ಅಂದು ಡಿಸೆಂಬರ್ ತಿಂಗಳ ಮೊದಲ ದಿನ. ಮಧ್ಯಾಹ್ನದ ಅಕಾಡೆಮಿಕ್ ಕೌನ್ಸಿಲ್ ಸಭೆಗೆ ತಯಾರಿ ಮಾಡಿಕೊಳ್ಳಲು ಮಾಮೂಲಿ ಸಮಯಕ್ಕಿಂತ ಅರ್ಧಗಂಟೆ ಮುಂಚೆಯೇ ಬಂದು ಅಜೆಂಡಾ ಪಾಯಿಂಟ್‌ಗಳಿದ್ದ ಫೈಲ್ ನಲ್ಲಿ ಕಣ್ಣಾಡಿಸುತ್ತಿದ್ದೆ. ಅಷ್ಟರಲ್ಲೇ ಪ್ರಥಮ ಪಿಯುಸಿ ಕಾಮರ್ಸ್ ವಿದ್ಯಾರ್ಥಿ ರೋಹಿತ್ ” ಸಾರ್, ಬಾಯ್ಸ ಟಾಯ್ಲೆಟ್ ಹತ್ರ ಹಾವು ಮೊಟ್ಟೆ ಇಟ್ಟಿದೆ. ಗುಲಾಬಿ ಬಣ್ಣದ್ದು ಎರಡಿವೆ. ಬೇಗ ಬನ್ನಿ’ ಅಂದ. ಟಾಯ್ಲೆಟ್ನಲ್ಲಿ ಯಾವ ಹಾವು ಸೇರಿಕೊಂಡಿರಬಹುದು, ಯಾವ ಹಾವಿನ ಮೊಟ್ಟೆ ಗುಲಾಬಿ ಬಣ್ಣದ್ದಾ ಗಿರುತ್ತದೆ? ಎಂದು ಯೋಚಿಸುತ್ತಾ ಹಾಗೂ ಮೊಟ್ಟೆ ಇಟ್ಟ ಹಾವು ಅಲ್ಲೇ ಇರಬಹುದೆಂದು ಗಾಬರಿಯಿಂದ ಕೂಡಲೆ ಅವನ ಹಿಂದೆ ಓಡಿ, ಒಳ ಹೋಗುವಷ್ಟರಲ್ಲಿ ಒಳಗಲ್ಲ ಸಾರ್ ಇಲ್ಲೇ ಗಿಡದಲ್ಲಿ ಎಂದು ತೋರಿಸಿ ಮೊಣಕಾಲೆತ್ತರದ ಕಾಂಪೌಂಡ… ದಾಟಿ ಆಳೆತ್ತರದ ಸೈಕಾಸ್ ಗಿಡದ ಗರಿಗಳನ್ನು ಸರಿಸಿ ಮೇಲಿನಿಂದ ಕೆಳಗೆ ಕೈತೋರಿಸಿದ. ಕಸಪೊರಕೆ ಕಡ್ಡಿಯಲ್ಲಿ ನೀಟಾಗಿ ದುಂಡಗೆ ಹೆಣೆದಂತಿದ್ದ ಗೂಡಿನಲ್ಲಿ ನೆಲದಿಂದ 2 ಅಡಿ ಎತ್ತರದಲ್ಲಿ ಎರಡು ನಸುಗುಲಾಬಿ ಬಣ್ಣದ ಮೊಟ್ಟೆಗಳಿದ್ದವು. ಬಣ್ಣ ಹಾಗೂ ಗಾತ್ರ ನೋಡಿದ ತಕ್ಷಣ ಗೊತ್ತಾಯಿತು. ಅವು ಹಾವಿನ ಮೊಟ್ಟೆಗಳಲ್ಲ ಎಂದು. ಅಲ್ಲದೆ ಹಾವುಗಳು ನೆಲದಿಂದ ಮೇಲೆ, ಕೊಂಬೆಯ ಮೇಲಾಗಲೀ ಅಥವಾ ಎತ್ತರದ ಜಾಗದಲ್ಲಿ ಮೊಟ್ಟೆ ಇಡುವುದಿಲ್ಲ. ಕಾಳಿಂಗ ಸರ್ಪ ಮಾತ್ರ ಗೂಡು ಕಟ್ಟಿ ಮೊಟ್ಟೆ ಇಡುತ್ತದೆ ಎಂಬ ತಿಳುವಳಿಕೆ ಇದ್ದುದರಿಂದ ತುಸು ಸಮಾಧಾನಗೊಂಡು, ಹಕ್ಕಿಯ ಮೊಟ್ಟೆ ಇರಬಹುದು ಎಂದು ಯೋಚಿಸುವಷ್ಟರಲ್ಲಿ ಪಕ್ಕದ ತಾರಸಿಯ ಹಂಚಿನ ಮೇಲೆ ಕೆಮ್ಮಿàಸೆ ಪಿಕಳಾರ ಹಕ್ಕಿ ಹಾರಿಬಂದು ಕುಳಿತಿತು. ಆತಂಕದ ಧ್ವನಿ ಹೊರಡಿಸಿತು. ಕೂಡಲೇ ಗೊತ್ತಾಯಿತು ಮೊಟ್ಟೆ ಬುಲ್ ಬುಲ್ ಪಕ್ಷಿಯದ್ದು ಎಂದು. ಇನ್ನೆರಡು ವಾರದಲ್ಲಿ ಮರಿಗಳು ಹೊರಬರುತ್ತವೆ. ಅಲ್ಲಿಯವರೆಗೆ ಮೊಟ್ಟೆಗಳಿಗೆ ಯಾವ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಗಾರ್ಡನರ್ ಲಿಂಗಪ್ಪನಿಗೆ ಹೇಳಿ ಅಲ್ಲಿ ನೆರೆದಿದ್ದ ಇತರ ವಿಧ್ಯಾರ್ಥಿಗಳಿಗೂ ಎಚ್ಚರಿಕೆ ನೀಡಿ ಕ್ಲಾಸಿಗೆ ಕಳಿಸಿದೆ. ಅಲ್ಲಿಂದ ಎಲ್ಲ ಹೊರಟ ಕೆಲಕ್ಷಣಗಳ ನಂತರ ಗೂಡಿನ ಬಳಿ ಯಾರೂ ಇಲ್ಲದ್ದನ್ನು ಕಂಡ ಬುಲ್ ಬುಲ್ ಹಕ್ಕಿ ಹಾರಿಬಂದು ಮೊಟ್ಟೆಗಳ ಮೇಲೆ ಕುಳಿತು ಕಾವು ಕೊಡತೊಡಗಿತು. ಅಂದಿನಿಂದ ಸುಮಾರು ಎರಡು ವಾರಗಳ ಕಾಲ ಗೂಡು ಹಾಗೂ ಮೊಟ್ಟೆಗಳ ಸಂರಕ್ಷಣೆಯ ಕೆಲಸಬಿತ್ತು, ನಡುನಡುವೆ ಪೋಟೋಕ್ಲಿಕ್ಕಿಸಿದ್ದು ಆಯಿತು.
ಗೂಡು – ಮೊಟ್ಟೆ – ಮರಿ ಸಂತಾನಾಭಿವೃದ್ಧಿ
ಕೆಮ್ಮಿàಸೆ ಬುಲ್ ಬುಲ್ ಪಕ್ಷಿಯ ವಂಶಾಭಿವೃದ್ಧಿಯು ಡಿಸೆಂಬರ್ ನಿಂದ ಮೇ ತಿಂಗಳವರೆಗೆ ನಡೆಯುತ್ತದೆ. ಮೊಟ್ಟೆಯು ನಸು ಗುಲಾಬಿ ಬಣ್ಣದ್ದಾಗಿದ್ದು ಸುಮಾರು 2 ಸೆಂ.ಮೀ ಉದ್ದವಿದ್ದು 1.5 ಸೆಂ.ಮೀ ನಷ್ಟು ಸುತ್ತಳತೆ ಹೊಂದಿರುತ್ತದೆ. ಒಂದು ಬಾರಿಗೆ 2-3 ಮೊಟ್ಟೆ ಇಡುವ ಪಕ್ಷಿಯ ಆವಾಸ ದಕ್ಷಿಣ ಏಶಿಯಾದಲ್ಲಿ ಮಾತ್ರ. ಗೂಡಿನ ಆಕಾರ ತೆರೆದ ಬಟ್ಟಲಿನಂತೆ ದುಂಡಾಗಿದ್ದು, ಉದ್ದನೆಯ ಕಡ್ಡಿ, ರೆಂಬೆ, ಎಳೆಯ ಬೇರು ಹಾಗೂ ಒಣಗಿದ ಎಲೆಗಳಿಂದ ರಚಿಸಲ್ಪಟ್ಟಿರುತ್ತದೆ. ಮೊಟ್ಟೆ ಮರಿಯಾಗಲು 10 ರಿಂದ 12 ದಿನಗಳು ಸಾಕು. ಮೊಟ್ಟೆಯಿಂದ ಹೊರಬರುವ ಮರಿಗಳು ಬೆತ್ತಲೆಯಾಗಿದ್ದು, ದೇಹದ ಮೇಲೆ ಯಾವುದೇ ರೀತಿಯ ಹೊದಿಕೆ ಇರುವುದಿಲ್ಲ. ಏಶಿಯ ಖಂಡದ ಉಷ್ಣವಲಯದಲ್ಲಿ ಕಂಡುಬರುವ ಈ ಪಕ್ಷಿ$ ಹಾರುವುದಕ್ಕಿನ್ನ ಹೆಚ್ಚು ಕುಳಿತೇ ಇರಲು ಇಷ್ಟಪಡುತ್ತದೆ. 20 ಸೆಂ.ಮೀ ನಷ್ಟು ಉದ್ದವಾಗಿರುವ ಇವುಗಳು ಬೆನ್ನು ಕಂದು ಬಣ್ಣ¨ªಾಗಿದ್ದು, ಹೊಟ್ಟೆಯ ಭಾಗ ಅಚ್ಚ ಬಿಳಿಯದಿರುತ್ತದೆ. ಅಲ್ಲದೆ ಎರಡೂ ಕಣ್ಣುಗಳ ಕೆಳಗೆ ಕೆಂಪು ಬಣ್ಣ ಹೊಂದಿರುತ್ತವೆ. ತಲೆಯ ಮೇಲೆ ಕಿರೀಟದಂತೆ ಚೂಪಾದ ಚೊಟ್ಟಿ ಹೊಂದಿದ್ದು, ಬಾಲದ ಕೆಳಗೆ ಕೆಂಪು ಕಂಡುಬರುವ ಈ ಪಕ್ಷಿಗಳಲ್ಲಿ ಗಂಡು ಹೆಣ್ಣಿಗೆ ಅಂತಹ ವ್ಯತ್ಯಾಸವೇನಿರುವುದಿಲ್ಲ. ವಂಶಾಭಿವೃದ್ಧಿಯ ಸಮಯದಲ್ಲಿ ಮೂರು ಚದರ ಕಿ.ಮೀಟರ್‌ವರೆಗೆ ತನ್ನ ಅಧಿಪತ್ಯವನ್ನು ಗಂಡು ಹಕ್ಕಿ ಹೊಂದಿರುತ್ತದೆ. ಬೆಂಗಳೂರು ಹೊರವಲಯದ ಬಹುತೇಕ ಬಡಾವಣೆಗಳಲ್ಲಿ ಬುಲ… ಬುಲ… ಕಂಡುಬರುತ್ತದೆ. ಮೊಟ್ಟೆಗಳನ್ನು ಮರಿಮಾಡುವ ಕೆಲಸದಲ್ಲಿ ಗಂಡು – ಹೆಣ್ಣು ಎರಡು ಸಮವಾಗಿ ಶ್ರಮಪಡುತ್ತವೆ. ಚಿಕ್ಕಮರಿಗಳಿಗೆ ಕ್ರಿಮಿ-ಕೀಟಗಳನ್ನೇ ಆಹಾರವಾಗಿ ನೀಡುವ ಇವು ದೊಡªದಾದ ನಂತರ ಹಣ್ಣು ಹಾಗೂ ಬೀಜವಿಲ್ಲದ ಬೆರಿìಗಳನ್ನು ಹೆಚ್ಚು ತಿನ್ನುತ್ತವೆ. ಅದರಲ್ಲೂ ಸಸ್ತನಿಗಳಿಗೆ ವಿಷವಾಗಬಲ್ಲ ಹಣ್ಣುಗಳನ್ನೇ ಹೆಚ್ಚು ತಿನ್ನುತ್ತವೆ.
ಗುರುರಾಜ್ ದಾವಣಗೆರೆ