Advertisement

ಸಾಹಸ ಪ್ರಿಯರಿಗೆ ಮಲ್ಪೆ ಬೀಚ್‌ನಲ್ಲಿ ಬಂಗೀ ಟ್ರ್ಯಾಂಪ್‌ ಜಂಪ್‌

06:40 AM Mar 17, 2018 | |

ಮಲ್ಪೆ: ಸಾಹಸ ಪ್ರಿಯರಿಗೆ ಇದೀಗ ಮಲ್ಪೆ ಬೀಚ್‌ನಲ್ಲಿ ಬಂಗೀ ಟ್ರ್ಯಾಂಪ್‌ ಜಂಪ್‌ ಆರಂಭಗೊಂಡಿದೆ. ಇದೊಂದು ಥ್ರಿಲ್ಲಿಂಗ್‌ ಅಡ್ವೆಂಚರ್‌ ಸಾಫ್ಟ್‌ ಗೇಮ್‌ ಆಗಿದ್ದು  ಎರಡು ಕಂಬಗಳ ಮಧ್ಯೆ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಎತ್ತರಕ್ಕೆ ಜಿಗಿಯಬಹುದಾಗಿದೆ. ಇಲ್ಲಿ ಸುಮಾರು 20 ಅಡಿಗಳಷ್ಟು ಎತ್ತರಕ್ಕೆ ಜಂಪ್‌ ಮಾಡಲು ಸಾಧ್ಯವಿದೆ. ಸುರಕ್ಷತೆಗಾಗಿ ಕೆಳಭಾಗದಲ್ಲಿ ಸೀ³Åಂಗ್‌ ಅಳವಡಿಸಿ ವೃತ್ತಾಕಾರದ ಟ್ರ್ಯಾಂಪೊಲೀನ್‌ (ರಬ್ಬರ್‌ ಶೀಟ್‌)ಹಾಕಲಾಗಿದೆ. ಸುಮಾರು 70 ಕೆ.ಜಿ. ಭಾರವನ್ನು ಹೋರುವ ಸಾಮರ್ಥ್ಯವನ್ನು ಹೊಂದಿರುವ ಈ ಬಂಗೀ ಜಂಪ್‌ ಮಾಡಲು 5 ರಿಂದ 70 ವರ್ಷದವರಗಿವರಿಗೆ  ಮಾತ್ರ ಅವಕಾಶವನ್ನು ನೀಡಲಾಗಿದೆ.

Advertisement

ಮಲ್ಪೆ ಶಿವಪಂಚಾಕ್ಷರಿ ಭಜನಾ ಮಂದಿರದ ಅರ್ಚಕ  ಶೇಷಪ್ಪ ಸಾಲ್ಯಾನ್‌ ಅವರು ಈ ನೂತನ ಬಂಗೀ ಜಂಪ್‌ಗೆ ಚಾಲನೆ ನೀಡಿದರು. ಮಂದಿರದ ಅಧ್ಯಕ್ಷ ರವಿ ಸಾಲ್ಯಾನ್‌, ಹಿಂದೂ ಯುವಸೇವೆ ಜಿಲ್ಲಾಧ್ಯಕ್ಷ ಮಂಜುಕೊಳ,  ಶಿವ ಬೀಚ್‌, ರಾಜೇಶ್‌ ಕುಂದರ್‌, ಬಾಲಚಂದ್ರ ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next