Advertisement

ತ್ರಿವರ್ಣಗಳಲ್ಲಿ ಕಂಗೊಳಿಸಿದ ವಿಶ್ವದ ಅತೀ ಎತ್ತರದ ಬುರ್ಜಾ ಖಲೀಫಾ!

02:10 PM Jan 26, 2017 | Team Udayavani |

ಅಬುಧಾಬಿ:ಭಾರತದ 68ನೇ ಗಣರಾಜ್ಯೋತ್ಸವದ ಅಂಗವಾಗಿ, ಭಾರತ ಮತ್ತು ಯುಎಇ ನಡುವಿನ ಸಾಂಸ್ಕೃತಿಕ ಮತ್ತು ವ್ಯವಹಾರಿಕ ಸಂಬಂಧ ಗಟ್ಟಿಗೊಳಿಸುವ ನೆಲೆಯಲ್ಲಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಕಟ್ಟಡವಾಗಿರುವ ದುಬೈನ ಬುರ್ಜ್ ಖಲೀಫಾ ಬುಧವಾರ ರಾತ್ರಿಯಿಂದಲೇ ತ್ರಿವರ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಬಣ್ಣಗಳ ವಿದ್ಯುದ್ದೀಪಗಳಿಂದ ಕಂಗೊಳಿಸುವ ಮೂಲಕ ಕಣ್ಮನ ಸೆಳೆಯುತ್ತಿದೆ. 

Advertisement

ಅಬುಧಾಬಿಯ ಯುವರಾಜ ಶೇಖ್ ಮಹಮ್ಮದ್ ಬಿನ್ ಝಾಯೆದ್ ಅಲ್ ಸಹ್ಯಾನ್ ಈ ಬಾರಿಯ 68ನೇ ಗಣರಾಜ್ಯೋತ್ಸವದ ಮುಖ್ಯಅತಿಥಿಯಾಗಿ ಭಾಗವಹಿಸಿದ್ದರು.

ದುಬೈನ ಪ್ರತಿಷ್ಠಿತ ಬುರ್ಜಾ ಖಲೀಫಾ ಕಟ್ಟಡ 823 ಮೀಟರ್ ಎತ್ತರವಾಗಿದೆ. ಈ ಕಟ್ಟಡಕ್ಕೆ ಅಬುಧಾಬಿ ಮತ್ತು ಯುಎಇ ಅಧ್ಯಕ್ಷ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಹೆಸರನ್ನು ಗೌರವಾರ್ಥವಾಗಿ ಇಡಲಾಗಿದೆ. ಸಂಯುಕ್ತ ಯುಎಇಯ ಏಳು ಗಣರಾಜ್ಯಗಳಲ್ಲಿ ದುಬೈ ಒಂದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next