Advertisement

ಅಹ್ಮದಾಬಾದ್‌-ದಿಲ್ಲಿ ಬುಲೆಟ್‌ ರೈಲು ಮಾರ್ಗ! 12 ಗಂಟೆಯ ಪ್ರಯಾಣ 3.5 ಗಂಟೆಗೆ ಇಳಿಕೆ!

09:13 AM Apr 17, 2024 | Team Udayavani |

ಹೊಸದಿಲ್ಲಿ: ಅಹ್ಮದಾಬಾದ್‌- ಮುಂಬಯಿ ಬುಲೆಟ್‌ ರೈಲು ಕಾರ್ಯಾಚರ ಣೆಯ ಮುನ್ನವೇ ಸರಕಾರವು, ಅಹ್ಮದಾಬಾದ್‌-ದಿಲ್ಲಿ ಬುಲೆಟ್‌ ರೈಲು ಮಾರ್ಗ ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿದೆ. ಈ ಯೋಜನೆಯಿಂದ ಅಹ್ಮದಾಬಾದ್‌ - ದಿಲ್ಲಿ ನಡು ವಿನ 12 ಗಂಟೆಯ ಪ್ರಯಾಣದ ಸಮಯವು 3.5 ಗಂಟೆಗೆ ಇಳಿಕೆಯಾಗಲಿದೆ.

Advertisement

ಈ ರೈಲು ಯೋಜನೆಯ ಸಮಗ್ರ ವರದಿ ಯನ್ನು ರೈಲ್ವೇ ಇಲಾಖೆ ಅಂತಿಮ ಗೊಳಿಸಿದೆ. ಈ ಮಾರ್ಗದಲ್ಲಿ ಹಿಮ್ಮತ್‌ ನಗರ, ಉದಯಪುರ್‌, ಭಿಲ್ವಾರಾ, ಚಿತ್ತೋ ರ್‌ಗಢ್‌, ಅಜ್ಮೀರ್, ಕಿಶನ್‌ಗಢ್‌, ಜೈಪುರ್‌, ರೇವಾಡಿ ಮತ್ತು ಮನೇಸರ್‌ ನಿಲ್ದಾಣಗಳಿರಲಿವೆ. ರಾಷ್ಟ್ರೀಯ ಹೈ ಸ್ಪೀಡ್‌ ರೈಲು ನಿಗಮ(ಎನ್‌ಎಚ್‌ಆರ್‌ ಸಿ)ವು 2020ರ ಸೆಪ್ಟಂಬರ್‌ನಲ್ಲೇ ಈ ಮಾರ್ಗದ ವಿನ್ಯಾಸವನ್ನು ಅಂತಿಮ ಗೊಳಿಸಿದೆ. ಮುಂದಿನ ಕಾರ್ಯ ನಡೆಸಲು ಕೇಂದ್ರದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಅಹ್ಮದಾಬಾದ್‌-ದಿಲ್ಲಿ ನಡುವೆ ಸುಮಾರು 900 ಕಿ.ಮೀ. ಎಲೆವೇಟೆಡ್‌ ಕಾರಿಡಾರ್‌(ಎತ್ತರಿಸಿದ ಮಾರ್ಗ) ಇರಲಿದೆ. ಇದರಿಂದ ಪ್ರಯಾ ಣದ ಅವಧಿಯಲ್ಲಿ 9 ಗಂಟೆ ಉಳಿತಾ ಯವಾಗಲಿದೆ. ಈಗಾಗಲೇ ಇರುವ ರೈಲು ಮಾರ್ಗಗುಂಟ ಈ ಬುಲೆಟ್‌ ರೈಲು ಮಾರ್ಗ ನಿರ್ಮಾಣವಾಗಲಿದೆ.

ಇದನ್ನೂ ಓದಿ: Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Advertisement

Udayavani is now on Telegram. Click here to join our channel and stay updated with the latest news.

Next