Advertisement

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ  ಪಯ್ಯಡೆ ಅಧಿಕಾರ ಸ್ವೀಕಾರ

03:48 PM Nov 17, 2017 | Team Udayavani |

ಮುಂಬಯಿ: ಬಂಟರ ಸಂಘ ಮುಂಬಯಿ ಇದರ 2017-2020ನೇ ಸಾಲಿನ ಕಾರ್ಯಾವಧಿಯ 29ನೇ ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಅವಿರೋಧವಾಗಿ ಆಯ್ಕೆಯಾಗಿರುವ ಮುಂಬಯಿಯ ಹೆಸರಾಂತ ಹೊಟೇಲ್‌ ಉದ್ಯಮಿ, ಮಹಾದಾನಿ ಹಾಗೂ ಸಮಾಜ ಸೇವಕ ಪದ್ಮನಾಭ ಎಸ್‌. ಪಯ್ಯಡೆ ಅವರು ನಿರ್ಗಮನ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರಿಂದ ಅಧಿಕಾರ ಸ್ವೀಕರಿಸಿದರು.

Advertisement

ನ. 15ರಂದು ಸಂಜೆ ಬಂಟರ ಭವನದ ಶ್ರೀಮತಿ ರಂಜನಿ ಸುಧಾಕರ ಹೆಗ್ಡೆ (ತುಂಗಾ) ಎನೆಕ್ಸ್‌ ಸಂಕೀರ್ಣದ ನಗ್ರಿಗುತ್ತು ಶ್ರೀಮತಿ ಸಂಧ್ಯಾ ವಿವೇಕ್‌ ಶೆಟ್ಟಿ ಹವಾನಿಯಂತ್ರಿತ ಕಿರು ಸಭಾಗೃಹದಲ್ಲಿ ಜರಗಿದ ಸಂಘದ ವಾರ್ಷಿಕ ಮಹಾಸಭೆಯ ಬಳಿಕದ ಮೊದಲನೇ ಮಾಸಿಕ ಸಭೆಯಲ್ಲಿ ನಿರ್ಗಮನ ಅಧ್ಯಕ್ಷ ಪ್ರಭಾಕರ್‌ ಎಲ್‌. ಶೆಟ್ಟಿ ಅವರು ನೂತನ ಅಧ್ಯಕ್ಷ ಪದ್ಮನಾಭ್‌ ಎಸ್‌. ಪಯ್ಯಡೆ ಅವರಿಗೆ ಪುಷ್ಪ ಗುತ್ಛ ನೀಡುವ ಮೂಲಕ  ಪದವಿ ಅಧಿಕಾರವನ್ನು ಹಸ್ತಾಂತರಿಸಿ ಅಭಿನಂದಿಸಿದರು.ನಿರ್ಗಮನ ಅಧ್ಯಕ್ಷರಿಗೆ ನೂತನ ಅಧ್ಯಕ್ಷರು ಹೂಗುತ್ಛ ನೀಡಿ ಕೃತಜ್ಞತೆ ಸಲ್ಲಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ನೂತನ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು,  ತನ್ನನ್ನು ಅಧ್ಯಕ್ಷ ಪದವಿಗೆ ಅವಿರೋಧವಾಗಿ ಆಯ್ಕೆ ಮಾಡಿದ ಬಂಟ ಬಾಂಧವರಿಗೆ ಕೃತಜ್ಞತೆ ಸಲ್ಲಿಸುತ್ತ, ಮಹತ್ತರ ಜವಾವಾªರಿಯುಳ್ಳ ಬಂಟರ ಸಂಘದ ಅಧ್ಯಕ್ಷ ಪದವಿಯನ್ನು ವಿನಮ್ರವಾಗಿ ಸ್ವೀಕರಿಸಿದ್ದೇನೆ ಎಂದು ನುಡಿದರು. ಐತಿಹಾಸಿಕ ದಾಖಲೆಯುಳ್ಳ  ಪ್ರತಿಷ್ಠಿತ ಸಂಸ್ಥೆ ಬಂಟರ ಸಂಘಕ್ಕಾಗಿ ನಮ್ಮ ಹಿರಿಯರು ಅರ್ಪಿಸಿದ ಪರಿಶ್ರಮ, ಕಾಳಜಿಯನ್ನು ಮುಂದೆಯೂ ನಾವು ಉಳಿಸಿಕೊಂಡು-ಬೆಳೆಸಿಕೊಂಡುಬರಬೇಕಾ ಗಿದೆ ಎಂದು ಅವರು ಸದಸ್ಯರಲ್ಲಿ ವಿನಂತಿಸಿದರು.

ನಾವು ಹುದ್ದೆಗಾಗಿ ಕೆಲಸ ಮಾಡುವುದು ಸಲ್ಲದು. ಬಂಟರ ಸಂಘದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಾವು ಕಾರ್ಯ ನಿರ್ವಹಿಸ ಬೇಕು. ಸಂಘದ ಸೇವೆಗಾಗಿ ಮುಂದೆ ಬರುವಪ್ರತಿಯೊಬ್ಬರಿಗೂ ಅವಕಾಶ ಕಲ್ಪಿಸುವ ಭರವಸೆಯನ್ನು ಪಯ್ಯಡೆ ಅವರು ನೀಡಿದರಲ್ಲದೆ, ಮುಂದಿನ 3 ವರ್ಷಗಳ ಅವಧಿಯಲ್ಲಿ ನಡೆಯಲಿರುವ ಬಂಟರ ಸಂಘದ ಯೋಜನೆ ಹಾಗೂ ಕಾರ್ಯಚಟುವಟಿಕೆಗಳಲ್ಲಿ ತನ್ನೊಂದಿಗೆ ಸಹಕರಿಸುವಂತೆ ಸದಸ್ಯರು ಮತ್ತು ಪದಾಧಿ ಕಾರಿಗಳಲ್ಲಿ ವಿನಂತಿಸಿದರು.

ನಿರ್ಗಮನ ಅಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ ಅವರು ಮಾತನಾಡುತ್ತ,  ಸುಮಾರು ಒಂದೂವರೆ ವರ್ಷದ ತನ್ನ ಆಡಳಿತಾವಧಿಯಲ್ಲಿ ತನ್ನೊಂದಿಗೆ ಸಹಕರಿಸಿದ ಪದಾಧಿಕಾರಿಗಳು,  ವಿಶ್ವಸ್ತರು, ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಉಪ ಸಮಿತಿಗಳು, ಸಂಘದ ಪ್ರಾದೇಶಿಕ ಸಮಿತಿಗಳ ಸಹಕಾರಕ್ಕೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲು ಬಯಸುತ್ತೇನೆ. ದೇವರ ಆಶೀರ್ವಾದದಿಂದ ಸಂಘಕ್ಕೆ ಶಕ್ತಿ ಮೀರಿ ದುಡಿದಿದ್ದೇನೆ. ತಿಳಿಯದೆ ತನ್ನಿಂದ ಯಾವುದೇ ಪ್ರಮಾದವಾಗಿದ್ದರೆ, ಅದಕ್ಕೆ ನಾನು ಕ್ಷಮೆಯನ್ನು ಕೋರುತ್ತೇನೆ. ಸಂಘದ ಅಭಿವೃದ್ಧಿಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ದುಡಿಯೋಣವೆಂದರು.

Advertisement

ಅನಂತರ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ ಪದ್ಮನಾಭ ಎಸ್‌. ಪಯ್ಯಡೆ ಅವರು 2017-20ನೇ ಸಾಲಿನ ಪದಾಧಿಕಾರಿಗಳು, ಹತ್ತು ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಉಪ ಸಮಿತಿಗಳ ಹೆಸರನ್ನು ಘೋಷಿಸಿದರು.

ಸಂಘದ ನೂತನ ಉಪಾಧ್ಯಕ್ಷರಾಗಿ ಆಹಾರ್‌ನ ಮಾಜಿ ಅಧ್ಯಕ್ಷ, ಸಂಘದ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ , ಹೊಟೇಲ್‌ ಉದ್ಯಮಿ ಚಂದ್ರಹಾಸ್‌ ಕೆ.ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ  ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿಯಾಗಿ ಪ್ರವೀಣ್‌ ಬಿ. ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಮಹೇಶ್‌ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಗುಣಪಾಲ್‌ ಶೆಟ್ಟಿ ಐಕಳ ಅವರು ನೇಮಕಗೊಂಡರು.

ಸಂಘದ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಉಪ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಗೌರವ ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ, ಗೌರವ ಕೋಶಾಧಿಕಾರಿ ಆಶಾ ವಿ. ರೈ, ಜೊತೆ ಕಾರ್ಯದರ್ಶಿ ಮನೋರಮಾ ಎನ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ರತ್ನಾ ಪಿ.ಶೆಟ್ಟಿ  ಅವರಿಗೆ ಅಧ್ಯಕ್ಷ ಪದ್ಮನಾಭ ಎಸ್‌.ಪಯ್ಯಡೆ ಅವರು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.

ಸಂಘದ ಯುವ ವಿಭಾಗದ  ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ, ಉಪಾಧ್ಯಕ್ಷ ಸಾಗರ ದಿವಾಕರ್‌ ಶೆಟ್ಟಿ, ಕಾರ್ಯದರ್ಶಿ ಅನುಶ್ರೀ ಸುನೀಲ್‌ ಶೆಟ್ಟಿ, ಕೋಶಾಧಿಕಾರಿ ನಿಲೇಶ್‌ ಎಸ್‌. ಶೆಟ್ಟಿ, ಜೊತೆ ಕಾರ್ಯದರ್ಶಿ ವಿಕಾಸ್‌ ವಿ. ಶೆಟ್ಟಿ, ಜತೆ ಕೋಶಾಧಿಕಾರಿ ಸವಿನ್‌ ಜಗದೀಶ್‌ ಶೆಟ್ಟಿ ಅವರನ್ನು ಅಧ್ಯಕ್ಷರು ಅಭಿನಂದಿಸಿದರು.

ಚಿತ್ರ,ವರದಿ: ಪ್ರೇಮನಾಥ ಮುಂಡ್ಕೂರು
 

Advertisement

Udayavani is now on Telegram. Click here to join our channel and stay updated with the latest news.

Next