Advertisement
ಮಾ. 23ರಂದು ವಸಾಯಿ ಸಾಯಿ ನಗರ ರಂಗಮಂಚಮದಲ್ಲಿ ಬಂಟರ ಸಂಘ ವಸಾಯಿ-ಡಹಾಣೂ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಸಮಿತಿಗಳು ಆಯಾಯ ಪರಿಸರದಲ್ಲಿ ಸಮಾಜ ಬಾಂಧವರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕು ಎಂದು ನುಡಿದರು.
Related Articles
ವೇದಿಕೆಯಲ್ಲಿ ಉಪಸ್ಥಿತರಿದ್ದ ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಶೆಟ್ಟಿ ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಸಫಲತೆ ಕಂಡವರು. ಸಮಾಜದಲ್ಲಿ ನಾವು ವ್ಯಕ್ತಿಗಳನ್ನು ಉಡುಗೆ – ತೊಡುಗೆಯಿಂದ ತುಲನೆ ಮಾಡಬಾರದು. ನನ್ನ ಬದುಕಿನಲ್ಲಿ ಬಹಳಷ್ಟು ಕಷ್ಟಗಳನ್ನು ಅನುಭವಿಸಿದ್ದೇನೆ. ಒಂದು ಕಡೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದರೆ, ಇನ್ನೊಂದೆಡೆ ದೇವರು ಅದಕ್ಕೆ ಪ್ರತಿಫಲ ನೀಡುತ್ತಾನೆ. ಇದು ನನ್ನ ಅನುಭವ. ಸಂಘದಲ್ಲಿ ಬಹಳಷ್ಟು ಅನುದಾನ ನೀಡುವ ಯೋಜನೆಗಳಿದ್ದು, ಯಾರಿಗೆ ಇದರ ಅಗತ್ಯವಿದೆಯೋ ಅವರು ಅದನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
Advertisement
ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಿಭಾಗದ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಇವರು ಮಾತನಾಡಿ, ಬಂಟರ ಸಂಘ ಸಮಾಜ ಬಾಂಧವರ ಆಶೋತ್ತರಗಳಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಪ್ರಾದೇಶಿಕ ಸಮಿತಿಗಳ ಎಲ್ಲಾ ಸದಸ್ಯರು ಇದನ್ನು ಸಮಾಜ ಬಾಂಧವರಿಗೆ ತಲುಪಿಸಬೇಕು. ಬಹಳ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದು, ಮಹಿಳೆಯರ ಸಂಘಟನಾ ಶಕ್ತಿಯನ್ನು ತೋರಿಸುತ್ತದೆ. ಸಂಘದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕು ಎಂದು ನುಡಿದರು.
ವೇದಿಕೆಯಲ್ಲಿ ಚಂದ್ರಿಕಾ ಐಕಳ ಹರೀಶ್ ಶೆಟ್ಟಿ, ಸ್ಥಳೀಯ ಸಮಾಜ ಸೇವಕಿ ರೂಪಾಲಿ ರೂಪೇಶ್ ಜಾಧವ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಶೆಟ್ಟಿ, ಮಹಿಳಾ ವಿಭಾಗದ ಜೊತೆ ಕೋಶಾಧಿಕಾರಿ ರತ್ನಾ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳಾ ಎ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರೀತ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಾ ಅಶೋಕ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶಶಿಕಲಾ ಶೆಟ್ಟಿ, ಕಾರ್ಯದರ್ಶಿ ಉಮಾ ಎಸ್. ಶೆಟ್ಟಿ, ಕೋಶಾಧಿಕಾರಿ ವೀಣಾ ಶೆಟ್ಟಿ, ಜತೆ ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಜತೆ ಕೋಶಾಧಿಕಾರಿ ಸುಜಾತಾ ಶೆಟ್ಟಿ, ಸಲಹೆಗಾರ ಹರೀಶ್ ಶೆಟ್ಟಿ ಗುರ್ಮೆ, ಸಲಹೆಗಾರ್ತಿ ಉಷಾ ಎಸ್. ಶೆಟ್ಟಿ ಕರ್ನಿರೆ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸದಸ್ಯೆ ಶಶಿಕಲಾ ಶಶಿಧರ ಶೆಟ್ಟಿ, ರೂಪಾ ಜಯಂತ್ ಪಕ್ಕಳ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಸಮ್ಮಾನಿತರು ಸಂದಭೋìಚಿತವಾಗಿ ಮಾತನಾಡಿದರು. ಜಯಾ ಎ. ಶೆಟ್ಟಿ ಸ್ವಾಗತಿಸಿದರು. ಮಮತಾ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮ ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ಕಾರ್ಯಕ್ರಮ ನಿರ್ವಹಿಸಿದರು. ವಿಜಯ ಶೆಟ್ಟಿ ಸಹಕರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸಮಿತಿಯ ಮಹಿಳಾ ವಿಭಾಗದವರಿಂದ ವಿವಿಧ ವಿನೋದಾವಳಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರಿಂದ ಮೋಕೆ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು. ಸಮಾರಂಭದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಪರಿಸರದ ಸಮಾಜ ಬಾಂಧವರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ನಮಗೆ ಜನ್ಮ ನೀಡಿದವಳು ತಾಯಿ. ನಮ್ಮನ್ನು ರಕ್ಷಿಸುವವಳು ಭೂಮಿತಾಯಿ. ಮನೆಯ ಜವಾಬ್ದಾರಿ ವಹಿಸಿಕೊಂಡು ಪತಿ, ಮಕ್ಕಳ, ಪರಿವಾರವನ್ನು ಸಲಹುವವಳು ಹೆಣ್ಣು. ಪ್ರತೀ ಪುರುಷನ ಶಕ್ತಿಯ ಹಿಂದೆ ನಾರಿಯ ಶಕ್ತಿಯಿಲ್ಲದಿದ್ದರೆ ಪ್ರಯೋಜನವಿಲ್ಲ. ಸಮಾಜದ ರಥವನ್ನು ಎಳೆಯವವಳು ನಾರಿ. ನನ್ನ ಸಾಮಾಜಿಕ ಚಟುವಟಿಕೆಗಳ ಹಿಂದೆ ಸ್ಫೂರ್ತಿಯ ಸೆಲೆಯಾದವಳು ನನ್ನ ಪತ್ನಿ. ಸಮಾಜದ ಕೆಲಸ ನಾನು ಮಾಡಿದರೆ, ಮನೆಯ ವ್ಯವಸ್ಥೆಯನ್ನು ನನ್ನ ಪತ್ನಿ ನೋಡಿಕೊಳ್ಳುತ್ತಾಳೆ. ಆದ್ದರಿಂದ ನನಗೆ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತದೆ. ವಸಾಯಿ ಪರಿಸರದಲ್ಲಿ ಯಾವುದೇ ಕಾರ್ಯಕ್ರಮ ನಡೆಸಿದರೂ ಎಲ್ಲಾ ಜಾತಿಯವರು ಒಗ್ಗಟ್ಟಿನಿಂದ ಸಹಕಾರ ನೀಡುತ್ತಾರೆ. ಎಲ್ಲಾ ಸಮಾಜಕ್ಕೂ ಗೌರವ ನೀಡುವ ಅಭಿಮಾನವನ್ನು ಬೆಳೆಸಿಕೊಳ್ಳೋಣ.– ಐಕಳ ಹರೀಶ್,ಅಧ್ಯಕ್ಷರು, ವಿಶ್ವ ಬಂಟರ ಸಂಘಗಳ ಒಕ್ಕೂಟ ಸಮಾಜವನ್ನು ಬೆಳೆಸೋಣ
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್. ಪಕ್ಕಳ ಅವರು ಮಾತನಾಡಿ, ಪ್ರಾದೇಶಿಕ ಸಮಿತಿ ಇಷ್ಟೊಂದು ರೀತಿಯಲ್ಲಿ ಬಲಿಷ್ಠಗೊಳ್ಳಲು ಮಹಿಳಾ ವಿಭಾಗದ ವರು ಉತ್ತಮ ರೀತಿಯಲ್ಲಿ ಸೇವಾ ನಿರತರಾಗಿ ರುವುದೇ ಕಾರಣವಾಗಿದೆ. ಸಂಘದ ಪ್ರತೀ ಕಾರ್ಯಕ್ರಮಗಳಲ್ಲೂ ಈ ಸಮಿತಿ ಭಾಗವಹಿಸಿ ಜನ ಮೆಚ್ಚುಗೆಗಳಿಸುವಂತೆ ಸಾಧನೆಗೈದಿದೆ. ನಾವೆಲ್ಲರು ಒಗ್ಗಟ್ಟಿನಿಂದ ಸಮಾಜವನ್ನು ಬೆಳೆಸೋಣ ಎಂದರು.