ವಾಡಿ: ಚಿತ್ತಾಪುರ ತಾಲೂಕಿನಲ್ಲಿ ಕಮಲ ಬಳ್ಳಿಯ ಬೇರುಗಳೇ ಇರಲಿಲ್ಲ. ಯಾರಿಗೆ ಕೇಳಿದರೂ “ಕೈ’ ಅಂತಿದ್ರು ಜನ. ಅಂತಹ ವಾತಾವರಣದಲ್ಲಿ ಬಿಜೆಪಿ ಕಟ್ಟುವುದು ಸರಳವಾಗಿರಲಿಲ್ಲ. ಇವತ್ತು ಪಕ್ಷ ಎತ್ತರಕ್ಕೆ ಬೆಳೆದು ನಿಂತಿರುವುದರ ಕೀರ್ತಿ ದಿ| ವಾಲ್ಮೀಕಿ ನಾಯಕರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಗರ ಶಕ್ತಿಕೇಂದ್ರ ಅಧ್ಯಕ್ಷ ಶಿವರಾಮ ಪವಾರ ಸ್ಮರಿಸಿದರು.
ಪಟ್ಟಣದ ರೆಸ್ಟ್‌ಕ್ಯಾಂಪ್ ತಾಂಡಾದಲ್ಲಿ ಏರ್ಪಡಿಸಲಾಗಿದ್ದ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ದಿ|ವಾಲ್ಮೀಕಿ ನಾಯಕ ಅವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಹಿರಿಯ ನಾಯಕ, ಬಂಜಾರಾ ಸಮಾಜದ ದಿ| ಆರ್.ಬಿ. ಚವ್ಹಾಣ ಅವರ ನಿಷ್ಟಾವಂತ ಸೇವೆಯಿಂದಾಗಿ ಕ್ಷೇತ್ರದ ಲಂಬಾಣಿ ಜನಾಂಗದ ಪ್ರತಿಯೊಬ್ಬ ಮಹಿಳೆಯರ ಬಾಯಿಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಚಿನ್ಹೆ ಗುನುಗುಡುತ್ತಿತ್ತು. ಬಿಜೆಪಿ ಅಭ್ಯರ್ಥಿ ವಾಲ್ಮೀಕಿ ನಾಯಕರ ಚಿನ್ಹೆ ಕಮಲ ಎಂದು ಮಹಿಳೆಯರಿಗೆ ಮನದಟ್ಟು ಮಾಡುತ್ತಿದ್ದೇವು. ಮರುದಿನ ಹೋಗಿ ವಾಲ್ಮೀಕಿ ನಾಯಕರ ಚಿನ್ಹೆ ಯಾವುದು ಎಂದು ಕೇಳಿದರೆ ಕೈ ಅಂತಿದ್ರು. ಇಂತಹ ಕಾಂಗ್ರೆಸ್ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಜೆಪಿಯ ಭಾವುಟ ಹಾರಿಸಿ ಶಾಸಕರಾದ ವಾಲ್ಮೀಕಿ, ಕಾಂಗ್ರೆಸ್ ಪಕ್ಷಕ್ಕೆ ಸೋಲಿನ ರುಚಿ ತೋರಿಸಿದ್ದರು. ಅವರ ಅಗಲಿಕೆಯಿಂದ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ ಎಂದರು.
ಬಿಜೆಪಿ ಯುವ ಮುಖಂಡರಾದ ಅರವಿಂದ ಚವ್ಹಾಣ ಹಾಗೂ ಮಣಿಕಂಠ ರಾಠೊಡ ಮಾತನಾಡಿದರು. ಕೊಂಚೂರ ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ, ಪುರಸಭೆ ಉಪಾಧ್ಯಕ್ಷ, ಕಾಂಗ್ರೆಸ್ ಮುಖಂಡ ದೇವಿಂದ್ರ ಕರದಳ್ಳಿ, ಮುಖಂಡರಾದ ಪೋಮು ರಾಠೊಡ, ಬಸವರಾಜ ಪಂಚಾಳ, ಬಾಬುಮಿಯ್ನಾ, ರಾಮದಾಸ ಚವ್ಹಾಣ, ಪರಶುರಾಮ ತುನ್ನೂರ, ಭೀಮಶಾ ಜಿರೊಳ್ಳಿ, ಲೋಕೇಶ ರಾಠೊಡ, ಶ್ಯಾಮಸನ್ ಐಜಿಯಾ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ, ಕ್ಯಾಥೋಲಿಕ ಚರ್ಚ್ ಫಾದರ್ ರೇ. ವಿಲ್ಬರ್ಟ್ ವಿನಯ ಲೋಬೊ, ಸಿಸ್ಟರ್ ತೆಕಲಾ ಮೇರಿ, ರವಿ ವಾಲ್ಮೀಕಿ ನಾಯಕ, ಭಾಗವತ ಸುಳೆ, ರಾಮಚಂದ್ರ ರೆಡ್ಡಿ, ಗಿರಿಮಲ್ಲಪ್ಪ ಕಟ್ಟಿಮನಿ, ಹರಿ ಗಲಾಂಡೆ, ಶಂಕರ ಜಾಧವ, ಗುಂಡುಗೌಡ ಪಾಟೀಲ, ಶರಣು ನಾಟೀಕಾರ, ಮಲ್ಲಯ್ಯ ಗುತ್ತೇದಾರ, ನಾಗೇಂದ್ರ ಜೈಗಂಗಾ, ಕಿಶನ ಜಾಧವ, ಮಕ್ಸೂದ್ ಜುನೈದಿ, ಅಂಬಾದಾಸ ಜಾಧವ, ರಾಹುಲ ಮೇನಗಾರ, ಕೈಲಾಸ ಚವ್ಹಾಣ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಬಿಜೆಪಿ ತಾಲೂಕು ಉಪಾಧ್ಯಕ್ಷ ವೀರಣ್ಣ ಯಾರಿ ನಿರೂಪಿಸಿದರು.