Advertisement

ಬುಲೆಟ್‌ ಟ್ರೈನ್‌ ಟಾರ್ಗೆಟ್‌ ವಿಫ‌ಲ?

11:36 AM Jun 13, 2018 | Team Udayavani |

ಮುಂಬಯಿ: ಪ್ರಧಾನಿ ಮೋದಿ ಅವರ ಮಹತ್ವಾ ಕಾಂಕ್ಷೆಯ ಮುಂಬಯಿ- ಅಹ್ಮದಾಬಾದ್‌ ಬುಲೆಟ್‌ ರೈಲು ಯೋಜನೆ ಇನ್ನಷ್ಟು ತಡವಾಗುವ ಎಲ್ಲಾ ಲಕ್ಷಣಗಳು ಗೋಚರಿಸಿವೆ.

Advertisement

ಈ ಹಿಂದಿನ ಗುರಿಯಂತೆ ಡಿಸೆಂಬರ್‌ನೊಳಗೆ ಯೋಜನೆಗೆ ಬೇಕಾದ ಭೂಮಿ ಸ್ವಾಧೀನ ಮಾಡಿ ಕೊಳ್ಳಬೇಕಿತ್ತು. ಆದರೆ, ಮಹಾರಾಷ್ಟ್ರದಲ್ಲಿನ ಕೆಲವು ಮಾವು, ಸಪೋಟಾ ಬೆಳೆಗಾರರ ಪ್ರತಿಭಟನೆ ಪರಿಣಾಮ ಭೂಸ್ವಾಧೀನ ಆಗಿಲ್ಲ. ಹೀಗಾಗಿ ಜಪಾನ್‌ನ ಸಾಫ್ಟ್ ಬ್ಯಾಂಕ್‌ ಸಾಲ ನೀಡಿಕೆಯಲ್ಲಿ ವಿಳಂಬವಾಗಲಿದೆ ಎಂದೇ ಹೇಳಲಾಗುತ್ತಿದೆ.

ಇದು 17 ಶತಕೋಟಿ ಡಾಲರ್‌ನ ಯೋಜನೆ ಯಾಗಿದ್ದು ಬಹುತೇಕ ಹಣವನ್ನು ಜಪಾನ್‌ನ ಸಾಫ್ಟ್ ಬ್ಯಾಂಕ್‌ ಭರಿಸಲಿದೆ. ಇದು ಹಣ ನೀಡಬೇಕಾಗಿದ್ದಲ್ಲಿ ಡಿಸೆಂಬರ್‌ ಅಂತ್ಯದ ವೇಳೆ ಸಂಪೂರ್ಣವಾಗಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸ ಬೇಕಿತ್ತು. ಈ ಮಧ್ಯೆ, ಸರಕಾರ ತಮ್ಮ ಮಕ್ಕಳಿಗೆ ಸರಕಾರಿ ಉದ್ಯೋಗದ ಭರವಸೆ ನೀಡಬೇಕು ಎಂಬುದು ರೈತರ ಬೇಡಿಕೆಯಾಗಿದ್ದು,  ಪ್ರತಿಭಟನೆ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next