Advertisement
ಬೋರ್ಡರ್-ಗಾವಸ್ಕರ್ ಟ್ರೋಫಿ ಸರಣಿಯಲ್ಲಿ ಬುಮ್ರಾ ಏಕಾಂಗಿಯಾಗಿ ಹೋರಾಡಿ ಆಸ್ಟ್ರೇಲಿಯದ ಬ್ಯಾಟರ್ಗಳಿಗೆ ಭೀತಿ ಹುಟ್ಟಿಸಿದ್ದರು. ಸರಣಿಯಲ್ಲೇ ಸರ್ವಾಧಿಕ 32 ವಿಕೆಟ್ ಉರುಳಿಸಿದ ಸಾಧನೆ ಇವರದಾಗಿತ್ತು. ಇದಕ್ಕಾಗಿ ಸರಣಿಶ್ರೇಷ್ಠ ಗೌರವವೂ ಒಲಿದಿತ್ತು. 20ಕ್ಕೂ ಕಡಿಮೆ ಸರಾಸರಿಯಲ್ಲಿ 200 ಟೆಸ್ಟ್ ವಿಕೆಟ್ ಉಡಾಯಿಸಿದ ಮೊದಲ ಬೌಲರ್ ಆಗಿಯೂ ಬುಮ್ರಾ ದಾಖಲೆ ಪುಟ ಸೇರಿದ್ದರು.
Related Articles
Advertisement
ಅನ್ನಾಬೆಲ್ ಸದರ್ಲೆಂಡ್ ಪ್ರವಾಸಿ ಭಾರತದೆದುರಿನ ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದರು. 3ನೇ ಏಕದಿನದಲ್ಲಿ ಸೆಂಚುರಿ ಹೊಡೆದು ಮಿಂಚಿದ್ದರು (110). ಬಳಿಕ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲೂ ಅಜೇಯ 105 ರನ್ ಹೊಡೆಯುವ ಮೂಲಕ ಸತತ 2 ಏಕದಿನ ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧಕಿಯಾಗಿ ಮೂಡಿಬಂದರು. ಈ 2 ಸರಣಿಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದು ಅನ್ನಾಬೆಲ್ ಹೆಗ್ಗಳಿಕೆ.