Advertisement

ಬಲ್ಕ್ ಎಸ್‌ಎಂಎಸ್‌, ಇಮೇಲ್‌ ಮೇಲೆ ಆಯೋಗ ನಿಗಾ

06:35 AM Apr 14, 2018 | Team Udayavani |

ಬೆಂಗಳೂರು:ಅಭ್ಯರ್ಥಿ ಇಲ್ಲವೇ ರಾಜಕೀಯ ಪಕ್ಷಗಳ ಪರವಾಗಿ ಒಮ್ಮೆಗೆ ಸಾಕಷ್ಟು ಮಂದಿಗೆ ಎಸ್‌ಎಂಎಸ್‌, ಇ ಮೇಲ್‌ ರವಾನಿಸುವುದರ ಬಗ್ಗೆಯೂ ಚುನಾವಣಾ ಆಯೋಗ ನಿಗಾ ವಹಿಸುತ್ತಿದೆ.

Advertisement

ಚುನಾವಣೆ ಹಿನ್ನೆಲೆಯಲ್ಲಿ ಸರ್ವ ರೀತಿಯ ಪ್ರಚಾರಗಳ ಬಗ್ಗೆಯೂ ನಿಗಾ ವಹಿಸಿರುವ ಆಯೋಗ ರಾಜಕೀಯ ಜಾಹೀರಾತುಗಳ ಬಗ್ಗೆಯೂ ಸೂಕ್ಷ್ಮ ಮೇಲ್ವಿಚಾರಣೆ ನಡೆಸುತ್ತಿದೆ. ಮುಖ್ಯವಾಗಿ ಸುಧಾರಿತ ತಂತ್ರಜ್ಞಾನದಿಂದಾಗಿ ಒಮ್ಮೆಗೆ ಒಂದು ಸಂದೇಶವನ್ನು ನೂರಾರು ಮಂದಿಗೆ ರವಾನಿಸುವ, ಒಂದೇ ಮಾಹಿತಿಯನ್ನು ನೂರಾರು ಮಂದಿಗೆ ಇ ಮೇಲ್‌ ಮೂಲಕ ರವಾನಿಸುವ ಪ್ರಕ್ರಿಯೆಗಳು ನಡೆದಿವೆ. ಈ ರೀತಿಯ ಸಂದೇಶಗಳನ್ನೂ ಆಯೋಗ ಸೂಕ್ಷ್ಮವಾಗಿ ಗಮನಿಸುತ್ತಿದೆ.

ದೊಡ್ಡ ಸಮೂಹಕ್ಕೆ ಎಸ್‌ಎಂಎಸ್‌ ರವಾನಿಸುವಾಗ ಅದಕ್ಕೆ ಶುಲ್ಕ ಭರಿಸಬೇಕಾಗುತ್ತದೆ. ಆ ವೆಚ್ಚ ಅಭ್ಯರ್ಥಿಯ ವೆಚ್ಚದ ಬಾಬಿ¤ಗೆ ಒಳಪಡುತ್ತದೆ. ಜತೆಗೆ ಎಸ್‌ಎಂಎಸ್‌ನಲ್ಲಿನ ಸಂದೇಶದಿಂದ ನೀತಿ ಸಂಹಿತೆ ಉಲ್ಲಂಘನೆಯಾಗುವುದಾದರೆ ಆ ಬಗ್ಗೆಯೂ ಪ್ರಕರಣ ದಾಖಲಿಸಬೇಕಾಗುತ್ತದೆ. ಹಾಗಾಗಿ ಆಯೋಗ ಸದ್ಯದಲ್ಲೇ ಟೆಲಿಕಾಂ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲು ಸಿದ್ಧತೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next