Advertisement

Panaji: ಕಟ್ಟಡದ ಸ್ಲ್ಯಾಬ್ ಕುಸಿದು 2 ಕಾರು, 3 ದ್ವಿಚಕ್ರ ವಾಹನ ಜಖಂ… ತಪ್ಪಿದ ಅನಾಹುತ

01:16 PM Jun 08, 2024 | Team Udayavani |

ಪಣಜಿ: ಮಾಪ್ಸಾದ ತಾಲಿವಾಡಾದಲ್ಲಿ ಹಳೇಯ ಮತ್ತು ಶಿಥಿಲಗೊಂಡ ಕಟ್ಟಡದ ಸ್ಲ್ಯಾಬ್ ಕುಸಿದುಬಿದ್ದ ಪರಿಣಾಮ ಅಲ್ಲಿಯೇ ನಿಲ್ಲಿಸಿದ್ದ ಎರಡು ಕಾರುಗಳು ಮತ್ತು ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿದೆ. ಅದೃಷ್ಠವಶಾತ್ ಕಟ್ಟಡದ ಕೆಳಗೆ ಯಾರೂ ಇಲ್ಲದ ಕಾರಣ ಭಾರಿ ಅನಾಹುತ ತಪ್ಪಿದಂತಾಗಿದೆ. ಆದರೆ ಇದೇ ಮಾರ್ಗದಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ವ್ಯಕ್ತಿಯೋರ್ವನಿಗೆ ಚಿಕ್ಕಪುಟ್ಟ ಗಾಯಗಳಾಗಿದೆ.

Advertisement

ಈ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂಧಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ. ವಾಹನಗಳ ಮೇಲೆ ಬಿದ್ದಿದ್ದ ಸ್ಲ್ಯಾಬ್ ಭಾಗವನ್ನು ಅಗ್ನಿಶಾಮಕ ದಳದ ಸಿಬ್ಬಂಧಿಗಳು ತೆರವುಗೊಳಿಸಿದರು. ಈ ಕಟ್ಟಡವು ಸುಮಾರು 46 ವರ್ಷದಷ್ಟು ಹಳೇಯದಾಗಿದ್ದು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಸಂತೆಯ ನಿಮಿತ್ತ ಮಾರುಕಟ್ಟೆಯಲ್ಲಿ ವಾಹನಗಳು ಭಾರಿಸಂಖ್ಯೆಯಲ್ಲಿ ಓಡಾಟ ನಡೆಸಿದ್ದವು. ವಾಹ ನಿಲುಗಡೆಗೆ ಜಾಗವಿಲ್ಲದ ಕಾರಣ ಜನರು ತಮ್ಮ ವಾಹನವನ್ನು ಈ ಹಳೇಯ ಕಟ್ಟಡದ ಕೆಳಗೆ ನಿಲ್ಲಿಸಿದ್ದರು ಎನ್ನಲಾಗಿದೆ.

ಕಾರ್ಪೊರೇಟರ್ ಸುಧೀರ್ ಕಾಂದೋಳಕರ್ ನೀಡಿರುವ ಮಾಹಿತಿಯ ಅನುಸಾರ- ಈ ಅಪಾಯಕಾರಿ ಕಟ್ಟಡವನ್ನು ತೆರವುಗೊಳಿಸುವಂತೆ ಸಂಬಂಧಿತ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ. ಆದರೂ ಈ ಕಟ್ಟಡವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಕಟ್ಟಡದ ಮಾಲೀಕ ಮುಕುಂದ ಕೋಸ್ಕರ್ ಮಾತನಾಡಿ-ಕಟ್ಟಡ ಅಪಾಯಕಾರಿಯಾಗಿದ್ದರಿಂದ 2018 ರಲ್ಲಿ ಬಾಡಿಗೆದಾರರನ್ನು ತೆರವುಗೊಳಿಸಿ ಕಟ್ಟಡ ಕಡಗುವಂತೆ ಪುರಸಭೆಗೆ ಮನವಿ ಮಾಡಿದ್ದರೂ ಪುರಸಭೆ ನಿರ್ಲಕ್ಷ್ಯವಹಿಸಿದೆ ಎಂದರು.

ಇದನ್ನೂ ಓದಿ: Chikkamagaluru: ರಸ್ತೆ ಮಧ್ಯೆ ಹೊತ್ತಿ ಉರಿದ ಕಾರು… ಅದೃಷ್ಟವಶಾತ್ ಪಾರಾದ ಪ್ರಯಾಣಿಕರು

Advertisement

Udayavani is now on Telegram. Click here to join our channel and stay updated with the latest news.

Next