Advertisement

Buntara Sangha Perdoor; ಜ. 14: ಸಮುದಾಯ ಭವನ ಲೋಕಾರ್ಪಣೆ

12:12 AM Jan 08, 2024 | Team Udayavani |

ಹೆಬ್ರಿ: ಪೆರ್ಡೂರಿನಲ್ಲಿ 1991ರಲ್ಲಿ ಅಸ್ತಿತ್ವಕ್ಕೆ ಬಂದ ಬಂಟರ ಸಂಘ ಪೆರ್ಡೂರು ಮಂಡಲದ ನೇತೃತ್ವದಲ್ಲಿ ಸಮಾಜಮುಖಿ ಚಿಂತಕ ಕೆ. ಶಾಂತಾರಾಮ ಸೂಡ ಅವರ ಮುಂದಾಳತ್ವದಲ್ಲಿ ಸಮಾಜ ಬಾಂಧವರು ಹಾಗೂ ದಾನಿಗಳ ನೆರವಿನೊಂದಿಗೆ ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಸಮುದಾಯ ಭವನ ಜ. 14ರಂದು ಲೋಕಾರ್ಪಣೆಗೊಳ್ಳಲಿದೆ.

Advertisement

ಉಡುಪಿ-ಆಗುಂಬೆ ರಾ. ಹೆ. 169(ಎ)ಕ್ಕೆ ತಾಗಿಕೊಂಡು ಪೆರ್ಡೂರು ಸಮೀಪ ಜೋಗಿಬೆಟ್ಟಿನ 3.5 ಎಕರೆಪ್ರದೇಶದಲ್ಲಿ ಭವನ ನಿರ್ಮಾಣ ಗೊಂಡಿದೆ. ಉಡುಪಿ, ದ.ಕ. ಜಿಲ್ಲೆ ಮಾತ್ರವಲ್ಲದೆ ರಾಜ್ಯ ಹಾಗೂ ಹೊರ ರಾಜ್ಯದ
ಜನರನ್ನು ಆಕರ್ಷಿಸುವಂತೆ ಸಮುದಾ ಯ ಭವನ ಸಿದ್ಧಗೊಂಡಿದ್ದು ಸಹಸ್ರ ಸಂಖ್ಯೆ ಜನಸೇರುವ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿದೆ.

ಭವನದ ವೈಶಿಷ್ಟ್ಯ
ಅತ್ಯಾಕರ್ಷಕ ಒಳಾಂಗಣ ವಿನ್ಯಾಸ, 900ಕ್ಕೂ ಅಧಿಕ ಜನ ಕುಳಿತುಕೊಳ್ಳುವ ಹವಾನಿಯಂತ್ರಿತ ಸಭಾಂಗಣ, 600ಕ್ಕೂ ಹೆಚ್ಚು ಜನ ಕುಳಿತುಕೊಳ್ಳಬಹುದಾದ ಊಟದ ಹವಾನಿಯಂತ್ರಿತ ಹಾಲ್‌, ವಿಶಾಲ ವೇದಿಕೆ, ಗ್ರೀನ್‌ ರೂಮ್‌, ಸಸ್ಯಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಅತ್ಯಾಧುನಿಕ ಕಿಚನ್‌ ಹಾಲ್‌, ಉಳಿದುಕೊಳ್ಳಲು ಯೋಗ್ಯವಾದ ಆಧುನಿಕ ಹವಾನಿಯಂತ್ರಿತ ಕೊಠಡಿ ವ್ಯವಸ್ಥೆ, ದಿನದ 24 ಗಂಟೆ ಲಿಫ್ಟ್ ಹಾಗೂ ನೀರಿನ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲಿದೆ.

ಬಂಟರ ಯಾನೆ ನಾಡವರ ಸಂಘ ಪೆರ್ಡೂರು ಮಂಡಲ ಹೆಸರಿನೊಂದಿಗೆ ಅಲಂಗಾರು ನಾರಾಯಣ ಹೆಗ್ಡೆ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತು. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲಿ ನಿರತವಾಗಿದೆ. ಶಾಂತಾರಾಮ ಸೂಡ ನೇತೃತ್ವದಲ್ಲಿ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ ನಿ. ಸಹಕಾರಿ ಸಂಘವನ್ನು ಪ್ರಾರಂಭಿಸಿ ಪ್ರತೀ ವರ್ಷ ಸಂಘದ ಲಾಭಾಂಶದಲ್ಲಿ ಲಕ್ಷಾಂತರ ರೂ.ಗಳನ್ನು ವಿದ್ಯಾರ್ಥಿವೇತನ, ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ವಿತರಿಸುತ್ತಿದೆ. ಇದೀಗ ಸುಂದರ ಸಮುದಾಯ ಭವನ ನಿರ್ಮಾಣಗೊಂಡಿದೆ.

ಪೆರ್ಡೂರು ಮಂಡಲ ವ್ಯಾಪ್ತಿಯ ಪೆರ್ಡೂರು, ಬೈರಂಪಳ್ಳಿ, 41ನೇ ಶಿರೂರು, ಬೆಳ್ಳರ್ಪಾಡಿ ಗ್ರಾಮದ ಬಂಟ ಸಮಾಜ ಬಂಧುಗಳ ಪ್ರೋತ್ಸಾಹ ಮತ್ತು ದಾನಿಗಳ ಸಹಕಾರದಿಂದ ಪೆರ್ಡೂರಿನಲ್ಲಿ ಅತ್ಯಾಕರ್ಷಕ ವಿನ್ಯಾಸದಲ್ಲಿ ಬೃಹತ್‌ ಸಮುದಾಯ ನಿರ್ಮಾಣವಾಗಿದೆ.
– ಕೆ. ಶಾಂತಾರಾಮ ಸೂಡ, ಅಧ್ಯಕ್ಷರು, ಬಂಟರ ಸಂಘ ಪೆರ್ಡೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next