Advertisement
ಜ. 14 ಮಕರ ಸಂಕ್ರಾಂತಿಯಂದು ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದವರು ಪೊವಾಯಿ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಕುಲದ ಅಡಿಟೋರಿಯಂನಲ್ಲಿ ಏರ್ಪಡಿಸಿದ್ದ ಸೀರೆ ಹಾಗೂ ವಜ್ರಾಭರಣ ಪ್ರದರ್ಶನ ಹಾಗೂ ಮಾರಾಟದ ಉದ್ಘಾಟನೆಗೈದು ಅವರು ಶುಭಹಾರೈಸಿದರು.
Related Articles
Advertisement
ಅನಿತಾ ಆರ್.ಕೆ. ಶೆಟ್ಟಿ, ಆರ್.ಜಿ. ಶೆಟ್ಟಿ, ರಮೇಶ್ ರೈ, ಡಿ.ಕೆ. ಶೆಟ್ಟಿ, ಸುನಿಲ್ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಶೋಭಾ ಎಸ್. ಶೆಟ್ಟಿ, ಸ್ಮಿತಾ ಶೆಟ್ಟಿ, ಪ್ರಶಾಂತಿ ಶೆಟ್ಟಿ, ಸವಿತಾ ಶೆಟ್ಟಿ, ವಿಂದ್ಯಾ ಬಲ್ಲಾಳ್, ನಿವೇದಿತಾ ಶೆಟ್ಟಿ, ಗೀತಾ ಶೆಟ್ಟಿ, ಪ್ರೇಮಾ ಶೆಟ್ಟಿ, ಜ್ಯೋತಿ ಶೆಟ್ಟಿ, ಶೈಲಾ ಶೆಟ್ಟಿ, ಸುಜಾತಾ ಶೆಟ್ಟಿ ಕಲಿನಾ, ವಜ್ರಾ ಶೆಟ್ಟಿ, ಶೋಭಾ ರೈ, ವಿನುತಾ ಶೆಟ್ಟಿ ಮೊದಲಾದವರು ಸಹಕರಿಸಿದರು.
ಪ್ರಶಾಂತಿ ಡಿ. ಶೆಟ್ಟಿ ಪ್ರಾರ್ಥನೆಗೈದರು. ಮಹಿಳಾ ವಿಭಾಗದ ಉಪ ಕಾರ್ಯಾಧಕ್ಷೆ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಮ್ಮ ಹೊಸ ಸಮಿತಿಯ ಮೊದಲ ಹೆಜ್ಜೆ ಇದು. ಮಹಿಳಾ ವಿಭಾಗದ ಕೆಲವು ವರ್ಷದ ಹಿಂದಿನ ಯೋಜನೆಯಾದರೂ ಇಂದು ಅದಕ್ಕೆ ಒಳ್ಳೆಯ ದಿನ ಕೂಡಿ ಬಂದಿದೆ. ಹಲವು ದಿನಗಳ ಪರಿಶ್ರಮದಿಂದ ಮಹಿಳಾ ವಿಭಾಗದವರ ಈ ಕಾರ್ಯಕ್ರಮ ಯಶಸ್ವಿಯಾಗಿದೆ. ಮುಂದೆಯೂ ಸಮಿತಿಯ ಸದಸ್ಯರ ಸಹಕಾರ ಸದಾ ಇದೆ. ನಾವೆಲ್ಲರೂ ಒಂದು ಮನೆಯ ಸದಸ್ಯರಂತೆ ಒಗ್ಗಟ್ಟಿನಿಂದ ಸತ್ಕಾರ್ಯಗಳನ್ನು ಮಾಡೋಣ.-ಡಾ| ಆರ್. ಕೆ. ಶೆಟ್ಟಿ, ನೂತನ ಕಾರ್ಯಾಧ್ಯಕ್ಷರು,
ಬಂಟರ ಸಂಘ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ನನ್ನ ಬಹುದಿನಗಳ ಕನಸೊಂದು ಇಂದು ನನಸಾಗಿದೆ. ಈ ಕಾರ್ಯಕ್ರಮವು ಯಶಸ್ವಿಯಾಗಿದೆ. ಮುಂದೆಯೂ ಆಗುತ್ತದೆ ಎಂಬ ಭರವಸೆ ನನಗಿದೆ. ಇಂದು ಕಾರ್ಯ ನೆರವೇರಿದ ಸಂತೋಷ ನಮ್ಮ ಮಹಿಳಾ ವಿಭಾಗಕ್ಕಿದೆ. ನಾವೆಲ್ಲರು ಒಗ್ಗಟ್ಟು ಮತ್ತು ಒಮ್ಮತದಿಂದ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜ ಬಾಂಧವರಿಗೆ ಸಹಕರಿಸೋಣ.
– ಸುಜಾತಾ ಗುಣಪಾಲ್ ಶೆಟ್ಟಿ, ಸಂಚಾಲಕಿ, ಮಹಿಳಾ ವಿಭಾಗ, ಅಂಧೇರಿ ಬಾಂದ್ರಾ ಸಮಿತಿ