Advertisement

ದಕ್ಷಿಣ ಕನ್ನಡ: ಕೆಲವೆಡೆ ಕಲ್ಲು ತೂರಾಟ, ರಸ್ತೆ ತಡೆ, ಟೈರ್‌ಗೆ ಬೆಂಕಿ

11:37 AM Sep 11, 2018 | Team Udayavani |

ಮಂಗಳೂರು: ಕೆಲವು ಕಡೆ ಬಸ್‌ ಮತ್ತು ಇತರ ವಾಹನಗಳಿಗೆ ಕಲ್ಲು ತೂರಿದ್ದನ್ನು ಹೊರತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‌ ಶಾಂತಿಯುತವಾಗಿತ್ತು. ಬಸ್‌ಗಳು ರಸ್ತೆಗಿಳಿಯದ ಕಾರಣ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲೆ, ಕಾಲೇಜುಗಳಿಗೆ ರಜೆ ಸಾರಲಾಗಿತ್ತು. ಹಾಲು ಮತ್ತು ಔಷಧ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಆಟೋರಿಕ್ಷಾಗಳ ಓಡಾಟ ವಿರಳವಾಗಿತ್ತು. ಖಾಸಗಿ ವಾಹನಗಳ ಓಡಾಟಕ್ಕೆ ಧಕ್ಕೆಯಾಗಿಲ್ಲ.

Advertisement

ಬಸ್ಸಿಗೆ ಕಲ್ಲು
ಬಿ.ಸಿ. ರೋಡ್‌ನ‌ಲ್ಲಿ ಬೆಳಗ್ಗೆ 6.45ಕ್ಕೆ ಬೆಂಗಳೂರು-ಮಂಗಳೂರು ಕೆಎಸ್ಸಾ ರ್ಟಿಸಿ ಎ.ಸಿ. ಸ್ಲಿಪರ್‌ ಬಸ್ಸಿಗೆ ಕಲ್ಲು ತೂರ ಲಾಗಿದ್ದು, ಬಸ್ಸಿನ ಮುಂಭಾಗದ ಗಾಜಿಗೆ ಹಾನಿಯಾಗಿದೆ. ಜನರಿಗೆ ಅಪಾಯ ಉಂಟಾಗಿಲ್ಲ. ಬಂಟ್ವಾಳ ಮತ್ತು ಬೆಳ್ತಂಗಡಿಯಲ್ಲಿ ಎರಡು ಬಸ್‌ಗಳಿಗೆ ಕಲ್ಲು ತೂರಿದ ಘಟನೆ ನಡೆದಿದೆ.


ಟೈರ್‌ಗೆ ಬೆಂಕಿ

ಮಂಗಳೂರಿನ ಜ್ಯೋತಿ ಜಂಕ್ಷನ್‌, ಕುಲಶೇಖರ, ಪಂಪ್‌ವೆಲ್‌ ವೃತ್ತ, ಬೆಳ್ತಂಗಡಿ ಸೇತುವೆ ಬಳಿ, ಇಂದ ಬೆಟ್ಟು, ವಿಟ್ಲ ಮತ್ತಿತರ ಕಡೆಗಳಲ್ಲಿ ಟೈರ್‌ಗೆ ಬೆಂಕಿ ಹಾಕಿ ಸಂಚಾರಕ್ಕೆ ತಡೆ ಒಡ್ಡಲಾಯಿತು.


ರಸ್ತೆ ತಡೆ

ಮಂಗಳೂರು, ಸುರತ್ಕಲ್‌, ಬೆಳ್ತಂಗಡಿ ಮತ್ತು ಇತರ ಕೆಲವೆಡೆ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಲಾಗಿತ್ತು. ಜ್ಯೋತಿ ಜಂಕ್ಷನ್‌ನಲ್ಲಿ ಬಂದ್‌ ಬೆಂಬಲಿಗರು ರಸ್ತೆಯಲ್ಲಿ ಕುಳಿತು ವಾಹನ ಸಂಚಾರಕ್ಕೆ ತಡೆ ಒಡ್ಡಿದ್ದರು. ಮಾಜಿ ಶಾಸಕ ಜೆ.ಆರ್‌. ಲೋಬೊ ಸಹಿತ ಸುಮಾರು 60 ಮಂದಿಯನ್ನು ಪೊಲೀಸರು ಬಂಧಿಸಿದರು. ನಾಟೆಕಲ್‌ನಲ್ಲಿ ಕಾರುಗಳನ್ನು ರಸ್ತೆಗೆ ಅಡ್ಡ ನಿಲ್ಲಿಸಿ ಪ್ರತಿಭಟಿಸಿದ್ದರು. ಬೆಳ್ತಂಗಡಿ ಯಲ್ಲಿ ಸಾಂಕೇತಿಕ ರಸ್ತೆ ತಡೆ ನಡೆದಿತ್ತು.

ಅಂಗಡಿ, ಮಾಲ್‌ ಬಂದ್‌
ನಗರದ ಬಹುತೇಕ ಅಂಗಡಿಗಳು ಮತ್ತು ಮಾಲ್‌ಗ‌ಳು ಮುಚ್ಚಿದ್ದವು. ಸೆಂಟ್ರಲ್‌ ಮಾರ್ಕೆಟ್‌ ತೆರೆದಿದ್ದರೂ ಜನ ವಿರಳವಾಗಿದ್ದರು. ಹಾಲು ಮತ್ತು ಪೇಪರ್‌ ಅಂಗಡಿಗಳಿಗೂ ಬಂದ್‌ ಬಿಸಿ ತಟ್ಟಿತ್ತು. ಈ ಅಂಗಡಿಗಳು ತೆರೆದಿದ್ದರೂ ಗ್ರಾಹಕ ರಿಲ್ಲದೆ ಕೆಲವರು ಬೇಗನೆ ಮುಚ್ಚಿದ್ದರು.

ಆಸ್ಪತ್ರೆ ಕ್ಯಾಂಟೀನ್‌ ಮುಚ್ಚಿಸಿದರು
ಕೆಲವು ಕಡೆ ಆಸ್ಪತ್ರೆಗಳ ಕ್ಯಾಂಟೀನನ್ನೂ ಬಲವಂತವಾಗಿ ಮುಚ್ಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಕಂಕನಾಡಿ ಕರಾವಳಿ ವೃತ್ತದ ಬಳಿ ಔಷಧ ಮಳಿಗೆಯನ್ನು ಬಲವಂತವಾಗಿ ಮುಚ್ಚಿಸಲು ಯತ್ನಿಸಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದರು.

ಸಂಜೆ ಬಳಿಕ ಬಸ್‌ ಆರಂಭ
ಸಂಜೆ 4 ಗಂಟೆ ಬಳಿಕ ಬಿಜೈ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ದೂರದ ಊರಿಗೆ ಹೋಗುವ ಬಸ್‌ಗಳ ಸಂಚಾರ ಆರಂಭವಾಯಿತು.

Advertisement

ಕೊಡಗಿನಲ್ಲಿ ಬಂದ್‌ ಇಲ್ಲ
ಪ್ರಕೃತಿ ವಿಕೋಪದಿಂದ ಅಪಾರ ಹಾನಿಗೀಡಾಗಿರುವ ಕೊಡಗು ಜಿಲ್ಲೆಯ ಜನರು ಬಂದ್‌ ಗೋಜಿಗೆ ಹೋಗಿಲ್ಲ. ವಾಹನ ಸಂಚಾರ ಎಂದಿನಂತಿತ್ತು. ಶಿಕ್ಷಣ ಸಂಸ್ಥೆಗಳು, ಅಂಗಡಿಗಳು ಕಾರ್ಯಾಚರಿಸಿ ದವು. ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿ ಭಟನೆ ನಡೆಯಿತು.

ಕೆಎಸ್ಸಾರ್ಟಿಸಿಗೆ 55 ಲಕ್ಷ ರೂ. ನಷ್ಟ
ಮಂಗಳೂರು: ಬಂದ್‌ನಿಂದಾಗಿ ಮಂಗಳೂರು ಮತ್ತು ಉಡುಪಿ ಕೆಎಸ್ಸಾರ್ಟಿಸಿ ವಿಭಾಗಕ್ಕೆ ಸುಮಾರು 55 ಲಕ್ಷ ರೂ. ನಷ್ಟವಾಗಿದೆ. ಉಭಯ ಜಿಲ್ಲೆಗಳ ಡಿಪೋಗಳಿಂದ 253 ಬಸ್‌ಗಳು, 1,900 ಟ್ರಿಪ್‌ ರದ್ದಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಮಂಗಳೂರು ನಗರದಲ್ಲಿ 350 ಖಾಸಗಿ ಸಿಟಿ ಬಸ್‌ಗಳ ಸಂಚಾರ ರದ್ದಾಗಿದ್ದು, 42 ಲಕ್ಷ ರೂ. ನಷ್ಟ ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next