Advertisement

Cricket: ಕ್ಲೀನ್‌ಸ್ವೀಪ್‌ಗೆ ಬುಮ್ರಾ ಪಡೆ ತಯಾರಿ

11:01 PM Aug 22, 2023 | Team Udayavani |

ಡಬ್ಲಿನ್‌:  ಐರ್ಲೆಂಡ್‌ ವಿರುದ್ಧ ಈಗಾಗಲೇ ಟಿ20 ಸರಣಿ ವಶಪಡಿಸಿಕೊಂಡಿರುವ ಟೀಮ್‌ ಇಂಡಿಯಾ ಬುಧವಾರ ಡಬ್ಲಿನ್‌ನಲ್ಲಿ 3ನೇ ಹಾಗೂ ಅಂತಿಮ ಪಂದ್ಯವನ್ನು ಆಡಲಿದೆ. ಇಲ್ಲಿ ಬುಮ್ರಾ ಪಡೆಯ ಮುಖ್ಯ ಯೋಜನೆಯೆಂದರೆ ಸರಣಿಯನ್ನು ಕ್ಲೀನ್‌ಸ್ವೀಪ್‌ ಆಗಿ ವಶಪಡಿಸಿಕೊಳ್ಳುವುದು. ಹಾಗೆಯೇ ತಂಡದ ಮೀಸಲು ಸಾಮರ್ಥ್ಯವನ್ನು ಪರೀಕ್ಷಿಸುವುದು ಇನ್ನೊಂದು ಕಾರ್ಯತಂತ್ರವಾಗಿರುವ ಸಾಧ್ಯತೆ ಇದೆ.

Advertisement

ಸರಣಿಯಲ್ಲಿ ಈವರೆಗೆ ಆವೇಶ್‌ ಖಾನ್‌, ಜಿತೇಶ್‌ ಶರ್ಮ, ಶಾಬಾಜ್‌ ಅಹ್ಮದ್‌ ಮತ್ತು ಮುಕೇಶ್‌ ಶರ್ಮ ಆಡುವ ಅವಕಾಶ ಪಡೆದಿಲ್ಲ. ಉಸ್ತುವಾರಿ ಕೋಚ್‌ ಸಿತಾಂಶು ಕೋಠಕ್‌ ಕೂಡ ಮೀಸಲು ಆಟಗಾರರನ್ನು ಆಡಿಸುವ ಕುರಿತು ಯೋಚಿಸುತ್ತಿದ್ದಾರೆ. ಇವರಲ್ಲಿ ಆವೇಶ್‌ ಖಾನ್‌ ಕಳೆದ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆಯೂ ತಂಡದಲ್ಲಿದ್ದರು. ಆದರೆ ಇವರನ್ನು ಏಳೂ ಪಂದ್ಯಗಳಿಂದ ಹೊರಗಿಡಲಾಗಿತ್ತು. ಒಂದು ವೇಳೆ ಇಲ್ಲಿಯೂ ಅವರನ್ನು ಹೊರಗಿರಿಸಿದರೆ ಒಂದೂ ಪಂದ್ಯವಾಡದೆ ಏಷ್ಯನ್‌ ಗೇಮ್ಸ್‌ಗೆ ತೆರಳಬೇಕಾಗುತ್ತದೆ.
ಮುಕೇಶ್‌ ಕುಮಾರ್‌ ಈ ಸರಣಿ ಯಲ್ಲಿ ಆಡದೇ ಹೋದರೂ ವೆಸ್ಟ್‌ ಇಂಡೀಸ್‌ ವಿರುದ್ಧ ಸಾಕಷ್ಟು ಅವಕಾಶ ಪಡೆದಿದ್ದಾರೆ. ಹೀಗಾಗಿ ಇವರನ್ನು ಮತ್ತೆ ಹೊರಗಿರಿಸಿದರೆ ಆಕ್ಷೇಪ ಎದುರಾಗಲಿಕ್ಕಿಲ್ಲ.

ಭಾರತದ ಬ್ಯಾಟಿಂಗ್‌ ಸರದಿಯಲ್ಲಿ ಬದಲಾವಣೆ ಸಂಭವಿಸುವ ಸಾಧ್ಯತೆ ಗೋಚರಿಸುತ್ತಿಲ್ಲ. ಒಂದು ವೇಳೆ ಸಂಜು ಸ್ಯಾಮ್ಸನ್‌ಗೆ ವಿಶ್ರಾಂತಿ ನೀಡುವ ಯೋಚನೆಯೇನಾದರೂ ಇದ್ದರೆ ಆಗ ಜಿತೇಶ್‌ ಶರ್ಮ ಅವರಿಗೆ ಕೀಪಿಂಗ್‌ ಜವಾಬ್ದಾರಿ ಲಭಿಸಬಹುದು. ಆದರೆ ಸಂಜು ದ್ವಿತೀಯ ಪಂದ್ಯದಲ್ಲಿ ತಮ್ಮ ಸಹಜ ಶೈಲಿಯ ಬ್ಯಾಟಿಂಗ್‌ ಪ್ರದರ್ಶಿ ಸಿದ್ದು, ಈ ಲಯದಲ್ಲಿ ಸಾಗುವುದು ಅವರ ಹಾಗೂ ತಂಡದ ದೃಷ್ಟಿಯಿಂದ ಹೆಚ್ಚು ಮಹತ್ವದ್ದೆನಿಸಲಿದೆ. ರವಿವಾರದ ಮುಖಾಮುಖೀಯಲ್ಲಿ ಸಂಜು 26 ಎಸೆತಗಳಿಂದ 40 ರನ್‌ ಬಾರಿಸಿದ್ದರು. ಮುಂಬರುವ ಏಷ್ಯಾ ಕಪ್‌ ಪಂದ್ಯಾ ವಳಿಗೆ ಇವರು ಮೀಸಲು ಆಟಗಾರ ರಾಗಿದ್ದಾರೆ. ಅನಂತರದ ವಿಶ್ವಕಪ್‌ ಕೂಟದ ನೆಚ್ಚಿನ ಆಟಗಾರನೂ ಹೌದು.
ಎಡಗೈ ಬ್ಯಾಟರ್‌ ತಿಲಕ್‌ ವರ್ಮ ಕೆರಿಬಿಯನ್‌ ದ್ವೀಪದಲ್ಲಿ ಕ್ಲಿಕ್‌ ಆದರೂ ಐರ್ಲೆಂಡ್‌ಗೆ ಬಂದೊಡನೆ ರನ್‌ ಬರಗಾಲ ಅನುಭವಿಸಿದ್ದಾರೆ. ಹೀಗಾಗಿ ಇವರ ಬ್ಯಾಟಿಗೆ ಮಾತಾಡಲು ಮತ್ತೂಂದು ಅವಕಾಶ ಸಿಗುವುದರಲ್ಲಿ ಅನುಮಾನವಿಲ್ಲ.

ಪ್ರಸಕ್ತ ಸರಣಿಯಲ್ಲಿ ಅಂತಾ ರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆಗೈದ ಐಪಿಎಲ್‌ “ಸಿಕ್ಸರ್‌ ಹೀರೋ’ ರಿಂಕು ಸಿಂಗ್‌ ದ್ವಿತೀಯ ಪಂದ್ಯದಲ್ಲಿ ಮೊದಲ ಸಲ ಕ್ರೀಸ್‌ ಇಳಿದು 21 ಎಸೆತಗಳಿಂದ 38 ರನ್‌ ಸಿಡಿಸಿದ್ದನ್ನು ಮರೆಯುವಂತಿಲ್ಲ. 2 ಬೌಂಡರಿ, 3 ಸಿಕ್ಸರ್‌ ಬಾರಿಸಿ ಜೋಶ್‌ ತೋರಿದ್ದರು.
ಕಳೆದ ಕೆಲವೇ ದಿನಗಳ ಅವಧಿ ಯಲ್ಲಿ ಅವಳಿ ಟಿ20 ತಂಡಗಳನ್ನು ಅಂತಾರಾಷ್ಟ್ರೀಯ ಕದನಕ್ಕೆ ಇಳಿಸಿದ ಭಾರತದಲ್ಲೀಗ ಪ್ರತಿಭೆಗಳ ಮಹಾ ಪೂರವೇ ಇದೆ. ಎಲ್ಲರೂ ಅವಕಾಶವನ್ನು ಬಾಚಿಕೊಂಡರೆ ಮುಂದಿನ ವರ್ಷದ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ತಂಡದ ಆಯ್ಕೆ ಜಟಿಲಗೊಳ್ಳಲಿದೆ ಎಂಬ ಸ್ಥಿತಿಯೂ ನಿರ್ಮಾಣವಾಗಬಹುದು.

ಖಾತೆ ತೆರೆದೀತೇ ಐರ್ಲೆಂಡ್‌?
ಆತಿಥೇಯ ಐರ್ಲೆಂಡ್‌ಗೆ ಇದೊಂದು ಪ್ರತಿಷ್ಠೆಯ ಪಂದ್ಯ. ಐರಿಷ್‌ ಪಡೆ ಭಾರತದ ವಿರುದ್ಧ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿದೆ. ಆಡಿದ ಏಳೂ ಪಂದ್ಯಗಳಲ್ಲಿ ಸೋತಿದೆ. ಬುಧವಾರ ಗೆದ್ದರೆ ಇತಿಹಾಸ ನಿರ್ಮಾಣಗೊಳ್ಳುವುದು ಖಚಿತ. ಇದಕ್ಕಾಗಿ ಪಾಲ್‌ ಸ್ಟರ್ಲಿಂಗ್‌ ಪಡೆ ಗರಿಷ್ಠ ಪ್ರಯತ್ನ ಮಾಡುವುದರಲ್ಲಿ ಅನುಮಾನವಿಲ್ಲ.

Advertisement

ವನಿತೆಯರಿಗೆ ಗೆಲುವು
ವನಿತೆಯರ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡ ಸ್ಪೇನ್‌ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು. ಅನ್ನು (21ನೇ ನಿಮಿಷ) ಮತ್ತು ಸಾಕ್ಷಿ ರಾಣಾ (47ನೇ ನಿಮಿಷ) ಗೋಲು ಹೊಡೆದರು.

 

Advertisement

Udayavani is now on Telegram. Click here to join our channel and stay updated with the latest news.

Next