ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸೇರಿದ 3 ಆಸ್ತಿ ಮಂಗಳವಾರ ಹರಾಜಾಗಿದೆ. 11.58 ಕೋಟಿ ರೂ.ಗಳಿಗೆ ವಾಣಿಜ್ಯ ನಗರಿಯ ಸೈಫಿ ಬುರ್ಹಾನಿ ಟ್ರಸ್ಟ್ ಖರೀದಿಸಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಆಸ್ತಿಗಳನ್ನು ಹರಾಜಿಗೆ ಹಾಕಿತ್ತು. ಹಣ ಸಾಗಣೆ ಹಾಗೂ ವಿದೇಶ ವಿನಿಮಯ ವಂಚನೆ ಕಾಯ್ದೆ ತಡೆ ಅಡಿಯಲ್ಲಿ ದಾಖಲಿಸಿಕೊಳ್ಳಲಾದ ಪ್ರಕರಣಗಳನ್ನು ಆಧರಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ರೌನಾಕ್ ಅಫ್ರಾಜ್ ಹೊಟೇಲ್(ದೆಲ್ಲಿ ಜೈಕಾ), ಸಬನಮ್ ಗೆಸ್ಟ್ ಹೌಸ್ ಹಾಗೂ 6 ರೂಂಗಳುಳ್ಳ ದಮರಾÌಲಾದಲ್ಲಿರುವ ಕಟ್ಟಡ ಮಾರಾಟಗೊಂಡ ಆಸ್ತಿಯ ವಿವರ.
ರೌನಾಕ್ ಹೊಟೇಲ್‌ಗೆ 4.53 ಕೋಟಿ ರೂ., ಶಬನಮ್ ಗೆಸ್ಟ್‌ಹೌಸ್‌ಗೆ 3.52 ಕೋಟಿ ರೂ. ಹಾಗೂ ದಮರಾÌಲಾದಲ್ಲಿರುವ ಆರು ರೂಂಗಳ ಕಟ್ಟಡವನ್ನು 3.53 ಕೋಟಿ ರೂಪಾಯಿಗೆ ಕೊಂಡುಕೊಳ್ಳಲಾಗಿದೆ. ಹಿಂದೂ ನಾಯಕ ಸ್ವಾಮಿ ಚಕ್ರಪಾಣಿ ಭೂಗತ ಪಾತಕಿಯ ಹಸಿರು ಬಣ್ಣದ ಹ್ಯುಂಡೈ ಕಾರನ್ನು ಖರೀದಿಸಿ 2015ರಲ್ಲಿ ಅದನ್ನು ಸುಟ್ಟು ಹಾಕಿದ್ದರು.