Advertisement

Burden: ನೈಸರ್ಗಿಕ ಅನಿಲ ಪೂರೈಕೆ ಕೊರತೆ: ಪ್ರತಿ ಕೆ.ಜಿ. ಸಿಎನ್‌ಜಿಗೆ 6 ರೂ. ದರ ಹೆಚ್ಚಳ?

11:34 PM Oct 20, 2024 | Team Udayavani |

ಹೊಸದಿಲ್ಲಿ: ದೇಶಿಯವಾಗಿ ಉತ್ಪಾದನೆಗೊಳ್ಳಲಿರುವ ನೈಸರ್ಗಿಕ ಅನಿಲ ಪೂರೈಕೆ ಪ್ರಮಾಣವನ್ನು ಶೇ.20ರಷ್ಟು ಸ್ಥಗಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ಮಾಡಿದೆ. ಇದರಿಂದಾಗಿ ನವದೆಹಲಿಯಲ್ಲಿ ಸಿಎನ್‌ಜಿ ದರದಲ್ಲಿ ಪ್ರತಿ ಕೆ.ಜಿ.ಗೆ 4 ರೂ.ಗಳಿಂದ 6 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ.

Advertisement

ಕೇಂದ್ರ ಸರ್ಕಾರ ಸಿಎನ್‌ಜಿಗೆ ಶೇ.14ರಷ್ಟು ಅಬಕಾರಿ ಸುಂಕ ವಿಧಿಸುತ್ತದೆ. ಅದರ ಪ್ರಮಾಣವನ್ನು ಇಳಿಕೆ ಮಾಡಿದರೆ ಗ್ರಾಹಕರಿಗೆ ಉಂಟಾಗಲಿರುವ ದರ ಏರಿಕೆಯ ಹೊರೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ನೈಸರ್ಗಿಕ ಕಾರಣಗಳಿಂದಾಗಿ ಅನಿಲ ಉತ್ಪಾದನೆ ಶೇ. 5ರಷ್ಟು ಕುಸಿತ ಕಾಣುತ್ತಿದೆ.ಇದರಿಂದಾಗಿ ನವದೆಹಲಿಯಲ್ಲಿರುವ ವ್ಯಾಪಾರಿಗಳಿಗೆ ಪೂರೈಕೆ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದೆ ಎನ್ನಲಾಗಿದೆ. ಸಿಎನ್‌ಜಿ ಕೊರತೆ ನೀಗಿಸಲು ಕಂಪನಿಗಳು ವಿದೇಶದಿಂದ ಅದನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next