Advertisement

ಬಂಟ್ಸ್‌ ಅಸೋಸಿಯೇಶನ್‌ ಪುಣೆ: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

03:26 PM Jun 25, 2019 | Team Udayavani |

ಪುಣೆ: ಬಂಟ್ಸ್‌ ಅಸೋಸಿಯೇಶನ್‌ ಪುಣೆ ವತಿಯಿಂದ ಜೂ. 21ರಂದು ಹಡಪ್ಸ ರ್‌ನ ಅಮರ್‌ ಕಾಟೇಜ್‌ ಕ್ಲಬ್‌ ಹೌಸ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಸಂಘದ ಅಧ್ಯಕ್ಷ ಆನಂದ್‌ ಶೆಟ್ಟಿ ಮಿಯ್ನಾರ್‌ ಅವರು ದೀಪ ಪ್ರಜ್ವಲಿಸಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆನಂದ್‌ ಶೆಟ್ಟಿ ಅವರು ಮಾತನಾಡಿ, ಪ್ರತೀ ವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ಸಂಘದ ಮೂಲಕ ಆಚರಿಸುತ್ತಾ ಬಂದಿದ್ದೇವೆ. ಇದು ಕೇವಲ ಒಂದು ದಿವಸದ ಆಚರಣೆಗೆ ಸೀಮಿತವಾಗದೆ ದಿನನಿತ್ಯ ನಾವು ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡರೆ ನಾವು ರೋಗಮುಕ್ತರಾಗಿ ಜೀವಿಸಬಹುದಲ್ಲದೆ ನಮ್ಮ ಜೀವನ ಶೈಲಿಯೂ ಬದಲಾಗಿ ಮಾನಸಿಕ ಸಂತೋಷ, ನೆಮ್ಮದಿಯೂ ನಮ್ಮದಾಗುತ್ತದೆ. ಇಂದಿನ ನಮ್ಮ ಒತ್ತಡದ ಬದುಕಿನೆಡೆಯಲ್ಲಿ ಯೋಗವು ಅನಿವಾರ್ಯವಾಗಿದೆ. ಪ್ರತಿಯೊಬ್ಬರೂ ದಿನದ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ಮೀಸಲಿಡಬೇಕಾಗಿದೆ ಎಂದರು.

ಕೆಮೂ¤ರು ಸುಧಾಕರ ಶೆಟ್ಟಿ ಯೋಗಾ ಭ್ಯಾಸಗಳನ್ನು ಮಾಡಿಸಿ, ಮಾಹಿತಿಗಳನ್ನು ನೀಡುತ್ತಾ ಅಷ್ಟಾಂಗ ಯೋಗದ ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇದರ ಅನುಸಂಧಾನವನ್ನು ದೈನಂದಿನ ನಮ್ಮ ಜೀವನದಲ್ಲಿ ಮಾಡಿಕೊಂಡರೆ ಶಾರೀರಿಕ ಶುದ್ಧಿಯಾಗುವುದಲ್ಲದೆ, ನಿಯಮಿತ ಯೋಗಾ ಭ್ಯಾಸದಿಂದ ನಮ್ಮ ಶರೀರದ ಆಂತರಿಕ ಹಾಗೂ ಬಾಹ್ಯ ಶುದ್ಧಿಗೊಂಡು ಆರೋಗ್ಯವಂತರಾಗಿ ಬಾಳಬಹುದಾಗಿದೆ ಎಂದರು.

ಲತಾ ಸುಧಾಕರ ಶೆಟ್ಟಿ ಹಾಗೂ ಸುಮನಾ ಸೀತಾರಾಮ ಹೆಗ್ಡೆ ಪ್ರಾರ್ಥಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪ ಅರವಿಂದ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯರಿಗೆ ವಂದಿಸಿದರು. ಭಾರತೀಯ ಯೋಗ ಸಂಸ್ಥಾನ (ರಿ )ದೆಹಲಿ ಇದರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು. ವಿವಿಧ ಯೋಗ ವ್ಯಾಯಾ ಮಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ ಇನ್ನಿತರ ಯೋಗಳನ್ನು ಮಾಡಿಸಲಾಯಿತು.

ಮಾಜಿ ಅಧ್ಯಕ್ಷರಾದ ನಾರಾಯಣ ಶೆಟ್ಟಿ, ಜಯ ಶೆಟ್ಟಿ ಮಿಯ್ನಾರ್‌, ಪ್ರಧಾನ ಕಾರ್ಯದರ್ಶಿ ಅರವಿಂದ ರೈ, ಕೋಶಾಧಿಕಾರಿ ದಿನೇಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಎ. ರೈ, ಪದಾಧಿಕಾರಿಗಳಾದ ಉಷಾ ಉÇÉಾಸ್‌ ಶೆಟ್ಟಿ, ಲತಾ ಸುಧಾಕರ ಶೆಟ್ಟಿ, ಸುಮನಾ ಸೀತಾರಾಮ ಹೆಗ್ಡೆ, ಪ್ರತೀûಾ ಎ. ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಧಾ ಎನ್‌. ಶೆಟ್ಟಿ, ಸರೋಜಿನಿ ಜೆ. ಶೆಟ್ಟಿ, ಮಲ್ಲಿಕಾ ಆನಂದ್‌ ಶೆಟ್ಟಿ, ಯುವ ವಿಭಾಗದ ನಮ್ರತಾ ಜಯ ಶೆಟ್ಟಿ, ನಿಖೀಲ್‌ ಎನ್‌. ಶೆಟ್ಟಿ, ಅಕ್ಷಿತ್‌ ಅರವಿಂದ್‌ ರೈ ಉಪಸ್ಥಿತರಿದ್ದರು. ಲಘು ಉಪಾಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಭಾರತೀಯ ಯೋಗ ಸಂಸ್ಥಾನದ ಸದಸ್ಯರು ಉಪಸ್ಥಿತರಿದ್ದು ಸಹಕಾರ ನೀಡಿದರು. ಅವರನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next