ಬೆಂಗಳೂರು: ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ (ಎಸ್. ಪಿ.) ಮೀಸೆ ನಾಗರಾಜ್ ಮನೆಗೆ ನುಗ್ಗಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಗಳನ್ನು ದೋಚಿ ಪರಾರಿಯಾಗಿದ್ದ ರೌಡಿ ಸೇರಿದಂತೆ ನಾಲ್ವರು ಮನೆಗಳ್ಳರು ರಾಜ ಗೋಪಾಲ ನಗರ ಠಾಣೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ಲಗ್ಗೆರೆಯ ಚೌಡೇಶ್ವರಿ ನಗರದ ದೀಕ್ಷಿತ್ ಅಲಿಯಾಸ್ ದೀಕ್ಷಿ (22)ಪೈಂಟರ್ ಕಾಲೋ ನಿಯ ಅಜಯ್ ಅಲಿಯಾಸ್ ಕ್ಯಾಟ್ (22), ಲವಕುಶನಗರದ ಮಣಿಕಂಠ ಅಲಿಯಾಸ್ ಮಣಿ (23) ಹಾಗೂ ಕುಣಿಗಲ್ ತಾಲೂಕು ಅಮೃ ತೂರಿನ ಕೀರ್ತಿ (30) ಬಂಧಿತರು.
ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿಯ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಬಂಧಿತರಿಂದ 28.50 ಲಕ್ಷ ರೂ.ಮೌಲ್ಯದ 470 ಗ್ರಾಂ ಚಿನ್ನ, 500 ಗ್ರಾಂ ಬೆಳ್ಳಿ, ದ್ವಿ-ಚಕ್ರ ವಾಹನ, 50 ಸಾವಿರ ನಗದು ಜಪ್ತಿ ಮಾಡಲಾಗಿದೆ.
ಮಾ.29ರಂದು ರಾಜಗೋಪಾಲನಗರ ಠಾಣೆ ಪೊಲೀಸರು ಗಸ್ತಿನಲ್ಲಿದ್ದಾಗ ಲಗ್ಗೆರೆ ಮುಖ್ಯರಸ್ತೆ ಯಲ್ಲಿ ಜ್ಯುವೆಲ್ಲರಿ ಅಂಗಡಿ ಮುಂಭಾಗ ಬಂಧಿ ತರ ಪೈಕಿ ಇಬ್ಬರು ಆರೋಪಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿದರು. ಅವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಓರ್ವನ ಪ್ಯಾಂಟಿ ನ ಜೇಬಿನಲ್ಲಿ ಒಂದು ಜೊತೆ ಬೆಳ್ಳಿಯ ಕಾಲುಚೈನು, ಮತ್ತೂಬ್ಬನ ಜೇಬಿನಲ್ಲಿ ಬೆಳ್ಳಿಯ ಉಡು ದಾರವಿತ್ತು. ಇದು ಯಾರದ್ದು ಎಂದು ಕೇಳಿದಾಗ ಗೊಂದಲದ ಹೇಳಿಕೆ ಕೊಟ್ಟಿದ್ದರು. ಗಸ್ತಿನ ಪೊಲೀಸರು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ, ಅವರುಗಳು ತಮ್ಮ ಸಹಚರ ರಾದ ಬಂಧಿತ ಮತ್ತಿಬ್ಬರು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಉತ್ತರಹಳ್ಳಿ ಬಿಹೆಚ್ ಸಿಎಸ್ ಲೇಔಟ್‌ಲ್ಲಿರುವ ಮನೆಯೊಂದರಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಹಾಗೂ ಹಣವನ್ನು ಕಳುವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದರು. ರಾಜಗೋಪಾಲ ನಗರ ಠಾಣೆ ಪೊಲೀಸರು ಈ ಬಗ್ಗೆ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರ ಬಳಿ ಮಾಹಿತಿ ಹಂಚಿಕೊಂಡಿದ್ದರು.
ಆಗ ಇದು ಉತ್ತರಹಳ್ಳಿಯ ಬಿಎಚ್‌ಸಿ.ಎಸ್ ಲೇಔಟ್‌ನ ನಿವೃತ್ತ ಎಸ್ .ಪಿ.ಮೀಸೆ ನಾಗರಾಜ್ ಅವರ ಮನೆಯಲ್ಲಿ ಚಿನ್ನ-ಬೆಳ್ಳಿ ಒಡವೆಗಳು ಕಳ್ಳತನ ಮಾಡಿರುವುದು ದೃಢಪಟ್ಟಿತ್ತು. ಈ ಬಗ್ಗೆ ಈ ಹಿಂದೆಯೇ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.