Advertisement

ಬಂಟರ ಸಂಘ ನವಿಮುಂಬಯಿ:ಪದಗ್ರಹಣ ಸಮಾರಂಭ

03:42 PM Jan 11, 2018 | Team Udayavani |

ನವಿಮುಂಬಯಿ: ಸುಶಿಕ್ಷಿತ ಸಮಾಜ ನಿರ್ಮಾಣವೇ ಬಂಟರ ಸಂಘದ ಮೂಲ ಉದ್ದೇಶವಾಗಿದೆ. ಬಂಟ ಸಮಾಜದಲ್ಲಿರುವ ಇಂದಿನ ಪೀಳಿಗೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ನಮ್ಮಲ್ಲಿ ಉಳಿದಿರುವ ದಾರಿದ್ರÂವನ್ನು ಹೋಗಲಾಡಿಸಲು ಸಾಧ್ಯವಿದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಅಭಿಪ್ರಾಯಿಸಿದರು.

Advertisement

ನವಿಮುಂಬಯಿ ಸಿಬಿಡಿ ಬೇಲಾಪುರದ ಹೊಟೇಲ್‌ ರೆಸಿಡೆನ್ಸಿ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ 2017-2020 ರ ಅವಧಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಬಂಟ ಸಮುದಾಯದ ಒಗ್ಗಟ್ಟು ಮತ್ತು ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು 90 ವರ್ಷಗಳ ಹಿಂದೆ ನಮ್ಮ ಹಿರಿಯರು ಕಟ್ಟಿದ ಬಂಟರ ಸಂಘವಿಂದು ಮಹಾನ್‌ ಶಕ್ತಿಯಾಗಿ ಬೆಳೆದಿದೆ. ಹಿರಿಯರ ಪರಿಕಲ್ಪನೆಗೆ ಅಂದಿನಿಂದ ಇಂದಿನವರೆಗೆ ಅನೇಕ ಬಂಟ ಮಹಾನೀಯರು ಮೂರ್ತರೂಪ ನೀಡಿದ್ದಾರೆ. ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ ಇವೆ ಮೊದಲಾದ ಸೌಲಭ್ಯಗಳು ಬಂಟ ಸಮಾಜಕ್ಕೆ ಸುಲಭವಾಗಿ ದೊರಕುತ್ತಿದೆ. ಇದರ ಪ್ರಯೋಜನವನ್ನು ಆರ್ಥಿಕವಾಗಿ ತೊಂದರೆಯಲ್ಲಿರುವ ಪ್ರತಿಯೊಬ್ಬರು ಪಡೆದು ಅಭಿವೃದ್ಧಿಯ ದಾರಿಯತ್ತ ಸಾಗಬೇಕು. ಸಂಘದ ನವಿಮುಂಬಯಿ ಪ್ರಾದೇಶಿಕ ಸಮಿತಿ ಸಂಘದ ಶಿಷ್ಟಾಚಾರಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಲ್ಲಿಯ ಪುರುಷ, ಮಹಿಳೆಯರು ಮತ್ತು ಮಕ್ಕಳ ಅದಮ್ಯ ಉತ್ಸಾಹ, ಕಾರ್ಯಚಟುವಟಿಕೆಗಳು ಭವಿಷ್ಯದಲ್ಲಿ ಸಮಿತಿಯ ಅಭಿವೃದ್ಧಿಗೆ ಪ್ರೇರಕವಾಗಲಿದೆ. 

ನವಿಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಇವರ ನೇತೃತ್ವದಲ್ಲಿ ಶೀಘ್ರದಲ್ಲೇ ಕಚೇರಿಯೊಂದನ್ನು ತೆರೆಯಲೆಂದು ಆಶಿಸಿದರು. ನೂತನ ಕಾರ್ಯಾಧ್ಯಕ್ಷ, ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರೆಲ್ಲರನ್ನು ಅಭಿನಂದಿಸಿ ನಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗಲಿ ಎಂದು ನುಡಿದು ಶುಭಹಾರೈಸಿದರು.

ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವವರು ಬಹಳಷ್ಟು ಮಂದಿ ಇದ್ದಾರೆ. ಸಂಘದ ಪ್ರಾದೇಶಿಕ ಸಮಿತಿಗಳು ಅಂತರವನ್ನು ಹುಡುಕಿ ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಪ್ರಾದೇಶಿಕ ಸಮಿತಿಗಳು ಎಷ್ಟು ಸೇವೆ ಮಾಡುತ್ತಿವೆಯೋ ಅದಕ್ಕಿಂತ ಹೆಚ್ಚು ವೆಚ್ಚ ಮಾಡುತ್ತಿರುವುದು ವಿಷಾದನೀಯ. ಕಾರ್ಯಕ್ರಮಗಳನ್ನು ಚುಟುಕಾಗಿ ಅಷ್ಟೇ ಸುಂದರವಾಗಿ ಆಯೋಜಿಸುವಂತಾಗಬೇಕು. ಕೆ. ಡಿ. ಶೆಟ್ಟಿ ಅವರು ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಸಮಯ ತಾನು ಪ್ರಾದೇಶಿಕ ಸಮಿತಿಗಳ ಸಮನ್ವಯಕನಾಗಿದ್ದೆ. ಸಮಿತಿಯ ಉದ್ಘಾಟನೆಯ ದಿನದಂದು ಕರ್ಫ್ಯೂ ಜಾರಿಯಲ್ಲಿದ್ದರೂ ಕೂಡಾ ಒಂದು ಸಾವಿರಕ್ಕೂ ಅಧಿಕ ಸಮಾಜ ಬಾಂಧವರು ಪಾಲ್ಗೊಂಡಿದ್ದರು ಎಂದು ತಿಳಿಸಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಅವರು ಮಾತನಾಡಿ, ಸಂಸಾರ ನಡೆಸುವ ಮಹಿಳೆಯರಿಗೆ ಸಂಘ-ಸಂಸ್ಥೆಗಳಲ್ಲಿ ಕಾರ್ಯವೆಸಗಲು ಎಂದಿಗೂ ಕಷ್ಟವಾಗಲಾರದು. ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳೆಯರ ಕಾರ್ಯವೈಖರಿ ಅಭಿನಂದನೀಯವಾಗಿದೆ. ಇಲ್ಲಿ ಪುರುಷರಿಗಿಂತಲೂ ಮಹಿಳೆಯರು ಹೆಚ್ಚು ಸೇರುತ್ತಿರುವುದು ಅಭಿಮಾನದ ಸಂಗತಿಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಕಾರ್ಯ ನಡೆಯಲಿ. ನಿಮ್ಮ ಮನಸ್ಸಿನ ಎಲ್ಲಾ ಚಿಂತನೆಗಳು ಯಶಸ್ವಿಯಾಗಲಿ ಎಂದು ಹಾರೈಸಿದರು.

Advertisement

ಇದೇ ಸಂದರ್ಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ನೂತನ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಮತ್ತು  ದೀಪಿಕಾ ಜಗದೀಶ್‌ ಶೆಟ್ಟಿ ದಂಪತಿಗೆ ಶಾಲು ಹೊದೆಸಿ ಶುಭಹಾರೈಸಿದರು. ನಿರ್ಗಮನ ಕಾರ್ಯಾಧ್ಯಕ್ಷ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಅವರು ಪುಷ್ಪಗುಚ್ಚವನ್ನಿತ್ತು ಅಭಿನಂದಿಸಿದರು.

ಸಮಿತಿಯ ನೂತನ ಸಂಚಾಲಕ ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ತಾಳಿಪಾಡಿಗುತ್ತು ಭಾಸ್ಕರ್‌ ಶೆಟ್ಟಿ, ಸಮಿತಿಯ ಉಪ ಕಾರ್ಯಾಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ, ಕಾರ್ಯದರ್ಶಿ ಶಿಮಂತೂರು ದಯಾನಂದ ಶೆಟ್ಟಿ, ಕೋಶಾಧಿಕಾರಿ ಭಾಸ್ಕರ್‌ ಶೆಟ್ಟಿ ದಕ್ಷಿಣ್‌, ಜೊತೆ ಕಾರ್ಯದರ್ಶಿ ರವೀಶ್‌ ಜಿ. ಶೆಟ್ಟಿ, ಜತೆ ಕೋಶಾಧಿಕಾರಿ ಬೈಕಾಡಿ ಹೆದ್ದಾರಿಮನೆ ನಾಗೇಶ್‌ ಎ. ಶೆಟ್ಟಿ ಅವರನ್ನು ಗೌರವಿಸಲಾಯಿತು.

ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ  ರೂಪಾ ಡಿ. ಶೆಟ್ಟಿ ಅವರನ್ನು ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಶೆಟ್ಟಿ ಶಾಲು ಹೊದೆಸಿ ಶುಭಹಾರೈಸಿದರು. 
ಸಮಿತಿಯ ನಿರ್ಗಮನ ಕಾರ್ಯಾಧ್ಯಕ್ಷೆ ಗುಣವತಿ ಡಿ.  ಶೆಟ್ಟಿ ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಸಮಿತಿಯ ನೂತನ ಪದಾಧಿಕಾರಿಗಳಾದ ಉಪ ಕಾರ್ಯಾಧ್ಯಕ್ಷೆ ಜಯಂತಿ ಸಿ. ಶೆಟ್ಟಿ, ಕಾರ್ಯದರ್ಶಿ ಮಮ್‌ತಾ ಶೆಟ್ಟಿ, ಕೋಶಾಧಿಕಾರಿ ಶಾಲಿನಿ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ಯಶೋಧಾ ಡಿ. ಶೆಟ್ಟಿ, ಜತೆ ಕೋಶಾಧಿಕಾರಿ ಗೀತಾ ಎಸ್‌. ಶೆಟ್ಟಿ, ಸಮಿತಿಯ ಸದಸ್ಯರಾದ ಸ್ಮಿತಾ ಶೆಟ್ಟಿ, ಸರಿತಾ ಕೆ. ಶೆಟ್ಟಿ, ವಸಂತಿ ಸಿ. ಶೆಟ್ಟಿ ಇವರನ್ನು ಗೌರವಿಸಲಾಯಿತು.

ಯುವ ವಿಭಾಗದ ನೂತನ ಕಾರ್ಯಾಧ್ಯಕ್ಷ ಅಕ್ಷಯ್‌ ವಿ. ಶೆಟ್ಟಿ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಶಾಲು ಹೊದೆಸಿ, ಆಶೀರ್ವದಿಸಿದರೆ, ಸಂಘದ ಉಪಾಧ್ಯಕ್ಷ ಚಂದ್ರಹಾಸ್‌ ಕೆ. ಶೆಟ್ಟಿ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. 

ಸಮಿತಿಯ ನೂತನ ಪದಾಧಿಕಾರಿಗಳಾದ ಉಪ ಕಾರ್ಯಾಧ್ಯಕ್ಷ ಅರುಣ್‌ ಆರ್‌. ಶೆಟ್ಟಿ, ಕಾರ್ಯದರ್ಶಿ ನಿಶ್ಮಿತಾ ಎಸ್‌. ಶೆಟ್ಟಿ, ಕೋಶಾಧಿಕಾರಿ ಪ್ರಸಾದ್‌ ಎಚ್‌. ಶೆಟ್ಟಿ, ಜತೆ ಕಾರ್ಯದರ್ಶಿ ಶಿಲ್ಪಾ ಡಿ. ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರತೀಕ್ಷಾ ಜಿ. ಶೆಟ್ಟಿ, ಸಮಿತಿಯ ಸದಸ್ಯರುಗಳಾದ ನಿಧಿ  ವಿ. ಶೆಟ್ಟಿ, ಅನುಷ್ಕಾ ಎಸ್‌. ಶೆಟ್ಟಿ, ಸಾಯಿಕಿರಣ್‌ ಶೆಟ್ಟಿ, ಆವಿಷ್ಕಾರ್‌ ಎಂ. ಶೆಟ್ಟಿ, ಆಕಾಶ್‌ ಪಿ. ಶೆಟ್ಟಿ, ಯಶ್‌ರಾಜ್‌ ಡಿ. ಶೆಟ್ಟಿ, ಯಾಸ್ನಿಕಾ ಡಿ. ಶೆಟ್ಟಿ, ಅಮೃತಾ ಜೆ. ಶೆಟ್ಟಿ, ಅಕ್ಷತಾ ಡಿ. ರೈ, ಸಾರ್ಥಕ್‌ ಬಿ. ಶೆಟ್ಟಿ, ಅಕ್ಷಯ್‌ ಶೆಟ್ಟಿ, ಆರ್ಥಿಕ್‌ ಶೆಟ್ಟಿ, ಪ್ರೀತೇಶ್‌ ಶೆಟ್ಟಿ, ನಿಖೀತಾ ಶೆಟ್ಟಿ, ರಶ್ಮಿ ಎಸ್‌. ಶೆಟ್ಟಿ, ರಾಹುಲ್‌ ವೈ. ಶೆಟ್ಟಿ ಇವರನ್ನು ಗೌರವಿಸಲಾಯಿತು.

ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ  ಆದ‌Âಪಾಡಿ ಬಾಲಕೃಷ್ಣ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರುಗಳಾದ  ಪಾಂಗಾಳ  ಅನಿಲ್‌ ಶೆಟ್ಟಿ,  ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಭಾಸ್ಕರ ಶೆಟ್ಟಿ ಪದ್ಮ, ಸದಸ್ಯತ್ವ ಸಮಿತಿಯ ಕಾರ್ಯಾಧ್ಯಕ್ಷ ದೆಪ್ಪುಣಿಗುತ್ತು ಚಂದ್ರಹಾಸ ಶೆಟ್ಟಿ, ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಶೆಟ್ಟಿ,  ಮ್ಯಾರೇಜ್‌ಸೆಲ್‌ನ ಕಾರ್ಯಾಧ್ಯಕ್ಷೆ ಶಕುಂತಳಾ ಶೆಟ್ಟಿ, ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷರಾಗಿ ಅಶೋಕ್‌ ಶೆಟ್ಟಿ ಉರಾನ್‌ ಹಾಗೂ ಆಯಾಯ ಸಮಿತಿಯ ಸದಸ್ಯರು, ವಿಭಾಗದ ಮುಖ್ಯಸ್ಥರು, ಮಹಿಳೆಯರನ್ನು ಗೌರವಿಸಲಾಯಿತು.

ಸಮಿತಿಯ ಮಾರ್ಗ ದರ್ಶಕರಾದ ಕೆ. ಡಿ. ಶೆಟ್ಟಿ, ಸಂತೋಷ್‌ ಡಿ. ಶೆಟ್ಟಿ, ಸಂಜೀವ ಎನ್‌. ಶೆಟ್ಟಿ, ಅಣ್ಣಿ ಸಿ. ಶೆಟ್ಟಿ, ರವಿ ಆರ್‌. ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಉಪಕಾರ್ಯಾಧ್ಯಕ್ಷ ಹರೀಶ್‌ ಪಡುಬಿದ್ರೆ ವಂದಿಸಿದರು.
ವೇದಿಕೆಯಲ್ಲಿದ್ದ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್‌ ಬಿ. ಶೆಟ್ಟಿ, ಜತೆ ಕಾರ್ಯದರ್ಶಿ ಗುಣಪಾಲ್‌ ಶೆಟ್ಟಿ ಐಕಳ, ಜತೆ ಕೋಶಾಧಿಕಾರಿ ಮಹೇಶ್‌ ಶೆಟ್ಟಿ, ದಕ್ಷಿಣ ಮುಂಬಯಿ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ| ಪ್ರಭಾಕರ ಶೆಟ್ಟಿ ಬಿ., ಸಮಿತಿಯ ನಿರ್ಗಮನ ಮತ್ತು ಆಗಮನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಗಾಯಕ ಗಣೇಶ್‌ ಎರ್ಮಾಳ್‌ ಮತ್ತು ಮೋಹನ್‌ದಾಸ್‌ ರೈ ಅವರಿಂದ ಗಾಯನ ಹಾಗೂ ಸಮಿತಿಯ ಸದಸ್ಯರು, ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.

ಸಮಿತಿಯ ಸಂಸ್ಥಾಪಕ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು ನನ್ನನ್ನು ಸಮಿತಿಗೆ ಪರಿಚಯಿಸಿದ್ದು, ಆ ಬಳಿಕ ಅವರ ಹಾಗೂ ಖಾಂದೇ ಶ್‌ ಭಾಸ್ಕರ್‌ ಶೆಟ್ಟಿ ಅವರ ಪ್ರೋತ್ಸಾಹದಿಂದ ಬಂಟರ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. ಆದರೆ ನವಿಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ  ನಾನಾಗುತ್ತೇನೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ. ನಾನಿಂದು ಕಾರ್ಯಾಧ್ಯಕ್ಷನಾಗಲು ಕೆ. ಡಿ. ಶೆಟ್ಟಿ ಅವರ ಪ್ರೇರಣೆಯಿಂದ. ಅದಕ್ಕಾಗಿ ಅವರಿಗೆ ಮೊದಲು ಕೃತಜ್ಞತೆ ಸಲ್ಲಿ ಸುತ್ತೇನೆ. ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮಾರ್ಗದರ್ಶನ, ಶ್ರೀ ಮೂಕಾಂಬಿಕೆಯ ಅನುಗ್ರಹ ಬಲದಿಂದ ಪದವನ್ನು ಸಂತಸದಿಂದ ಸ್ವೀಕರಿಸಿದ್ದೇನೆ. ಮುಂದಿನ ಮೂರು ವರ್ಷಗಳಲ್ಲಿ ಉತ್ತಮ ಕಾರ್ಯವೆಸಗಲು ನಿಮ್ಮೆಲ್ಲರ ಸಹಕಾರವಿರಲಿ
  ಜಗದೀಶ್‌ ಶೆಟ್ಟಿ  ನಂದಿಕೂರು (ನೂತನ ಕಾರ್ಯಾಧ್ಯಕ್ಷರು : ಬಂಟರ ಸಂಘ ನವಿಮುಂಬಯಿ ಸಮಿತಿ).

ಸಮಿತಿಯ ಕಾರ್ಯಾಧ್ಯಕ್ಷನಾಗಿ ಉತ್ತಮ ಕಾರ್ಯ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. ಸ್ಥಾಪಕ ಕಾರ್ಯಾಧ್ಯಕ್ಷ ಕೆ. ಡಿ. ಶೆಟ್ಟಿ ಅವರು ಅವರ ಕಾರ್ಯಾವಧಿಯಲ್ಲಿ ನೀಡಿದ ಅವಕಾಶದಿಂದ ಬಂಟರ ಸಂಘದ ಸೇವೆಗಾಗಿ ತೊಡಗಿದೆ. ಆನಂತರ ಸಮಿತಿಯ ಕಾರ್ಯಾಧ್ಯಕ್ಷನಾದೆ. ನನ್ನ ಅವಧಿಯಲ್ಲಿ ಸಮಿತಿಗೆ ಅತ್ಯುತ್ತಮ ಪ್ರಾದೇಶಿಕ ಸಮಿತಿ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ. ನೂತನ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಮತ್ತವರ ತಂಡವು ಉತ್ತಮ ಕಾರ್ಯ ನಿರ್ವಹಿಸುವುದೆಂಬ ವಿಶ್ವಾಸ ನನ್ನಲ್ಲಿದೆ-ಸಮಿತಿಯು ಕಚೇರಿ, ಶಾಲೆ ಮತ್ತು ಕ್ರೀಡಾ ಅಕಾಡೆಮಿಯೊಂದನ್ನು ತೆರೆಯಲು ಪ್ರಯತ್ನಿಸಬೇಕು. ಅದಕ್ಕೆ ತನ್ನ ಸಂಪೂರ್ಣ ಸಹಕಾರವಿದೆ 
ಖಾಂದೇಶ್‌ ಭಾಸ್ಕರ್‌ ಶೆಟ್ಟಿ (ನಿರ್ಗಮನ ಕಾರ್ಯಾಧ್ಯಕ್ಷರು : ಬಂಟರ ಸಂಘ ನವಿಮುಂಬಯಿ ಸಮಿತಿ).

ಎರಡನೇ ಬಾರಿಗೆ ಪ್ರಾದೇಶಿಕ ಸಮಿತಿಗಳ ಸಮನ್ವಯಕನನ್ನಾಗಿ ಆರಿಸಿದ ಬಂಟರ ಸಂಘದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಬಂಟರು ಎಷ್ಟು ಒಗ್ಗಟ್ಟಿನಲ್ಲಿದ್ದಾರೆ ಎಂಬುವುದನ್ನು ನೋಡ ಬೇಕಾದರೆ ನವಿಮುಂಬಯಿ ಪ್ರಾದೇಶಿಕ ಸಮಿತಿಗೆ ಪ್ರತ್ಯಕ್ಷವಾಗಿ ಭೇಟಿ ನೀಡಬೇಕು. ಹೊಸ ಪರಿಕಲ್ಪನೆಯ ಕ್ರಿಯಾಶೀಲ ಕಾರ್ಯ ಚಟುವಟಿಕೆಗಳು ಆರಂಭಗೊಳ್ಳುವುದು ನವಿಮುಂಬಯಿ ಪ್ರಾದೇ ಶಿಕ ಸಮಿತಿಯಿಂದ. ಆ ಬಳಿಕ ಇತರ ಪ್ರಾದೇಶಿಕ ಸಮಿತಿಗಳಿಂದ ನಡೆಯುತ್ತದೆ. ಇಲ್ಲಿ ಪುರುಷರಷ್ಟೇ ಮಹಿಳೆಯರು, ಯುವಕರು ಜಾಗೃತವಾಗಿದ್ದಾರೆ. ಪ್ರಾದೇಶಿಕ ಸಮಿತಿಗಳ ಕಾರ್ಯ ಚಟುವಟಿಕೆಗಳು ಬಂಟ ಬಾಂಧವರೆಲ್ಲರಿಗೂ ತಿಳಿಯಲು ಬಂಟ ರೆಲ್ಲರನ್ನು ಒಂದಾಗಿಸಲು ಪ್ರತಿ ಎರಡು ವರ್ಷಕ್ಕೊಮ್ಮೆ ವಾರ್ಷಿ ಕೋತ್ಸವ ನಡೆಯುವಂತಾಗಬೇಕು. ನೂತನ ಕಾರ್ಯಾಧ್ಯಕ್ಷ ಜಗದೀಶ್‌ ಶೆಟ್ಟಿ ನಂದಿಕೂರು ಮತ್ತು ಅವರ ತಂಡವನ್ನು ಅಭಿನಂದಿಸುತ್ತಿದ್ದೇನೆ 
ಇಂದ್ರಾಳಿ ದಿವಾಕರ ಶೆಟ್ಟಿ (ಸಮನ್ವಯಕರು : ಬಂಟರ ಸಂಘ ಮಧ್ಯ ಮುಂಬಯಿ ಪ್ರಾದೇಶಿ ಸಮಿತಿ).

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next