Advertisement

ಬುಲೆಟ್‌ ಟ್ರೈನ್‌ ಸೇತುವೆ ವಿನ್ಯಾಸ ಶೇ.80 ಪೂರ್ಣ

06:00 AM Mar 27, 2018 | Team Udayavani |

ಶಿಮ್ಲಾ: ದೇಶದ ಮೊದಲ ಬುಲೆಟ್‌ ರೈಲು ಮಾರ್ಗದ ಸೇತುವೆ ಹಾಗೂ ಸುರಂಗಗಳ ವಿನ್ಯಾಸ ಕಾರ್ಯ ಭರದಿಂದ ಸಾಗಿದ್ದು, ಶೇ.80ರಷ್ಟು ಪೂರ್ಣಗೊಂಡಿದೆ. ಅಲ್ಲದೆ, ಭೂಸ್ವಾಧೀನ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೈ ಸ್ಪೀಡ್‌ ರೈಲ್ವೆ ಕಾರ್ಪೋರೇಷನ್‌ ವ್ಯವಸ್ಥಾಪಕ ನಿರ್ದೇಶಕ ಅಚಲ್‌ ಖರೆ ತಿಳಿಸಿದ್ದಾರೆ. 

Advertisement

ಭಾರತೀಯ ರೈಲ್ವೆ ಹಾಗೂ ಜಪಾನ್‌ನ ಶಿನ್‌ಕಾನ್‌ಸೆನ್‌ ಟೆಕ್ನಾಲಜಿ ಜಂಟಿಯಾಗಿ ಕೈಗೆತ್ತಿಕೊಂಡಿರುವ ಮುಂಬೈ-ಅಹಮದಾಬಾದ್‌ ನಡುವಿನ ಮೊದಲ ಬುಲೆಟ್‌ ಟ್ರೈನ್‌ ಯೋಜನೆ 2022ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಈಗಾಗಲೇ ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳು ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಿವೆ. ಮಣ್ಣಿನ ಪರೀಕ್ಷೆ, ಸರ್ವೇಕ್ಷಣೆ ನಡೆಯುತ್ತಿದೆ. ದೆಹಲಿ, ಮುಂಬೈ, ಜಪಾನ್‌ ಮೂಲದ ಎಂಜಿನಿಯರ್‌ಗಳು ವಿನ್ಯಾಸ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ಬುಲೆಟ್‌ ರೈಲಲ್ಲಿ 10 ಕೋಚ್‌ಗಳು ಇರಲಿದ್ದು, ತಿರುಗುವ ಕುರ್ಚಿ, ಕಾಫಿ ಮೇಕರ್‌, ಟವೆಲ್‌ ವಾರ್ಮರ್‌, ಫಾಸ್ಟ್‌ಫ‌ುಡ್‌, ಬ್ಯುಸಿ ನೆಸ್‌ ಕ್ಲಾಸ್‌ ಕೋಚ್‌, ದಿವ್ಯಾಂಗ ರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇರಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next