ಮುದ್ದೇಬಿಹಾಳ: ಕರ್ನಾಟಕದಲ್ಲಿ ಗುಜರಾತ್ ಮಾದರಿಯ ಕ್ಷೀರಕ್ರಾಂತಿಗೆ ಅವಕಾಶಗಳು ಹೇರಳವಾಗಿವೆ. ಇವುಗಳ ಸದುಪಯೋಗ ಆಗಬೇಕು. ಡಿಸಿಸಿ ಬ್ಯಾಂಕ್ ಸಮಗ್ರ ಕ್ಷೀರಕ್ರಾಂತಿಗೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಬಸವನಬಾಗೇವಾಡಿ ಶಾಸಕ, ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ಹೇಳಿದ್ದಾರೆ.
ಮಲಗಲದಿನ್ನಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ರೈತ ಈ ದೇಶದ ಬೆನ್ನೆಲುವು. ಕೃಷಿ ಚಟುವಟಿಕೆಗಳಿಗೆ ಸಹಕಾರಿ ರಂಗವು ಮೊದಲ ಆದ್ಯತೆ ನೀಡಿದೆ. ಕೃಷಿ ಸಂಬಂಧಿ ತ ಸಾಮಗ್ರಿಗಳಿಗೆ, ಉಪಕರಣಗಳಿಗೆ ಉತ್ತೇಜನ ನೀಡಲಾಗಿದೆ. ಹೈನುಗಾರಿಕೆಗೆ ರಿಯಾಯಿತಿ ಬಡ್ಡಿ ದರದಲ್ಲಿ ಆರ್ಥಿಕ ನೆರವು ನೀಡಿ ಪ್ರೋತ್ಸಾಹಿಸಲಾಗಿದೆ. ಮಹಿಳಾ ಸಂಘಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಶ್ರಮಿಸುವಲ್ಲಿ ಸಹಕಾರಿ ಬ್ಯಾಂಕುಗಳು ಮುಂದಿವೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ನಾಲತವಾಡದ ಹಿರಿಯ ಬಿಜೆಪಿ ಧುರೀಣ ಎಂ.ಎಸ್. ಪಾಟೀಲ, ಮುತ್ತು ಅಂಗಡಿ ಅವರು ರೈತರು ಮತ್ತು ಸಹಕಾರ ಸಂಘಗಳಸಂಬಂಧಗಳ ಕುರಿತು ಹಾಗೂ ಬ್ಯಾಂಕ್‌ನಿಂದ ದೊರೆಯುವ ಸೌಲಭ್ಯಗಳ ಕುರಿತು ಮಾತನಾಡಿದರು. ದಿವ್ಯ ಸಾನ್ನಿಧ್ಯ ವಹಿಸಿದ್ದ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ ಆಶೀರ್ವಚನ ನೀಡಿದರು.
ತಾಪಂ ಅಧ್ಯಕ್ಷೆ ಲಕ್ಷ್ಮೀಬಾಯಿ ಹವಾಲ್ದಾರ, ಪೃಥ್ವಿರಾಜ್ ನಾಡಗೌಡ, ಬಸವರಾಜ ಗುಳಬಾಳ, ಎಸ್. ಆರ್. ನಾಯಕ, ಆರ್.ಬಿ. ಪಾಟೀಲ, ನಿಂಗಪ್ಪಗೌಡ ಬಪ್ಪರಗಿ, ನಿಂಗಣ್ಣ ರಾಮೋಡಗಿ, ಎಚ್.ಎಚ್.ಕುರಬಗೌಡ್ರ, ಬಿ.ಎಸ್. ಸಾಸನೂರ, ಶಿವಕುಮಾರ ಸುಲ್ತಾನಪುರ, ಶಿವರಾಯ ಪ್ಯಾಟಿ, ವೀರೇಶ ಪ್ಯಾಟಿ, ಸಂಗಯ್ಯಸ್ವಾಮಿ ಹಿರೇಮಠ, ವೇದಿಕೆಯಲ್ಲಿದ್ದರು. ಬಿ.ಬಿ. ಭೋವಿ ಸ್ವಾಗತಿಸಿದರು. ರಾಜು ಹಾದಿಮನಿ ನಿರೂಪಿಸಿದರು. ಎಸ್.ಆರ್.ಪಾಟೀಲ ವಂದಿಸಿದರು.