, ನಿರ್ಲಕ್ಷ é ಮತ್ತು ಅಜಾಗ್ರತೆಯಿಂದ ಓವರ್‌ಟೇಕ್‌ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಬಸ್‌ ಚಲಾಯಿಸುವುದೂ ನಡೆಯುತ್ತಲೇ ಇವೆ. 

ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ. ವಾರದ ಹಿಂದೆ ಬಸ್‌ ಚಾಲಕ ಹಾಗೂ ನಿರ್ವಾಹಕರಿಗಾಗಿ ಎರಡು ದಿನಗಳ ತರಬೇತಿಯನ್ನು ಬಸ್‌ ಮಾಲಕರ ಸಂಘದವರೇ ನಗರದ ಪೊಲೀಸ್‌ 
ಸಭಾ ಭವನದಲ್ಲಿ  ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next