Advertisement

 ಬಂಟರವಾಣಿ ಅಂತರ್‌ ಶಾಲಾ-ಕಾಲೇಜು ಪ್ರತಿಭಾ ಸ್ಪರ್ಧೆ

04:19 PM Feb 15, 2019 | |

ಮುಂಬಯಿ: ಬಂಟರ ಸಂಘದ ಮುಖವಾಣಿ ಬಂಟರವಾಣಿಯು ಕಳೆದ 42 ವರ್ಷಗಳಿಂದ ನಿರಂತರವಾಗಿ ಸಂಘದ ಕಾರ್ಯಚಟುವಟಿಕೆಗಳನ್ನು ಸಮಾಜ ಬಾಂಧವರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿದೆ. ಕನ್ನಡ ಭಾಷಾ ಪ್ರೇಮವನ್ನು ಉಳಿಸಿ-ಬೆಳೆಸುವುದರ ಜೊತೆಗೆ ತುಳು-ಕನ್ನಡ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ ಎಂದು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ನುಡಿದರು.

Advertisement

ಫೆ. 9 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಬಂಟರವಾಣಿ ಕನ್ನಡ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರತಿಭಾ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ, ಅಧಕ್ಷತೆ ವಹಿಸಿ ಮಾತನಾಡಿದ ಅವರು, ಬಂಟರವಾಣಿ ಪ್ರಕಟನಾ ಆರಂಭದ 42 ವರ್ಷಗಳಿಂದ ಕನ್ನಡ ಶಾಲೆ-ಕಾಲೇಜುಗಳಿಗಾಗಿ ಪ್ರತಿಭಾ ಸ್ಪರ್ಧೆಯನ್ನು ನಡೆಸುತ್ತಿದ್ದು, ಇದೀಗ ಬಂಟರವಾಣಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ ಕಳೆದ ಮೂರು ವರ್ಷಗಳಿಂದ ಚಿಣ್ಣರಿಗಗಾಗಿ ಚಿಣ್ಣರ ಚಿಲಿಪಿಲಿ ಪ್ರತಿಭಾನ್ವೇಷಣೆ ಆಯೋಜಿಸಲಾಗುತ್ತಿದೆ. ವಿದ್ಯಾರ್ಥಿಗಳು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪಾತ್ರವಹಿಸಬೇಕು. ಜನ್ಮ ನೀಡಿದ ಮಾತಾಪಿತಾರನ್ನು ವಿದ್ಯೆ ನೀಡಿದ ಗುರುಗಳನ್ನು ಪ್ರೀತಿಸಿ, ಗೌರವಿಸುವ ಜೊತೆಗೆ ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದರು.

ಇದೇ ಸಂದರ್ಭದಲ್ಲಿ ಸಮಾರಂಭದ ಅಧ್ಯಕ್ಷ ಹಾಗೂ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಮುಖ್ಯ ಅತಿಥಿ, ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್‌. ಸಿ. ಶೆಟ್ಟಿ, ಅತಿಥಿಗಳಾದ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಂಪಾದಕ ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು ಅವರು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಿದರು.

ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ವಿಜೇತರ ಯಾದಿಯನ್ನು ಓದಿದರು. ತೀರ್ಪುಗಾರರಾಗಿ ಸಹಕರಿಸಿದ ಕರುಣಾಕರ ಶೆಟ್ಟಿ, ಲತಾ ಸಂತೋಷ್‌ ಶೆಟ್ಟಿ, ಪ್ರಭಾ ಕೋಡು ಭೋಜ ಶೆಟ್ಟಿ, ಪದ್ಮನಾಭ ಸಸಿಹಿತ್ಲು ಅವರನ್ನು ಗೌರವಿಸಲಾಯಿತು. ಶಾಲಾ ಪ್ರತಿಭಾ ಸ್ಪರ್ಧೆಯನ್ನು ನಾರಾಯಣ ಶೆಟ್ಟಿ ನಂದಳಿಕೆ ಮತ್ತು ಹರಿಣಿ ಎಂ. ಶೆಟ್ಟಿ, ಕಾಲೇಜು ಪ್ರತಿಭಾ ಸ್ಪರ್ಧೆಯನ್ನು ಡಾ| ಸುನೀತಾ ಎಂ. ಶೆಟ್ಟಿ ಮತ್ತು ಪ್ರಶಾಂತಿ ಡಿ. ಶೆಟ್ಟಿ ಅವರು ಸಂಯೋಜಿಸಿದ್ದರು.

ಆರಂಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಸ್ವಾಗತಿಸಿದರು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ಕಾರ್ಯಕ್ರಮ ನಿರ್ವಹಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ವಂದಿಸಿದರು. ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ, ಬಂಟರವಾಣಿಯ ಸಂಪಾದಕ ಪ್ರೇಮನಾಥ್‌ ಬಿ. ಶೆಟ್ಟಿ ಮುಂಡ್ಕೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Advertisement

ಸ್ಪರ್ಧಾ ಫಲಿತಾಂಶ :
ಅಂತರ್‌ ಶಾಲಾ ವಿಭಾಗದ ಭಾಷಣ ಸ್ಪರ್ಧೆ ಪ್ರಥಮ ರುಚಿತಾ ಪೂಜಾರಿ ವಿಪಿಎಂ ಶಾಲೆ ಮುಲುಂಡ್‌, ದ್ವಿತೀಯ ಐಶ್ವರ್ಯಾ ಆರ್‌. ಪೂಜಾರಿ ಗುರುನಾರಾಯಣ ರಾತ್ರಿಶಾಲೆ, ತೃತೀಯ ಪ್ರೀತಿ ಶೆಟ್ಟಿ ವಿಪಿಎಂ ಶಾಲೆ ಮುಲುಂಡ್‌, ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ದಿವ್ಯಾ ಡಿ. ಚವಾಣ್‌ ಗುರುನಾರಾಯಣ ರಾತ್ರಿಶಾಲೆ, ದ್ವಿತೀಯ ಯಶಸ್ವಿನಿ ಚೆಂಬೂರು ಕರ್ನಾಟಕ ಹೈಸ್ಕೂಲ್‌, ತೃತೀಯ ಸಹನಾ ಪಾಟೀಲ್‌ ಮಂಜುನಾಥ ವಿದ್ಯಾಲಯ ಡೊಂಬಿವಲಿ ಬಹುಮಾನ ಪಡೆದರು. ಬಂಟರ ಸಂಘ ಸುವರ್ಣ ಮಹೋತ್ಸವ ಚಲಿತ ಫಲಕ  ಪ್ರಥಮ ಗುರುನಾರಾಯಣ ರಾತ್ರಿಶಾಲೆ, ದ್ವಿತೀಯ ಲತಾ ಪಿ. ಶೆಟ್ಟಿ ಚಲಿತ ಫಲಕ ವಿದ್ಯಾಪ್ರಸಾರಕ ಮಂಡಳಿ ಮುಲುಂಡ್‌, ತೃತೀಯ ಶಾಂತಾ ವಿ. ಶೆಟ್ಟಿ ಚಲಿತ ಫಲಕ ಮಂಜುನಾಥ ವಿದ್ಯಾಲಯ ಹಾಗೂ ಡಾ| ಸುನೀತಾ ಎಂ. ಶೆಟ್ಟಿ ಚಲಿತ ಫಲಕ ಭಾಷಣ ಸ್ಫರ್ಧೆಯಲ್ಲಿ ವಿದ್ಯಾಪ್ರಸಾರಕ ಮಂಡಳಿ ಪಡೆಯಿತು.
ಅಂತರ್‌ಕಾಲೇಜು ಪ್ರತಿಭಾ ಸ್ಪರ್ಧೆಯ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸೋನಿ ಗೌಡ ವಿಪಿಎಂ ಜೂನಿಯರ್‌ ಕಾಲೇಜು,  ದ್ವಿತೀಯ ವಿವೇಕ್‌ ಶೆಟ್ಟಿ ಅಣ್ಣಲೀಲಾ ಪದವಿ ಕಾಲೇಜು ಬಂಟರ ಸಂಘ, ತೃತೀಯ ವಿದ್ಯಾರಾಣಿ ವಿಪಿಎಂ ಜ್ಯೂನಿಯರ್‌ ಕಾಲೇಜು, ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಕುನಾಲ್‌ ಕರ್ಕೇರ ಅಣ್ಣಲೀಲಾ ಪದವಿ ಕಾಲೇಜು ಬಂಟರ ಸಂಘ, ದ್ವಿತೀಯ ರಂಜಿತಾ ಗೌಡ ವಿಪಿಎಂ ಜ್ಯೂನಿಯರ್‌ ಕಾಲೇಜು, ತೃತೀಯ ಅನ್ವಿತಾ ಸಫಲಿಗ ವಿಪಿಎಂ ಜ್ಯೂನಿಯನ್‌ ಕಾಲೇಜು ಮುಲುಂಡ್‌ ಬಹುಮಾನ ಡೆದರು.

ಸಮೂಹ ಗಾಯನ ಪ್ರಥಮ ಕಾರ್ತಿಕ್‌ ಶೆಟ್ಟಿ ಮತ್ತು ತಂಡ ಆರತಿ ಶಶಿಕಿರಣ್‌ ಶೆಟ್ಟಿ ಕಾಲೇಜು ಬಂಟರ ಸಂಘ, ದ್ವಿತೀಯ ಪವಿತ್ರಾ ಆಚಾರ್ಯ ತಂಡ ವಿಪಿಎಂ ಜೂನಿಯರ್‌ ಕಾಲೇಜು ಮುಲುಂಡ್‌, ತೃತೀಯ ಪ್ರತಿಮಾ ಚಂದನ್‌ ಮಾಡಾ ವಿಪಿಎಂ ಜ್ಯೂನಿಯರ್‌ ಕಾಲೇಜು ಅವರು ಬಹುಮಾನ ಪಡೆದರು. ಬಂಟರ ಸಂಘ ಸುವರ್ಣ ಚಲಿತ ಫಲಕವನ್ನು ವಿಪಿಎಂ ಜ್ಯೂನಿಯರ್‌ ಕಾಲೇಜು ಪ್ರಥಮ, ದ್ವಿತೀಯ ಸರೋಜಿನಿ ಶೆಟ್ಟಿ ಚಲಿತ ಫಲಕವನ್ನು ಅಣ್ಣಲೀಲಾ ಪದವಿ ಕಾಲೇಜು ಬಂಟರ ಸಂಘ ಪಡೆಯಿತು.
 

Advertisement

Udayavani is now on Telegram. Click here to join our channel and stay updated with the latest news.

Next