Advertisement
ಕುಂದಾಪುರ ಶೈಕ್ಷಣಿಕ ವಲಯದಲ್ಲಿ 1ರಿಂದ 18 ವರ್ಷದ ಶಾಲಾ ಕಲಿಕೆಯ ವಯಸ್ಸಿನ 21 ವಿಧದ ವಿವಿಧ ನ್ಯೂನತೆ ಇರುವ 364 ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತೀವ್ರ ನ್ಯೂನತೆಯುಳ್ಳ ಈ ವಿದ್ಯಾರ್ಥಿಗಳಿಗೆ ಕೇಂದ್ರದಲ್ಲಿ ಥೆರಪಿ ಅಗತ್ಯವಿದೆ. ಆದರೆ ಸಮನ್ವಯ ಶಿಕ್ಷಣ ಕೇಂದ್ರ ಪ್ರಾರಂಭಿಸಲು ಸ್ವಂತ ಜಮೀನು ಕಟ್ಟಡವಿರುವುದಿಲ್ಲ. ನ್ಯೂನತೆಯುಳ್ಳ ವಿದ್ಯಾರ್ಥಿಗಳಿಗೆ ಬಂದು ಹೋಗಲು ಅನುಕೂಲವಾಗುವ ಸ್ಥಳದ ಅಗತ್ಯವಿದೆ.
Related Articles
Advertisement
ಅಂಗವಿಕಲ ಗ್ರಾಮೀಣ ಪುನರ್ವಸತಿ ಯೋಜನೆ ತಾಲೂಕು ಸಂಪನ್ಮೂಲ ಕೇಂದ್ರಕ್ಕೆ ತಾಗಿಕೊಂಡು ಲಭ್ಯವಿರುವ ಜಮೀನನ್ನು ತಾಲೂಕು ಸಮನ್ವಯ ಶಿಕ್ಷಣ ಸಂಪನ್ಮೂಲ ಕೇಂದ್ರ (ಸಿಆರ್‌ಪಿ ಕೇಂದ್ರ) ಕಟ್ಟಡ ನಿರ್ಮಿಸಲು ವಿಶೇಷ ನ್ಯೂನತೆಯುಳ್ಳ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯೋಗ್ಯವಾಗಿರುತ್ತದೆ. ಆದ ಪ್ರಯುಕ್ತ ಲಭ್ಯವಿರುವ ಜಮೀನಿನ ಅಳತೆ ಮಾಡಿಸಿ, ತಾಲೂಕು ಸಂಪನ್ಮೂಲ ಕೇಂದ್ರ ಕಟ್ಟಡ ಕಟ್ಟಲು ಕಾದಿರಿಸಬೇಕು. ಈ ಜಮೀನು ಕಾದಿರಿಸಿದಲ್ಲಿ ಅಥವಾ ಮಂಜೂರು ಮಾಡಿದಲ್ಲಿ, ಕಟ್ಟಡ ಮತ್ತು ಆವರಣ ಗೋಡೆ ನಿರ್ಮಿಸಲು ಅನುದಾನ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕರು ಪತ್ರದಲ್ಲಿ ವಿವರಿಸಿದ್ದಾರೆ.
ಅನುದಾನ ವಾಪಾಸ್
ಚಿಕಿತ್ಸೆಗೆ ಸುಸಜ್ಜಿತ ವ್ಯವಸ್ಥೆ ಮಾಡಲು ಸರಕಾರದಿಂದ 7 ಲಕ್ಷ ರೂ. ಅನುದಾನ ಬಂದುದು ಜಾಗ ಹಾಗೂ ಸೂಕ್ತ ಕಟ್ಟಡ ಇಲ್ಲದ ಕಾರಣ ಮರಳಿ ಹೋಗಿತ್ತು.