Advertisement
Related Articles
Advertisement
ಇದೇ ಸಂದರ್ಭದಲ್ಲಿ ಮೀರಾ-ಭಾಯಂದರ್‌ನ ಹಿರಿಯ ಉದ್ಯಮಿ ಕನ್ನಡ ಸೇವಾ ಸಂಘದ ಸ್ಥಾಪಕ, ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಿಸಿಕೊಂಡ ಆನಂದ ಶೆಟ್ಟಿ ದಂಪತಿಯನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆ, ಸಮ್ಮಾನ ಪತ್ರ, ಮೈಸೂರು ಪೇಟ ತೊಡಿಸಿ, ಮಲ್ಲಿಗೆ ಹಾರ ಹಾಕಿ ಸಮ್ಮಾನಿಸಿ ಗೌರವಿಸಿದರು.
ಸಮ್ಮಾನ ಸ್ವೀಕರಿಸಿ ಮಾತನಾಡಿದ ಆನಂದ ಶೆಟ್ಟಿ ಅವರು, ಮೀರಾ-ಭಾಯಂದರ್ ಪರಿಸರದ ತುಳು-ಕನ್ನಡಿಗರನ್ನು ಕನ್ನಡ ಸೇವಾ ಸಂಘ ಎಂಬ ಸೂರಿನಡಿ ಸಂಘಟಿಸಿ ಸುಮಾರು 48 ವರ್ಷಗಳ ಕಾಲ ಸಮಾಜ ಸೇವೆಗೈದ ತೃಪ್ತಿ ನನಗಿದೆ. ಅಧಿಕಾರ, ಅಂತಸ್ತು, ಪ್ರತಿಷ್ಠೆ, ಸ್ವಾರ್ಥಗಳಿಂದ ದೂರವಿದ್ದು, ದುಡಿದರೆ ನಮ್ಮ ಹೆಸರು ಶಾಶ್ವತವಾಗುತ್ತದೆ. ಪತ್ನಿ ಇಂದಿರಾ ಅವರು ತನ್ನ ಎಲ್ಲ ಸಮಾಜಪರ ಕಾರ್ಯಗಳಿಗೆ ಸಹಕರಿಸುತ್ತಿದ್ದು, ಅವರ ಹೊಂದಾಣಿಕೆ, ತಾಳ್ಮೆ, ಕ್ಷಮತೆ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಯಿತು. ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು ಎಂದು ನುಡಿದರು.
ಸುಲೋಚನಾ ಶೆಟ್ಟಿ ಅವರು ಮಂಡಳಿಯ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ಪತ್ರಕರ್ತ ವೈ. ಟಿ. ಶೆಟ್ಟಿ ಹೆಜ್ಮಾಡಿ ಅವರು ಗಣ್ಯರನ್ನು ಪರಿಚಯಿಸಿದರು. ಲೇಖಕ ಅರುಣ್ ಕುಮಾರ್ ಶೆಟ್ಟಿ ಎರ್ಮಾಳ್ ಕಾರ್ಯಕ್ರಮ ನಿರ್ವಹಿಸಿದರು. ವಿಜಯಲಕ್ಷ್ಮೀ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಪದಾಧಿಕಾರಿಗಳಾದ ಹರ್ಷಕುಮಾರ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸೀತಾರಾಮ ಶೆಟ್ಟಿ ಅಮಾಸೆಬೈಲು, ಗೌರವ ಅತಿಥಿ ಪ್ರಭಾವತಿ ಶಿವರಾಮ ಶೆಟ್ಟಿ, ಭಜನ ಸಮಿತಿಯ ಕಾರ್ಯಾಧ್ಯಕ್ಷೆ ಸುಖವಾಣಿ ಡಿ. ಶೆಟ್ಟಿ, ಕಾರ್ಯದರ್ಶಿ ಶರ್ಮಿಳಾ ಕೆ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ದುರ್ಗಾ ಭಜನ ಮಂಡಲಿ ಸಿಲ್ವರ್‌ಪಾರ್ಕ್, ಹನುಮಾನ್ ಭಜನ ಮಂಡಳಿ ಭಾಯಂದರ್, ಬಂಟ್ಸ್ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿ, ಸದ್ಗುರು ಭಜನ ಮಂಡಳಿ ಮೀರಾರೋಡ್ ಇವರು ಭಜನ ಮಂಗಲೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಾಂತಿಂಜ ಜನಾರ್ದನ ಭಟ್ ಅವರು ವಿವಿಧ ಪೂಜೆಗಳನ್ನು ನೆರವೇರಿಸಿ ಆಶೀರ್ವಚನ ನೀಡಿ, ಸಾಧಕರನ್ನು ಗುರುತಿಸಿ ಗೌರವಿಸಿದಾಗ, ಸಮಾಜ ಸೇವಕರ ಮೌಲ್ಯತೆ ವೃದ್ಧಿಯಾಗುತ್ತದೆ. ಸಂಪ್ರದಾಯ ಉಡುಗೆ ತೊಡುಗೆಗಳ ಮೂಲಕ ಸ್ತಿÅàಪುರುಷರು ಸಂಸ್ಕೃತಿಯೊಂದಿಗೆ ಭಜನೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸ್ಮರಣೀಯವಾಗಿದೆ ಎಂದರು. ಮಹಿಳಾ ಸದಸ್ಯೆಯರು ಮಹಾಮಂಗಳಾರತಿಗೈದರು. ಕೊನೆಯಲ್ಲಿ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಪರಿಸರದ ಗಣ್ಯರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ವೇಗದ ಬದುಕಿನಲ್ಲಿ ಮಾನಸಿಕ ನೆಮ್ಮದಿಯ ಸ್ಥಿರತೆ ಕುಂಠಿತಗೊಂಡಿದೆ. ಅದನ್ನು ಆಧ್ಯಾತ್ಮಿಕ ಚಿಂತನೆ ಮತ್ತು ಭಜನೆಯ ಮೂಲಕ ಪರಿಹರಿಸಬೇಕು. – ಶಾರದಾ ಶ್ಯಾಮ್ ಶೆಟ್ಟಿ, ಮಹಿಳಾಧ್ಯಕ್ಷೆ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅರಸಿನ ಕುಂಕುಮ ಮಹಿಳಾ ಸಂಘಟನೆಯ ಸಮೃದ್ಧಿಯ ಸಂಕೇತವಾಗಿದೆ. ಭಜನೆ ಭಗ ವಂತನ ಸಾಮೀಪ್ಯ ಹೊಂದುವ ಸರಳ ಮಾಧ್ಯಮವಾಗಿದೆ
– ಶಾಂತಾ ಬಾಬು ಶೆಟ್ಟಿ, ಸಮಾಜ ಸೇವಕಿ ತಾಂತ್ರಿಕ ಯುಗ ವ್ಯವಹಾರಿಕ ತಾಣವಾಗಿದೆ. ಸಂಬಂಧಗಳ ಅಂತರ ಹೆಚ್ಚಾಗುತ್ತಿದೆ. ಸಂಘ ಟನೆಯ ಮೂಲಕ ಮನಸ್ಸು ಮನಸ್ಸುಗಳ ಬೆಸುಗೆಯೊಂದಿಗೆ ಮಾನವ ಸಂಬಂಧಗಳನ್ನು ವಿಶಾಲಗೊಳಿಸಲು ಸಾಧ್ಯವಾಗುತ್ತದೆ.
– ಶೀತಲ್ ಅರುಣ್ ಪಕ್ಕಳ ,ಸಂಘಟಕಿ, ಮೀರಾ-ಭಾಯಂದರ್ ಮಮತೆ, ಕರುಣೆ, ವಾತ್ಸಲ್ಯ, ಅಕ್ಕರೆ, ತಾಳ್ಮೆ ಮುಂತಾದ ಉತ್ತಮ ಗುಣಗಳ ಮೂಲಕ ಸಂಘಟನೆಯನ್ನು ಪ್ರಬಲಗೊಳಿಸಬೇಕು. ಹಲ ವಾರು ಮಂದಿ ಒಟ್ಟಾಗಿ ಬೆರೆತಾಗ ನಮ್ಮಲ್ಲಿ
ರುವ ನ್ಯೂನತೆಗಳನ್ನು ದೂರಿಕರಿಸಲು ಸಾಧ್ಯ.
-ಪ್ರತಿಭಾ ಆರ್. ಶೆಟ್ಟಿ,
ಕಾರ್ಯಾಧ್ಯಕ್ಷೆ, ಮಹಿಳಾ ವಿಭಾಗ, ಬಂಟ್ಸ್ ಫೋರಂ ಮೀರಾ-ಭಾಯಂದರ್ ಚಿತ್ರ-ವರದಿ:ರಮೇಶ್ ಅಮೀನ್