ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿಯಿಂದ ಪೊವಾಯಿಯ ಮಂತ್ರಾ ಡೈನಿಂಗ್ ಬಾಂಕ್ವೆಟ್ ಹಾಲ್‌ನಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಲಯನ್ ಶೋಭಾ ಶಂಕರ್ ಶೆಟ್ಟಿ ದಂಪತಿಯನ್ನು ಸಮಿತಿಯ ಮಹಿಳಾ ವಿಭಾಗದಿಂದ ಅಭಿನಂದಿಸಲಾಯಿತು.
ಬಂಟರ ಸಂಘದ ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯ ಕರಾದ ಡಾ| ಪ್ರಭಾಕರ ಶೆಟ್ಟಿ, ಬಂಟರ ಸಂಘದ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಎನ್. ಸಿ. ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾರ್ನಾಡ್, ಗಣೇಶ್ ಶೆಟ್ಟಿ ಮೊದಲಾದವರ ಸಮ್ಮುಖದಲ್ಲಿ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸತ್ಕರಿಸಲಾಯಿತು.
ಶೋಭಾ ಶಂಕರ್ ಶೆಟ್ಟಿ ಅವರು ವಿಜಯನಗರ ಮರೋಲ್ ಇಲ್ಲಿನ ಲಯನ್ಸ್ ಕ್ಲಬ್‌ನ 27 ವರ್ಷದ ಇತಿಹಾಸದಲ್ಲಿ ಪ್ರಥಮ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೆ ಪಾತ್ರ ರಾಗಿ¨ªಾರೆ. ಅವರು ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಮಾಜಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಸಕ್ರಿಯ ಸದಸ್ಯರಾಗಿ ಕಾಲ ಕಾಲಕ್ಕೆ ಸಲಹೆ ಸೂಚನೆಗಳನ್ನು ನೀಡುತ್ತಾ ಬರುತ್ತಿ¨ªಾರೆ.
ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ| ಆರ್. ಕೆ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷರಾದ ವನಿತಾ ಯೋಗೇಶ್ ನೋಂಡಾ, ಸಂಚಾಲಕರಾದ ಡಿ. ಕೆ. ಶೆಟ್ಟಿ, ಸುಜಾತಾ ಗುಣಪಾಲ ಶೆಟ್ಟಿ, ಉಪಾಧ್ಯಕ್ಷರಾದ ಡಾ| ಪೂರ್ಣಿಮಾ ಎಸ್. ಶೆಟ್ಟಿ, ಕಾರ್ಯದರ್ಶಿ ವಜ್ರಾ ಪೂಂಜಾ, ಜತೆ ಕೋಶಾಧಿಕಾರಿ ಉಷಾ ವಿ. ಕೆ. ಶೆಟ್ಟಿ, ಗೀತಾ ಆರ್. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸವಿತಾ ಕೆ. ಶೆಟ್ಟಿ, ಸಲಹೆಗಾರರಾದ ಪ್ರಶಾಂತಿ ದಿವಾಕರ ಶೆಟ್ಟಿ, ಸುಜಾತಾ ಆರ್. ಶೆಟ್ಟಿ, ಶೆಟ್ಟಿ, ವಿಂಧ್ಯಾ ಬÇÉಾಳ್, ವಿಜಯಲಕ್ಷ್ಮೀಎಂ. ಶೆಟ್ಟಿ ಸದಸ್ಯರಾದ ಅನಿತಾ ಯು. ಶೆಟ್ಟಿ, ಸುಚಿತ್ರಾ ಶೆಟ್ಟಿ, ಶೈಲಾ ಶೆಟ್ಟಿ, ಶೋಭಾ ರೈ, ಮಮತಾ ಶೆಟ್ಟಿ, ಅನಿತಾ ಆರ್. ಕೆ. ಶೆಟ್ಟಿ ಸಮಿತಿಯ ಉಪಾಧ್ಯಕ್ಷರಾದ ಆರ್. ಜಿ. ಶೆಟ್ಟಿ, ಕಾರ್ಯದರ್ಶಿ ರವಿ ಶೆಟ್ಟಿ, ಕೋಶಾಧಿಕಾರಿ ಕರುಣಾಕರ ಶೆಟ್ಟಿ, ರಮೇಶ್ ರೈ, ಲಕ್ಷ್ಮಣ್ ಶೆಟ್ಟಿ, ಸಿಎ ಸುನಿಲ್ ಶೆಟ್ಟಿ, ಸೀತಾರಾಮ ಶೆಟ್ಟಿ, ಸೂರಜ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪರಿಸರದ ಪ್ರತಿಭಾವಂತ ವಿದ್ಯಾರ್ಥಿಯಾದ ಜಯಾದಿತ್ಯ ಶೆಟ್ಟಿ ಅವರು ಗಣಿತದಲ್ಲಿನ ಜಾಣ್ಮೆ, ಪ್ರತಿಭೆಯ ಅನಾವರಣ ಕಾರ್ಯಕ್ರಮವೂ ನೆರವೇರಿತು.
ಡಾ| ಆರ್. ಕೆ. ಶೆಟ್ಟಿ ಅವರು ಶೋಭಾ ಶಂಕರ ಶೆಟ್ಟಿ ಅವರ ಸಾಧನೆಯ ಕುರಿತು ಮೆಚ್ಚುಗೆಯ ನುಡಿಗಳನ್ನಾಡಿ ಅವರಿಗೆ ಶುಭ ಹಾರೈಸಿದರು. ಈಗಾಗಲೇ ಅನೇಕ ಬಹುಮಾನಗಳನ್ನು ಪಡೆದಿರುವ ನಮ್ಮ ಸಮಿತಿಯ ಬಾಲಕ ಜಯಾದಿತ್ಯನ ಪ್ರತಿಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಬೇಕು. ಅದಕ್ಕೆ ತಗಲುವ ಖರ್ಚು ವೆಚ್ಚ ಅಪಾರ. ಬಂಟ ಬಾಂಧವರೆಲ್ಲರೂ ಸಹಕರಿಸಿ ಈ ಮಗುವಿನ ಪ್ರತಿಭೆಯನ್ನು ಪ್ರೋತ್ಸಾಹಿಸಬೇಕು ಎಂದರು. ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ನಿರ್ವಹಿಸಿ ವಂದಿಸಿದರು.