Advertisement

ಬಂಟ್ಸ್‌ ಹೈಯರ್‌ ಎಜುಕೇಶನ್‌ ನೈಟ್‌ ಕಾಲೇಜಿನಿಂದ ಸಮ್ಮಾನ

02:51 PM Jan 17, 2018 | Team Udayavani |

ನವಿಮುಂಬಯಿ: ಬೋಂಬೇ ಬಂಟ್ಸ್‌ ಅಸೋಸಿಯೇಶನ್‌ ಸಂಚಾಲಕತ್ವದ ಬಂಟ್ಸ್‌ ಕಾಲೇಜ್‌ ಆಫ್‌ ಹೈಯರ್‌ ಎಜುಕೇಶನ್‌ ನೈಟ್‌ ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮವು ಜ. 13ರಂದು ಅಪರಾಹ್ನ ಜೂಯಿ ನಗರದ ಬಂಟ್ಸ್‌ ಸೆಂಟರ್‌ನ ಶ್ರೀಮತಿ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದ ಶ್ರೀಮತಿ ಶಶಿಕಲಾ ಮನ್‌ಮೋಹನ್‌ ಶೆಟ್ಟಿ ಸಂಕೀರ್ಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ವಾರ್ಷಿಕೋತ್ಸವ ಸಂಭ್ರಮದ ಅಂಗವಾಗಿ ಬಂಟ್ಸ್‌ ಪರಿಷ್ಕಾರ್‌ -2017- 2018 ಸಂಭ್ರಮವನ್ನು ಕಾಲೇ ಜಿನ ವಿದ್ಯಾರ್ಥಿಗಳಿಗಾಗಿ ಆಯೋ ಜಿಸಲಾಗಿತ್ತು. 

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ ಅವರು, ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲೈಫ್‌ ಲಾಂಗ್‌ ಲರ್ನಿಂಗ್‌ ಆ್ಯಂಡ್‌ ಎಕ್ಸಿಕ್ಯೂಟಿವ್‌ ಯುನಿ ರ್ವಸಿಟಿ ಆಫ್‌ ಇಂಡಿಯಾ ಇದರ ನಿರ್ದೇಶಕ ಡಾ| ದಿಲೀಪ್‌ ಎಸ್‌. ಪಾಟೀಲ್‌ ಮತ್ತು ಇನ್ನೋರ್ವ ಅತಿಥಿ ಉದ್ಯಮಿ, ವಿಶಾಲ್‌ ಪ್ಲಾಸ್ಟಿಕ್ಸ್‌ ಇಂಡಸ್ಟ್ರೀಸ್‌ ಇದರ ಸಿಇಒ ವಿ.ಕೆ. ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಿದರು.

ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ ಶೆಟ್ಟಿ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ, ಬೋಂಬೇ ಬಂಟ್ಸ್‌ ಅಸೋಸಿಯೇಶನ್‌ನ ಉಪಾಧ್ಯಕ್ಷ ಮುರಳಿ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಕೆ. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಗೌರವ ಕಾರ್ಯದರ್ಶಿ ಶ್ರೀಧರ ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ವಿಶ್ವನಾಥ್‌ ಎಸ್‌. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಎಸ್‌. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ಚರಣ್‌ ಆರ್‌. ಶೆಟ್ಟಿ ಅವರು ಉಪಸ್ಥಿತರಿದ್ದರು.  ಕಾಲೇಜಿನ ಪ್ರಾಂಶುಪಾಲ ಡಾ| ಎಸ್‌.ಎಸ್‌. ಭಂಡಾರಿ ಅವರು ಅತಿಥಿಗಳನ್ನು ಪರಿಚಯಿಸಿ, ಶಿಕ್ಷಣ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು.    

 ಚಿತ್ರ-ವರದಿ:ಸುಭಾಶ್‌ ಶಿರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next