Advertisement

ಬಂಟರ ಸಂಘ ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗೆ ಶೇ. 100 ಫಲಿತಾಂಶ

12:37 PM May 29, 2019 | Vishnu Das |

ಮುಂಬಯಿ: 2018-19ನೇ ಶೈಕ್ಷಣಿಕ ಸಾಲಿನ ಎಚ್‌ಎಸ್‌ಸಿ ಫಲಿತಾಂಶವು ಮಂಗಳವಾರ ಪ್ರಕಟ
ಗೊಂಡಿದ್ದು, ಬಂಟರ ಸಂಘ ಮುಂಬಯಿ ಸಂಚಾಲಕತ್ವದ ಪೊವಾಯಿ ಪ್ರತಿಷ್ಠಿತ ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ವಾಣಿಜ್ಯ ವಿಭಾಗಕ್ಕೆ ಶೇ. 100 ಫಲಿತಾಂಶ ಲಭಿಸಿದೆ.

Advertisement

ಪರೀಕ್ಷೆಗೆ ಹಾಜರಾದ 522 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 146 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದರೆ, 276 ವಿದ್ಯಾರ್ಥಿಗಳು ಪ್ರಥಮ ದರ್ಜೆ, 95 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, ನಾಲ್ವರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ಸೈನಿ ಮಾನ್ವಿತ್‌ ಕೌರ್‌ ಅವತಾರ್‌ ಸಿಂಗ್‌ ಅವರು ಶೇ. 92.77 ಅಂಕಗಳನ್ನು ಪಡೆದು ಪ್ರಥಮ ಸ್ಥಾನಿಯಾದರೆ, ತೇಜ್ವಾನಿ ಸಿಮ್ರಾನ್‌ ಸುನಿಲ್‌ ಅವರು ಶೇ. 91.08 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಲಕ್ಷ್ಮೀ ಇಂದ್ರಾ ಸಿಂಗ್‌ ಅವರು ಶೇ. 90.46 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಜ್ಞಾನ ವಿಭಾಗಕ್ಕೆ ಶೇ. 94.25 ಫಲಿತಾಂಶ
ಸಂಸ್ಥೆಯ ವಿಜ್ಞಾನ ವಿಭಾಗಕ್ಕೆ ಶೇ. 94.25 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 365 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌, 70 ವಿದ್ಯಾರ್ಥಿಗಳು ಪ್ರಥಮ ದರ್ಜೆ, ನಾಲ್ವರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಭಾಗದ ಸೂರಜ್‌ ಮಹೇಂದ್ರ ಯಾದವ್‌ ಅವರು ಶೇ. 80.92 ಅಂಕಗಳೊಂದಿಗೆ ಪ್ರಥಮ, ನಿಕಿಲ್‌ ಜೈರಾಜ್‌ ಅವರು ಶೇ. 80.62 ಅಂಕಗಳೊಂದಿಗೆ ದ್ವಿತೀಯ ಹಾಗೂ ಕರಣ್‌ ಅಶೋಕ್‌ ಅವರು ಶೇ. 77.23 ಅಂಕಗಳನ್ನು ಪಡೆದು ತೃತೀಯ ಸ್ಥಾನಿಯಾಗಿದ್ದಾರೆ. ಜನರಲ್‌ ಸಾಯನ್ಸ್‌ ವಿಭಾಗದಲ್ಲಿ ಪುನೀತ್‌ ದೇವೇಂದ್ರ ಕುಮಾರ್‌ ಜೈನ್‌ ಅವರು ಶೇ. 87.08 ಅಂಕಗಳೊಂದಿಗೆ ಪ್ರಥಮ, ಮುಖೀಯಾ ಅಮನ್‌ ಕುಮಾರ್‌ ರಾಮಚಂದ್ರ ಅವರು ಶೇ. 85.23 ಅಂಕಗಳನ್ನು ಪಡೆದು ದ್ವಿತೀಯ ಹಾಗೂ ಡೈನಾ ವಿರಾಫ್‌ ಅವರು ಶೇ. 76.31 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದ್ದಾರೆ.

ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು, ಸಹಕರಿಸಿದ ಶಿಕ್ಷಕವೃಂದ ಹಾಗೂ ಪ್ರಾಂಶುಪಾಲರನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಎಸ್‌. ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಸಿಎ ಶಂಕರ್‌ ಬಿ. ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next