ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿ ಹಾಗೂ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಜಂಟಿ ಆಶ್ರಯದಲ್ಲಿ ಫೆ. 3 ರಂದು ಸಂಜೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ ಬಂಟರವಾಣಿ ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ಗುರುನಾರಾಯಣ ರಾತ್ರಿಶಾಲೆ ಪ್ರಥಮ ಪ್ರಶಸ್ತಿಗೆ ಭಾಜನವಾಯಿತು.
ಪ್ರಥಮ ರನ್ನರ್ ಅಪ್ ಲತಾ ಪಿ. ಶೆಟ್ಟಿ ಚಲಿತ ಫಲಕವನ್ನು ಡೊಂಬಿವಲಿಯ ಮಂಜುನಾಥ ವಿದ್ಯಾಲಯ ಪಡೆಯಿತು. ದ್ವಿತೀಯ ರನ್ನರ್ ಅಪ್ ಶಾಂತಾ ವಿ. ಶೆಟ್ಟಿ ಚಲಿತ ಫಲಕವನ್ನು ಥಾಣೆ ನವೋದಯ ಹೈಸ್ಕೂಲ್ ಪಡೆಯಿತು. ಸುನೀತಾ ಶೆಟ್ಟಿ ಚಲಿತ ಫಲಕವನ್ನು ಮುಲುಂಡ್ ವಿದ್ಯಾಪ್ರಸಾರಕ ಹೈಸ್ಕೂಲ್ ಪಡೆಯಿತು. ಕಾಲೇಜು ವಿಭಾಗದ ಭಾಷಣ ಸ್ಪರ್ಧೆಯಲ್ಲಿ ವಿಪಿಎಂ ಪದವಿ ಕಾಲೇಜಿನ ವಿದ್ಯಾ ಆರ್. ಗೌಡ ಪ್ರಥಮ, ಜ್ಯೋತಿ ವಿ. ಶಿರೋಲಿ ದ್ವಿತೀಯ, ಬಂಟರ ಸಂಘ ಅಣ್ಣಾಲೀಲಾ ಕಾಲೇಜಿನ ಸುಶ್ಮಿತಾ ಗೌಡ ತೃತೀಯ, ಸಮೂಹ ಗೀತೆಯಲ್ಲಿ ವಿಪಿಎಂ ಕಾಲೇಜಿನ ನಿಧಿ ಗೌಡ ಮತ್ತು ಬಳಗ ಪ್ರಥಮ, ಪೂಜಾ ಬೋಯಿ ಮತ್ತು ಬಳಗ ದ್ವಿತೀಯ, ಬಂಟರ ಸಂಘ ಅಣ್ಣಾ ಲೀಲಾ ಕಾಲೇಜಿನ ಸನತ್ ಶೆಟ್ಟಿ ಮತ್ತು ಬಳಗ ತೃತೀಯ ಬಹುಮಾನ ಪಡೆಯಿತು.
ತುಳುಗೀತೆ ಸ್ಪರ್ಧೆಯಲ್ಲಿ ವಿಪಿಎಂ ಕಾಲೇಜಿನ ನಿಧಿ ಗೌಡ ಪ್ರಥಮ, ಬಂಟರ ಸಂಘ ಅಣ್ಣಾ ಲೀಲಾ ಕಾಲೇಜಿನ ಸನತ್ ಶೆಟ್ಟಿ ದ್ವಿತೀಯ, ಎಚ್. ಕೆ. ಕಾಲೇಜಿನ ಸಾಕ್ಷಾ ಶೆಟ್ಟಿ ತೃತೀಯ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ವಿಪಿಎಂ ಕಾಲೇಜಿನ ದಿವ್ಯಾ ಆರ್. ಗೌಡ ಪ್ರಥಮ, ಅಣ್ಣಾ ಲೀಲಾ ಕಾಲೇಜಿನ ಪ್ರವೀಣ್ ಕೋಟ್ಯಾನ್ ದ್ವಿತೀಯ, ಬಂಟರ ಸಂಘ ಆರತಿ ಶಶಿಕಿರಣ್ ಶೆಟ್ಟಿ ಕಾಲೇಜಿನ ಪೂಜಾ ಪೂಜಾರಿ ತೃತೀಯ ಬಹುಮಾನ ಗಳಿಸಿದರು. ಬಂಟರ ಸಂಘ ಸುವರ್ಣ ಹಬ್ಬ ಚಲಿತ ಫಲಕವನ್ನು ವಿದ್ಯಾಪ್ರಸಾರಕ ಜ್ಯೂನಿಯರ್ ಕಾಲೇಜು ಪಡೆದರೆ, ಸರೋಜಿನಿ ಜೆ. ಶೆಟ್ಟಿ ಚಲಿತ ಫಲಕವನ್ನು ಬಂಟರ ಸಂಘ ಅಣ್ಣಾ ಲೀಲಾ ಕಾಲೇಜು ಪಡೆಯಿತು.
ಶಾಲಾ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಡಿವೈನ್ ಚೈಲ್ಡ್ ಶಾಲೆಯ ಜೀವಿಕಾ ಶೆಟ್ಟಿ ಪ್ರಥಮ, ವಿಪಿಎಂ ಶಾಲೆಯ ಪ್ರೀತಿ ಶೆಟ್ಟಿ ದ್ವಿತೀಯ, ನವೋದಯ ಹೈಸ್ಕೂಲ್‌ನ ಶ್ರಾವ್ಯಾ ಶೆಟ್ಟಿ ತೃತೀಯ, ಭಾವಗೀತೆ ಸ್ಪರ್ಧೆಯಲ್ಲಿ ನವೋದಯ ಶಾಲೆಯ ತನು ಶೆಟ್ಟಿ ಪ್ರಥಮ, ಮಂಜುನಾಥ ವಿದ್ಯಾಲಯ ಡೊಂಬಿವಲಿಯ ಆತ್ಮಿಕಾ ರೈ ದ್ವಿತೀಯ, ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಶಾಲೆಯ ಪ್ರಿಯಾಂಕಾ ತೃತೀಯ ಬಹುಮಾನ ಪಡೆದರು. ಸಮೂಹ ಗೀತೆ ಸ್ಪರ್ಧೆಯಲ್ಲಿ ಗುರುನಾರಾಯಣ ರಾತ್ರಿಶಾಲೆಯ ದಿವ್ಯಾ ಡಿ. ಬಳಗ ಪ್ರಥಮ, ಮಂಜುನಾಥ ವಿದ್ಯಾಲಯದ ಅಶಿಕಾ ರೈ ಮತ್ತು ಬಳಗ ದ್ವಿತೀಯ, ಎಸ್‌ಎಂ ಶೆಟ್ಟಿ ಶಾಲೆಯ ದಶಿನಾ ಶೆಟ್ಟಿ ಮತ್ತು ಬಳಗ ತೃತೀಯ, ಛದ್ಮವೇಷ ಸ್ಪರ್ಧೆಯಲ್ಲಿ ಗುರುನಾರಾಯಣ ರಾತ್ರಿಶಾಲೆಯ ಆಶ್ಮಾ ಕೆ. ಶೆಟ್ಟಿ ಪ್ರಥಮ, ನವೋದಯ ಶಾಲೆಯ ಅಶ್ಮಿತಾ ಶೆಟ್ಟಿ ದ್ವಿತೀಯ ಹಾಗೂ ನಿತ್ಯಾನಂದ ರಾತ್ರಿಶಾಲೆಯ ಅಪ್ಪಾರಾವ್ ಅರ್ಕಾ ತೃತೀಯ ಬಹುಮಾನವನ್ನು ಗಳಿಸಿದರು.
ಬಂಟರ ಸಂಘ 9 ಪ್ರಾದೇಶಿಕ ಸಮಿತಿಗಳಿಗೆ ಆಯೋಜಿಸಲಾಗಿದ್ದ ಸಮೂಹ ಗೀತೆ ಸ್ಪರ್ಧೆಯಲ್ಲಿ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಪ್ರಥಮ, ಜೋಗೇಶ್ವರಿ-ಬಾಂದ್ರಾ ಪ್ರಾದೇಶಿಕ ಸಮಿತಿ ದ್ವಿತೀಯ, ಡೊಂಬಿವಲಿ ಪ್ರಾದೇಶಿಕ ಸಮಿತಿ ತೃತೀಯ ಬಹುಮಾನ ಗಳಿಸಿತು. ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರ ಅಧ್ಯಕ್ಷತೆಯಲ್ಲಿ ಸಂಘದ ಸಂಚಾಲಕತ್ವದಲ್ಲಿರುವ ರಾತ್ರಿ ಶಾಲೆಗಳ ವಾರ್ಷಿಕೋತ್ಸವದ ಸಮಾರೋಪ ಸಮಾರಂಭದಲ್ಲಿ ಗಣ್ಯರು ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನಿಸಿ ಗೌರವಿಸಿದರು.
ಮುಖ್ಯ ಅತಿಥಿಯಾಗಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಗೌರವ ಅತಿಥಿಗಳಾಗಿ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ, ಬಂಟರ ಸಂಘ ಮುಂಬಯಿ ವಿಶ್ವಸ್ತ ಕರ್ನಿರೆ ವಿಶ್ವನಾಥ ಶೆಟ್ಟಿ, ರೇಡಿಯಂಟ್ ಮೆಟಲ್ಸ್ ಆ್ಯಂಡ್ ಅಲಾಯ್ಸ ಪ್ರೈ.ಲಿ. ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಅಡ್ವೊಕೇಟ್ ಬಿ.ಬಿ. ಶೆಟ್ಟಿ ಉಪಸ್ಥಿತರಿದ್ದರು.
ಬಂಟರವಾಣಿಯ ಮಾಜಿ ಗೌರವ ಪ್ರಧಾನ ಸಂಪಾದಕ ರತ್ನಾಕರ ಆರ್. ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ, ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಪ್ರೇಮನಾಥ ಶೆಟ್ಟಿ ಮುಂಡ್ಕೂರು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಉಪಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ವೈ. ಶೆಟ್ಟಿ, ಕೋಶಾಧಿಕಾರಿ ಸುರೇಶ್ ಬಿ. ಶೆಟ್ಟಿ ಮರಾಠ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ, ಶಾಲಾ ಮೇಲ್ವಿಚಾರಕ ಸಂಜೀವ ಎಂ. ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ: ಪ್ರೇಮನಾಥ ಮುಂಡ್ಕೂರು