Advertisement

Champions Trophy: ಟೀಂ ಇಂಡಿಯಾಗೆ ಗಾಯದ ಸಂಕಷ್ಟ; ಪ್ರಮುಖ ಬೌಲರ್‌ ಕೂಟದಿಂದ ಔಟ್!

11:25 AM Jan 12, 2025 | Team Udayavani |

ಬೆಂಗಳೂರು: ‌ಇಂಗ್ಲೆಂಡ್‌ ವಿರುದ್ದದ ಟಿ20 ಮತ್ತು ಏಕದಿನ ಸರಣಿಯ ಬಳಿಕ ಚಾಂಪಿಯನ್ಸ್‌ ಟ್ರೋಫಿ ಕೂಟ ನಡೆಯಲಿದೆ. ಪಾಕಿಸ್ತಾನ ಮತ್ತು ಯುಎಇನಲ್ಲಿ ಹೈಬ್ರಿಡ್‌ ಮಾದರಿಯಲ್ಲಿ ಕೂಟದಲ್ಲಿ ನಡೆಯಲಿದೆ.

Advertisement

ಟೀಂ ಇಂಡಿಯಾದ ಪ್ರಮುಖ ಆಟಗಾರ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರು ಮುಂದಿನ ಚಾಂಪಿಯನ್ಸ್‌ ಟ್ರೋಫಿ ಕೂಟ ಆಡುವುದು ಅನುಮಾನ ಎನ್ನುತ್ತಿದೆ ವರದಿ.

ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸರಣಿಯಲ್ಲಿ ಅತಿಯಾದ ಒತ್ತಡ ಅನುಭವಿಸಿದ ಬುಮ್ರಾ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿಗೆ ಒಳಗಾಗಿದ್ದರು. ಹೀಗಾಗಿ ಸಿಡ್ನಿ ಪಂದ್ಯದ ಎರಡನೇ ಇನ್ನಿಂಗ್ಸ್‌ ನಲ್ಲಿ ಬೌಲಿಂಗ್‌ ಮಾಡಲು ಸಾಧ್ಯವಾಗಲಿಲ್ಲ.

ಸದ್ಯ ಬುಮ್ರಾಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಯು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಲು ಕೇಳಿಕೊಂಡಿದೆ.

Advertisement

ಗಾಯಗೊಂಡಿದ್ದರೂ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಬುಮ್ರಾ ಅವರನ್ನು ಸೇರಿಸಿಕೊಳ್ಳಬಹುದು ಎಂದು ಹೇಳಿದೆ. ಆದರೆ ಅವರ ಲಭ್ಯತೆಯು ಅವರ ಚೇತರಿಕೆಗೆ ಸಂಬಂಧಿಸಿದೆ.

ಮೂಲಗಳ ಪ್ರಕಾರ ಮಾರ್ಚ್‌ ಮೊದಲ ವಾರದಲ್ಲಿ ಬುಮ್ರಾ ಆಡಲು ಸಿದ್ದರಾಗುತ್ತಾರೆ. ಹೀಗಾಗಿ ಚಾಂಪಿಯನ್ಸ್‌ ಟ್ರೋಫಿಯ ಲೀಗ್‌ ಹಂತದ ಪಂದ್ಯಗಳಿಗೆ ಬುಮ್ರಾ ಲಭ್ಯವಾಗುವುದು ಕಷ್ಟ. ಸೆಮಿ ಫೈನಲ್‌ ಮತ್ತು ಫೈನಲ್‌ ಪಂದ್ಯಗಳಿಗೆ ಬುಮ್ರಾ ಲಭ್ಯರಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.