Advertisement

ಫೋಗಟ್‌ ಅಸುನೀಗಿದ್ದ ರೆಸ್ಟೋರೆಂಟ್‌ ಧ್ವಂಸಕ್ಕೆ ಆದೇಶ

08:51 PM Sep 08, 2022 | Team Udayavani |

ಪಣಜಿ: ಮದ್ಯದಲ್ಲಿ ವಿಷ ಬೆರೆಸಿ ಬಿಜೆಪಿ ನಾಯಕಿ ಸೊನಾಲಿ ಪೊಗಟ್‌ ಅವರನ್ನು ಹತ್ಯೆ ಮಾಡಿದ್ದ ಗೋವಾದ ಕರ್ಲೀಸ್‌ ರೆಸ್ಟೋರೆಂಟ್‌ ಕಟ್ಟಡ ಶೀಘ್ರ ಧ್ವಂಸಗೊಳ್ಳಲಿದೆ.

Advertisement

ಕರಾವಳಿ ತೀರ ರಕ್ಷಣೆ ನಿಯಮಗಳನ್ನು ಉಲ್ಲಂಘಿಸಿದ್ದರಿಂದ ಈ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಪೀಠ(ಎನ್‌ಜಿಟಿ) ಆದೇಶಿಸಿದೆ.

ಜುಲೈನಲ್ಲಿ ನಡೆದ ಅಂತಿಮ ವಿಚಾರಣೆಯಲ್ಲಿ ಗೋವಾ ಕರಾವಳಿ ಪ್ರಾಧಿಕಾರವು ರೆಸ್ಟೋರೆಂಟ್‌ ಕಟ್ಟಡವನ್ನು ಕೆಡವಲು ಆದೇಶ ನೀಡಿತ್ತು. ಅದನ್ನು ಗೋವಾದಲ್ಲಿರುವ ಬಾಂಬೆ ಹೈಕೋರ್ಟ್‌ ಪೀಠ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ರೆಸ್ಟೋರೆಂಟ್‌ ಮಾಲೀಕರು ಪ್ರಶ್ನಿಸಿದ್ದರು. ಅಲ್ಲದೇ ಎನ್‌ಜಿಟಿಯಲ್ಲಿ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next