Advertisement

ಥಾಣೆ : ಮಹಿಳೆಯ ಅರೆ ಸುಟ್ಟ ಶವ ಪತ್ತೆ; ಕೊಲೆ ಕೇಸು ದಾಖಲು

12:25 PM Dec 18, 2018 | udayavani editorial |

ಥಾಣೆ, ಮಹಾರಾಷ್ಟ್ರ : ಅಪರಿಚಿತ ಮಹಿಳೆಯೋರ್ವಳ ಅರೆ ಸುಟ್ಟ ಶವ ಭಿವಂಡಿ ತಾಲೂಕಿನ ಪಿಂಪ್ಲಾಸ್‌ ಎಂಬ ಗ್ರಾಮದ ಹೊಲವೊಂದರಲ್ಲಿ  ಪತ್ತೆಯಾಗಿದೆ. ಗ್ರಾಮಸ್ಥರು ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

Advertisement

ಶವ ಕಂಡು ಬಂದ ಸ್ಥಳದಲ್ಲಿ ಬಿದ್ದಿದ್ದ ಮಹಿಳೆಯ ಅರೆಸುಟ್ಟ  ಹೇರ್‌ ಕ್ಲಿಪ್‌, ಚಪ್ಪಲಿ ಮತ್ತು ರಿಂಗ್‌ ಇತ್ಯಾದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಕೊಲೆಯೋ ಅಥವಾ ಅತ್ಯಾಚಾರ ನಡೆಸಿ ಮಾಡಲಾಗಿರುವ ಹತ್ಯೆಯೋ ಎಂಬುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. 

ಪೊಲೀಸರು ಐಪಿಸಿ ಸೆ.302ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next