Advertisement
ಗಜ್ಞಾನ್ ಯಾನೆ ಜಗು ಕೊಲೆಯಾದವನು. ಮುಳಿಹಿತ್ಲು ಜಂಕ್ಷನ್‌ನಲ್ಲಿ ಇರುವ ಜನರಲ್ ಸ್ಟೋರ್‌ನ ಮಾಲಕ ತೌಸಿಫ್ ಹುಸೈನ್ (32)ಬಂಧಿತ ಆರೋಪಿ.
ಮೃತ ಗಜ್ಞಾನ್ ಆರೋಪಿ ತೌಸಿಫ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಶನಿವಾರ ಬೆಳಗ್ಗೆ ಕ್ಷುಲ್ಲಕ ಕಾರಣಕ್ಕೆ ಗಜ್ಞಾನ್‌ನನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದ. ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ಮಧ್ಯಾಹ್ನ ಸುಮಾರು 1.30ಕ್ಕೆ ತಿಳಿಸಿದ್ದ. ಗಾಯಗೊಂಡ ಗಜ್ಞಾನನನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಅನಂತರದಲ್ಲಿ ಮಂಗಳೂರು ದಕ್ಷಿಣ ಪೊಲೀಸರು ತನಿಖೆಯನ್ನು ಆರಂಭಿಸಿ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಸಾಕ್ಷ್ಯಗಳು ಲಭ್ಯವಾಗಿದ್ದು ಇದೊಂದು ಕೊಲೆ ಪ್ರಕರಣವೆಂದು ದೃಢಪಟ್ಟಿದ್ದು ಆರೋಪಿ ತೌಸಿಫ್ ಹುಸೈನ್‌ನನ್ನು ಬಂಧಿಸಲಾಗಿದೆ.