ಮುಂಬಯಿ: 2018-19ನೇ ಶೈಕ್ಷಣಿಕ ಸಾಲಿನ ಎಚ್‌ಎಸ್‌ಸಿ ಫಲಿತಾಂಶವು ಮಂಗಳವಾರ ಪ್ರಕಟಗೊಂಡಿದ್ದು, ಬಂಟರ ಸಂಘ ಮುಂಬಯಿ ಇದರ ಕುರ್ಲಾ ಪೂರ್ವದ ಬಂಟರ ಭವನದ ಸಂಕುಲದಲ್ಲಿರುವ ಪ್ರತಿಷ್ಠಿತ ಬಂಟರ ಸಂಘ ಉನ್ನತ ಶಿಕ್ಷಣ ಸಂಸ್ಥೆಗೆ ಶೇ. 96.01 ಫಲಿತಾಂಶ ಲಭಿಸಿದೆ.
ಸಂಸ್ಥೆಯ ವಾಣಿಜ್ಯ ವಿಭಾಗಕ್ಕೆ ಶೇ. 97.88 ಫಲಿತಾಂಶ
ಲಭಿಸಿದ್ದು, ಪರೀಕ್ಷೆಗೆ ಹಾಜರಾದ ಒಟ್ಟು236 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 89 ವಿದ್ಯಾರ್ಥಿಗಳು ಪ್ರಥಮ ದರ್ಜೆ, 105 ವಿದ್ಯಾರ್ಥಿಗಳು ದ್ವಿತೀಯ ಹಾಗೂ 29 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸೌನಕ್ ಕುಮಾರ್ ಕರ್ಕೇರ ಅವರು ಶೇ. 83.23 ಅಂಕಗಳನ್ನು ಪಡೆದು ವಿಭಾಗಕ್ಕೆ ಪ್ರಥಮ ಸ್ಥಾನಿಯಾದರೆ, ರಿತಿಕ್ ರಾಜ್‌ಕುಮಾರ್ ಶರ್ಮಾ ಶೇ. 81.69 ಅಂಕಗಳನ್ನು ಗಳಿಸಿ ದ್ವಿತೀಯ ಮತ್ತು ಆರ್ಯನ್ ಪ್ರಶಾಂತ್ ಸನಿಲ್ ಅವರು ಶೇ. 81.08 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಸಂಸ್ಥೆಯ ವಿಜ್ಞಾನ ವಿಭಾಗಕ್ಕೆ ಶೇ. 90.79 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 65 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಡಿಸ್ಟಿಂಕ್ಷನ್, 10 ವಿದ್ಯಾರ್ಥಿಗಳು ಪ್ರಥಮ ದರ್ಜೆ, 45 ವಿದ್ಯಾರ್ಥಿಗಳು ದ್ವಿತೀಯ ಮತ್ತು ಮೂವರು ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಭಾಗದ ಅಲೆಕ್ಸ್ ಕಾಡೋìಜ್ ಆಸ್ಟಿನ್ ಅವರು ಶೇ. 78.62 ಅಂಕಗಳೊಂದಿಗೆ ಪ್ರಥಮಿಗರೆನಿಸಿದರೆ, ಗಿರಿನ್ ಪ್ರಿಯಾ ತುಳಸಿರಾಮ್ ಅವರು ಶೇ. 68.15 ಮತ್ತು ಶೇಖ್ ಮುಜಾಮಿಲ್ ಮೊಹಮ್ಮದ್ ಬನೆಮಿಯಾ ಅವರು ಶೇ. 67.69 ಅಂಕಗಳನ್ನು ಗಳಿಸಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು, ಸಹಕರಿಸಿದ ಶಿಕ್ಷಕ ವೃಂದ ಹಾಗೂ ಪಾಲಕ ಪೋಷಕರನ್ನು ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಎನ್. ವಿವೇಕ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಅಭಿನಂದಿಸಿದ್ದಾರೆ.