ಮೆಹ್ಸಾನಾ: ಗುಜರಾತ್‌ನಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜನಸಮೂಹವನ್ನುದ್ದೇಶಿಸಿ ಮಾತನಾಡುತ್ತಿದ್ದ ಕಾಂಗ್ರೆಸ್ ರ‍್ಯಾಲಿಗೆ ದಾರಿ ತಪ್ಪಿದ ಗೂಳಿಯೊಂದು ನುಗ್ಗಿದ ವಿಡಿಯೋ ವೈರಲ್ ಆಗಿದ್ದು, ನಾನಾ ರೀತಿಯ ಆರೋಪ ಪ್ರತ್ಯಾರೋಪಗಳು ಕೇಳಿ ಬರುತ್ತಿವೆ.
ಗೂಳಿ ಗೊಂದಲದಿಂದ ಓಡುತ್ತಿರುವ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರನ್ನು ಶಾಂತವಾಗಿರುವಂತೆ ಒತ್ತಾಯಿಸಿದ ಗೆಹ್ಲೋಟ್, ಬಿಜೆಪಿ ಗೂಳಿಯನ್ನು ಜನಸಂದಣಿಯೊಳಗೆ ಕಳುಹಿಸಿದೆ ಎಂದು ದೂಷಿಸಿದ್ದಾರೆ.
ಸಭೆಯಲ್ಲಿ ಕೆಲ ಕಾಲ ಗೊಂದಲಕ್ಕೆ ಕಾರಣವಾದ ಬೃಹತ್ ಗೂಳಿಯನ್ನು ಹೊರಗೆ ಕಳುಹಿಸಲಾಯಿತು. ಯಾರೊಬ್ಬರಿಗೂ ಅದು ಹಾನಿ ಮಾಡಲಿಲ್ಲ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದ ಚುನಾವಣೆಯ ಪ್ರಚಾರ ಇಂದು ಕೊನೆಗೊಂಡಿದೆ. 19 ದಕ್ಷಿಣ ಗುಜರಾತ್ ಜಿಲ್ಲೆಗಳು ಮತ್ತು ಕಚ್-ಸೌರಾಷ್ಟ್ರ ಪ್ರದೇಶಗಳಲ್ಲಿ ಒಟ್ಟು 788 ಅಭ್ಯರ್ಥಿಗಳು 89 ಸ್ಥಾನಗಳಿಗಾಗಿ ಕಣದಲ್ಲಿದ್ದಾರೆ.