Advertisement
ಜೂ. 10ರಂದು ಬೆಳಗ್ಗೆ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಜರಗಿದ 14ನೇ ಬೃಹತ್ ಆರ್ಥಿಕ ಸಹಾಯ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಆರ್ಥಿಕ ಸಹಾಯ ಕಾರ್ಯಕ್ರಮದ ಜತೆಗೆ ಇನ್ನಿತರ ಸಹಾಯದ ರೂಪದಲ್ಲಿ ಸಂಘವು ಪ್ರತೀ ವರ್ಷ ಸುಮಾರು ಏಳು ಕೋ. ರೂ.ಗಳಷ್ಟು ಮೊತ್ತವನ್ನು ವಿನಿ ಯೋಗಿಸುತ್ತಿದೆ. ಮುಂದೆ ನನ್ನ ಮೂರು ವರ್ಷಗಳ ಅವಧಿಯಲ್ಲಿ ಸಂಘವು ಸುಸಜ್ಜಿತ ಕಾಲೇಜೊಂದನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಸಾಮೂಹಿಕ ವಿವಾಹ ಹಾಗೂ ವಿವಾಹ ಸಂಬಂಧಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸಂಘದ ಎಲ್ಲಾ ಕಾರ್ಯಗಳಿಗೆ ಸದಾ ಸಹಾಯ-ಸಹಕಾರ ನೀಡುತ್ತಿರುವ ದಾನಿಗಳನ್ನು ಎಂದಿಗೂ ಮರೆಯಲು ಅಸಾಧ್ಯ. ಸಮುದಾಯದ ಅಭಿವೃದ್ಧಿಗೋಸ್ಕರ ಬಂಟರ ಸಂಘದ ಪರಿಶ್ರಮ ಅಪಾರವಾಗಿದೆ. ಉಳ್ಳವರಿಂದ ಪಡೆದು ಇಲ್ಲದವರಿಗೆ ನೀಡುವ ಈ ಕಾರ್ಯ ಅಷ್ಟೇನೂ ಸುಲಭ ಸಾಧ್ಯವಲ್ಲ. ಸಂಘದಿಂದ ಸಹಾಯ ಪಡೆದವರು ಆ ಹಣವನ್ನು ಶಿಕ್ಷಣ ಮತ್ತು ಆರೋಗ್ಯಕ್ಕಾಗಿಯೇ ಮೀಸಲಿಡಬೇಕು. ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ನೇತೃತ್ವದಲ್ಲಿ, ಪದಾಧಿಕಾರಿಗಳಾದ ಸುಬ್ಬಯ್ಯ ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಸುರೇಶ್ ಶೆಟ್ಟಿ ಮರಾಠ ಈ ವರ್ಷ ಕೈಗೊಂಡ ಯೋಜನೆ, ಸಾಧಿಸಿದ ಸಾಧನೆ ಯಶಸ್ವಿಯಾಗಿರುವುದು ಅಭಿನಂದನೀಯ. ದಿ| ವಾಸು ಕೆ. ಶೆಟ್ಟಿ ಇವರ ಸ್ಮರಣಾರ್ಥ ಚರಿಷ್ಮಾ ಬಿಲ್ಡರ್ ಲಿಮಿಟೆಡ್‌ನ ಸಿಎಂಡಿ, ಕೊಡುಗೈದಾನಿ ಸುಧೀರ್ ವಿ. ಶೆಟ್ಟಿ, ತುಂಗಾ ಸುಧಾಕರ ಎಸ್. ಹೆಗ್ಡೆ, ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ, ಕರುಣಾಕರ ಎಂ. ಶೆಟ್ಟಿ ವಿಕೆ ಗ್ರೂಪ್, ಪ್ರಭಾಕರ್ ಶೆಟ್ಟಿ ಉಲ್ಲಾಸ್‌ನಗರ ಹಾಗೂ ಇತರ ದಾನಿಗಳ ಕೊಡುಗೆ ಅಪಾರವಾಗಿದೆ ಎಂದು ನುಡಿದರು.
Related Articles
Advertisement
ಸಮ್ಮಾನ ಸ್ವೀಕರಿಸಿ ಮಾತನಾಡಿದ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು, ಹಿರಿಯರ ಸಮ್ಮುಖದಲ್ಲಿ ಸಮ್ಮಾನ ಪಡೆದಿರುವುದು ನನ್ನ ಭಾಗ್ಯವೆಂದು ಭಾವಿಸುತ್ತೇನೆ. ಸಮ್ಮಾನವನ್ನು ಬಂಟರ ಸಂಘದ ಎಲ್ಲಾ ಕಾರ್ಯಕರ್ತರ ಪರಿಶ್ರಮದ ಧೊÂàತಕವಾಗಿ ಅವರಿಗೆ ಅರ್ಪಿಸುತ್ತಿದ್ದೇನೆ. ಕಳೆದ 15 ವರ್ಷಗಳಿಂದ ಬಂಟರ ಸಂಘದ ಸೇವೆಯಲ್ಲಿ ತೊಡಗಿರುವ ನನಗೆ ಪ್ರಾದೇಶಿಕ ಸಮಿತಿಯ ಸಮನ್ವಯಕ ಹುದ್ಧೆ ಖುಷಿ ನೀಡಿದೆ. ಸಂಘದಲ್ಲಿ ದೊರೆತ ಪ್ರೀತಿ ಅಗಾಧವಾಗಿದ್ದು, ಅದನ್ನು ಜೀವನ ಪರ್ಯಂತ ಮರೆಯಲು ಸಾಧ್ಯವಿಲ್ಲ ಎಂದು ನುಡಿದು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಯಾದಿಯನ್ನು ಸಮಿತಿಯ ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ ವಾಚಿಸಿದರು. ಮಹಿಳಾ ವಿಭಾಗದ ವಿನೋದಾ ಆರ್. ಚೌಟ ಪ್ರಾರ್ಥನೆಗೈದರು. ಸಂಘದ ಮಾಜಿ ಅಧ್ಯಕ್ಷ ವಿಟuಲ್ ಶೆಟ್ಟಿ ಹೆಜಮಾಡಿ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಈ ಬಾರಿ ವಿಧವೆಯರಿಗೆ ಹಾಗೂ ವಿಕಲ ಚೇತನ ವಿದ್ಯಾರ್ಥಿಗಳಿಗೆ ಹಿಂದಿನ ಸಾಲಿಗಿಂತ ದುಪ್ಪಟ್ಟು ಸಹಾಯ ಒದಗಿಸಿರುವುದಾಗಿ. ಸಮಾಜದ ದಾನಿಗಳು ಈ ಯೋಜನೆಗೆ ಉತ್ಸಾಹದಿಂದ ನೆರವು ನೀಡಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.ಅತಿಥಿ-ಗಣ್ಯರುಗಳನ್ನು, ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ದಾನಿಗಳನ್ನು, ವಿವಿಧ ಬಂಟ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು, ಸಂಘದ ಉಪಸಮಿತಿಗಳ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿಯ ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ ವಂದಿಸಿದರು. ಪ್ರಾರಂಭದಲ್ಲಿ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಅರುಣೋದಯ ರೈ ಅವರ ಪ್ರಾಯೋಜಕತ್ವದಲ್ಲಿ ಬಜ್ಪೆಯ ಥಂಡರ್ ಗಾಯ್ಸ ಫೌಂಡೇಷನ್ ಇದರ ಸೂರಜ್ ಶೆಟ್ಟಿ ತಂಡದವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಂಡದ ರಾಜೇಂದ್ರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಕಾರ್ಯದರ್ಶಿ ಖಾಂದೇಶ್ ಭಾಸ್ಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಇತಿಹಾಸದಲ್ಲೇ ಅಭೂತಪೂರ್ವ ಕಾರ್ಯಕ್ರಮ: ಐಕಳ
ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು, ಸಂಘದ ಇತಿಹಾಸದಲ್ಲೊಂದು ಅಪೂರ್ವ ಹಾಗೂ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ವಿಶ್ವದ ಯಾವುದೇ ಬಂಟ ಸಂಘಟನೆಗಳು ಇದುವರೆಗೆ ಇಂತಹ ಬೃಹತ್ ಆರ್ಥಿಕ ಸಹಾಯ ಮೊತ್ತವನ್ನು ವಿತರಿಸಿದ ದಾಖಲೆಯಿಲ್ಲ. ಬಂಟರ ಸಂಘ ಮುಂಬಯಿ ಇತರ ಎಲ್ಲ ಬಂಟ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದೆ. 2005 ರಲ್ಲಿ ಸಂಪೂರ್ಣ ಮುಂಬಯಿ ನೆರೆ ನೀರಿನಲ್ಲಿ ಕೊಚ್ಚಿಹೋದಾಗ ಬಂಟ ಸಮಾಜದ ಕುಟುಂಬಗಳು ಅನುಭವಿಸಿದ ಸಂಕಷ್ಟಗಳಿಗೆ ತಾನು ಹಾಗೂ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಸ್ಪಂದಿಸಿರುವುದನ್ನು ನೆನಪಿಸಿಕೊಂಡ ಅವರು, ಆರಂಭದಲ್ಲಿ ರೂ. 60 ಲಕ್ಷದಿಂದ ಆರಂಭಗೊಂಡ ಈ ಆರ್ಥಿಕ ಸಹಾಯ ವಿತರಣೆಯು ಇಂದು 1.75 ಕೋ. ರೂ. ಗಳಿಗೆ ಏರಿಕೆಯಾಗಿರುವುದು ಸಂತಸದ ಸಂಗತಿ. ಸಂಘವು ವಿಶ್ವದಲ್ಲೇ ಸ್ಥಾನಗಳಿಸಲು ನಮ್ಮ ದಾನಿಗಳೇ ಕಾರಣಕರ್ತರು. ಸಮಿತಿಯ ಕಾರ್ಯಾಧ್ಯಕ್ಷ ಉಳೂ¤ರು ಮೋಹನ್‌ದಾಸ್ ಶೆಟ್ಟಿ ಮತ್ತು ತಂಡದ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು