ದಾಂಡೇಲಿ: ತಾಲೂಕಿನ ಆಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎತ್ತೊಂದು ಸಕಲಗದಲ್ಲಿರುವ ನಗರ ಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದ ಹತ್ತಿರದಲ್ಲಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಕೇರವಾಡ ಗ್ರಾಮದ ನಿವಾಸಿಯಾಗಿರುವ ನಾರಾಯಣ ಹನುಮಂತ ಮಿಶಾಳೆಯವರ ಎತ್ತು ಸಾವನ್ನಪ್ಪಿದೆ.
ಸಕಲಗದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸರಿಯಾಗಿ ಗೇಟ್ ಹಾಕದೆ ಇರುವುದರಿಂದ ಸುತ್ತಲಿನ ರೈತರ ದನ ಕರುಗಳು ಆಹಾರವನ್ನರಸಿ ಅಲ್ಲಿಗೆ ಹೋಗುವುದು ಸಹಜವಾಗಿದೆ. ಈ ಬಗ್ಗೆ ನಗರ ಸಭೆಯ ಗಮನಕ್ಕೂ ತಂದರೂ ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಸ್ಥಳೀಯ ರೈತರಿಗೆ ತೀವ್ರ ತೊಂದರೆಯಾಗಿದೆ.
ಆಹಾರವನ್ನರಸಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಹೋಗಿರುವ 30 ಸಾವಿರ ಮೌಲ್ಯದ ಎತ್ತು ಮೃತಪಟ್ಟಿದ್ದು, ರೈತ ನಾರಾಯಣ ಹನುಮಂತ ಕಂಗಲಾಗಿದ್ದಾರೆ.
ರೈತನಿಗಾದ ಸಂಕಷ್ಟಕ್ಕೆ ನಗರ ಸಭೆಯ ಪೌರಾಯುಕ್ತರು ವಿಶೇಷ ರೀತಿಯಲ್ಲಿ ಆರ್ಥಿಕ ಸಹಾಯ ಮಾಡಬೇಕೆಂಬ ಮನವಿಯನ್ನು ನಾರಾಯಣ ಅವರು ಮಾಡುತ್ತಿದ್ದಾರೆ. ರೈತರ ಬಗ್ಗೆ ಅಪಾರವಾದ ಕಾಳಜಿಯಿರುವ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಈ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸ ವ್ಯಕ್ತವಾಗುತ್ತಿದೆ.