Advertisement
ಅತಿಥಿಯಾಗಿ ಪಾಲ್ಗೊಂಡ ಸಮನ್ವಯ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಪಯ್ಯಡೆ ಅವರು ಮಾತನಾಡಿ, ಮಕ್ಕಳಿಗೆ ಕೊಡಲ್ಪಡುವ ಅನುದಾನದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ಮಕ್ಕಳನ್ನು ಅಧುನಿಕ ಜಗತ್ತಿನ ಗುಂಗಿನಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರದೊಂದಿಗೆ ಬೆಳೆಸಬೇಕು. ಶಿಕ್ಷಣವು ಜೀವನದ ಕಣ್ಣಿದ್ದಂತೆ. ಮಕ್ಕಳನ್ನು ಪೋಷಿಸಿ, ಬೆಳೆಸುವುದರೊಂದಿಗೆ ಆದರ್ಶ ಪ್ರಜೆಗಳಾಗಿ ಸಮಾಜಕ್ಕೆ ಅರ್ಪಿಸುವುದು ನಮ್ಮ ಎಲ್ಲರ ಕರ್ತವ್ಯವಾಗಿದೆ ಎಂದರು.
Related Articles
Advertisement
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ಪದ್ಮನಾಭ ಪಯ್ಯಡೆ ಅವರು ಮಾತನಾಡಿ, ಸಂಘ ಇರುವುದು ಸಮಾಜಕ್ಕಾಗಿ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದಂತಹ ನಮ್ಮಿà ಸಮಾಜದ ಸಂಸ್ಥೆ ಇಂದು ನಮಗಾಗಿ ಬೆಳೆದು ನಿಂತಿದೆ. ನಾವು ಸಂಘದಲ್ಲಿ ಸಹಭಾಗಿಯಾಗಿ ಯಾಗುವುದರೊಂದಿಗೆ ನಮ್ಮಲ್ಲಿ ಸಮನ್ವತೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ. ಮಕ್ಕಳು-ಪಾಲಕರಲ್ಲಿ ಪಡೆದುಕೊಡುವ ಮನೋಭಾವ ಬೆಳೆದು ಬಂದು ರಾಷ್ಟÅ ನಿರ್ಮಾಣದಲ್ಲಿ ಜವಾಬ್ದಾರಿ ವಹಿಸಬೇಕು. ಜೀವನದಲ್ಲಿ ಪ್ರಯತ್ನದ ಛಲವಿದ್ದಲ್ಲಿ ಫಲ ಖಂಡಿತವಾಗಿಯೂ ಸಿಗುತ್ತದೆ. ಬಂಟರ ಸಂಘಕ್ಕೆ ಸುಮಾರು 90 ವರ್ಷಗಳ ಇತಿಹಾಸವಿದೆ. ನಮ್ಮ ಪೂರ್ವಜರು ಕಟ್ಟಿ ಬೆಳೆಸಿದಂತಹ ನಮ್ಮ ಸಮಾಜದ ಸಂಸ್ಥೆಯು ಹೆಚ್ಚಿನ ಯಶಸ್ಸನ್ನು ಕಾಣುವಲ್ಲಿ ನಾವೆಲ್ಲರು ಒಂದಾಗಿ ಶ್ರಮಿಸೋಣ ಎಂದರು.
ಪ್ರಾರಂಭದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಬಿಳಿಯೂರುಗುತ್ತು ಅರುಣೋದಯ ರೈ ಅವರು ಸ್ವಾಗತಿಸಿದರು. ಅನುಷಾ ಶೆಟ್ಟಿ ಪ್ರಾರ್ಥನೆಗೈದರು. ನಗರ ಸೇವಕ ಪ್ರಮೋದ್ ಸಾವಂತ್ ಅವರನ್ನು ಗಣ್ಯರು ಗೌರವಿಸಿದರು. ಪುಟಾಣಿಗಳಿಂದ ಸ್ವಾಗತ ನೃತ್ಯ ನಡೆಯಿತು. ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಂಟರ ಸಂಘದ ಜತೆ ಕಾರ್ಯದರ್ಶಿ ಕಿಶೋರ್ ಕುಮಾರ್ ಕುತ್ಯಾರ್, ಸ್ಥಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಿವರಾಮ್ ಶೆಟ್ಟಿ, ಸುಭಾಷ್ ಶೆಟ್ಟಿ, ಲೋಕೇಶ್ ಶೆಟ್ಟಿ, ಸ್ಥಳೀಯ ಸಮಿತಿಯ ಉಪಾಧ್ಯಕ್ಷ ಉದಯ ಹೆಗ್ಡೆ, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ತೆಳ್ಳಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಶೇಖರ ವಿ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸಮಾಜದ ಮಕ್ಕಳಿಗೆ ಗಣ್ಯರು ಶೈಕ್ಷಣಿಕ ನೆರವು ವಿತರಿಸಿ ಶುಭ ಹಾರೈಸಿದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಶಿಕ್ಷಣವು ಜೀವನದ ಬಂಡವಾಳವಾಗಿದ್ದು, ವಿದ್ಯೆಗೆ ಹೆಚ್ಚಿನ ಮಹತ್ವವನ್ನು ನೀಡುವುದು ಅಗತ್ಯವಾಗಿದೆ. ಬಂಟರ ಸಂಘವು ಹಲವಾರು ವರ್ಷಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾ ಬಂದಿದ್ದು, ಇದಕ್ಕೆ ಪೊವಾಯಿ ಹಾಗೂ ಕುರ್ಲಾದಲ್ಲಿರುವ ಶಿಕ್ಷಣ ಸಂಸ್ಥೆಗಳು ಸಾಕ್ಷಿಯಾಗಿವೆ. ಸಮಾಜ ಬಾಂಧವರಿಗೆ ಮಾತ್ರವಲ್ಲದೆ, ಇತರ ಭಾಷಿಗರ ಶಿಕ್ಷಣದ ಹಸಿವನ್ನು ತಣಿಸುವ ಕಾರ್ಯದಲ್ಲಿ ಬಂಟರ ಸಂಘವು ನಿರತವಾಗಿದೆ – ಪ್ರಭಾಕರ ಎಲ್. ಶೆಟ್ಟಿ ಅಧ್ಯಕ್ಷರು: ಬಂಟರ ಸಂಘ ಮುಂಬಯಿ).