Advertisement

ಸರ್ಕಾರಿ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ: ನಿರಾಣಿ

11:42 AM May 10, 2022 | Team Udayavani |

ಹುನಗುಂದ: ಅವಳಿ ತಾಲೂಕಿನ ಸರ್ಕಾರಿ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ ಕಲ್ಪಿಸಿರುವುದು ಶಾಸಕ ದೊಡ್ಡನಗೌಡ ಪಾಟೀಲ ಅವರ ಅಭಿವೃದ್ಧಿ ಕಾರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ವಿಧಾನ ಪರಿಷತ್‌ ಹನಮಂತ ನಿರಾಣಿ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ 5 ಲಕ್ಷ ರೂ ವಿಧಾನ ಪರಿಷತ್‌ ಸದಸ್ಯರ ಅನುದಾನದಲ್ಲಿ ಜಿಮ್‌ ಕಟ್ಟಡ ಮತ್ತು 39 ಲಕ್ಷ ಸರ್ಕಾರಿ ಕಾಲೇಜು ಅನುದಾನದಲ್ಲಿ 2 ಹೆಚ್ಚುವರಿ ಕಟ್ಟಡಗಳ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಶಿಕ್ಷಣಕ್ಕೆ ಬೇಕಾದ ಸಕಲ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಂಡು ಒಳ್ಳೆಯ ಶಿಕ್ಷಣವಂತರಾಗಿ ಉನ್ನತ ಹುದ್ದೆಯನ್ನು ಪಡೆಯುವ ಮೂಲಕ ಈ ಶಿಕ್ಷಣ ಸಂಸ್ಥೆಯ ಹಾಗೂ ಪ್ರಾಧ್ಯಾಪಕರ ಕೀರ್ತಿಯನ್ನು ತರಬೇಕು. ದೇಶದ ಅನೇಕ ಶಿಕ್ಷಣ ತಜ್ಞರು, ಸಾಹಿತ್ಯಗಳು ವೈಚಾರಿಕ ತಜ್ಞರ ಸಲಹೆ ಸೂಚನೆ ಮೇರೆಗೆ 35 ವರ್ಷಗಳ ನಂತರ ಶಿಕ್ಷಣ ಮಸೂದೆಗೆ ತಿದ್ದುಪಡಿಯನ್ನು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದಿದ್ದಾರೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಸದುಪಯೋಗವನ್ನು ಪಡೆದುಕೊಳ್ಳಬೇಕು. ಪದವಿ ವಿದ್ಯಾರ್ಥಿಗಳು ಪಠ್ಯ ವಿಷಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದಾಗ ಮಾತ್ರ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ ಇರಲು ಸಾಧ್ಯ ಆ ನಿಟ್ಟಿನಲ್ಲಿ ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ತಮ್ಮ ಅನುದಾನದಲ್ಲಿ 5 ಲಕ್ಷ ಜಿಮ್‌ ಕಟ್ಟಡಕ್ಕೆ ನೀಡಿದ್ದಾರೆ. ಅವರಿಗೆ ಕಾಲೇಜ ಶಿಕ್ಷಣದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪ್ರಾಚಾರ್ಯ ಡಾ| ಎಸ್‌.ಎಲ್‌.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಪ್ರಾರಂಭವಾದ ಈ ಕಾಲೇಜು ಮೊದಲು ಕೊಠಡಿಯ ಕೊರತೆ ಇತ್ತು. ಸದ್ಯ ಪದವಿ ಕಾಲೇಜಿಗೆ ಬೇಕಾದ ಕಟ್ಟಡದ ಕೊರತೆಯನ್ನು ನೀಗಿಸಿದವರು ಶಾಸಕ ದೊಡ್ಡನಗೌಡ ಪಾಟೀಲ. ಪದವಿ ವಿದ್ಯಾರ್ಥಿಗಳಿಗೊಂದು ಜಿಮ್‌ ಕಟ್ಟಡ ಅವಶ್ಯವಿತ್ತು. ಅದನ್ನು ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿಯವರು ತಮ್ಮ ಶಾಸಕರ ಅನುದಾನದಲ್ಲಿ 5 ಲಕ್ಷ ರೂ ಅನುದಾನವನ್ನು ಕೊಡುವ ಮೂಲಕ ವಿದ್ಯಾರ್ಥಿಗಳ ಜಿಮ್‌ ಕಟ್ಟಡದ ಆಸೆಯನ್ನು ಈಡೇರಿಸಿದ್ದಾರೆ. ಅದರ ಜತೆಗೆ 39 ಲಕ್ಷ ಅನುದಾನದಲ್ಲಿ ಹೆಚ್ಚುವರಿವಾಗಿ 2 ಕೊಠಡಿಗಳ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.

ತಹಶೀಲ್ದಾರ್‌ ಬಸಲಿಂಗಪ್ಪ ನೈಕೋಡಿ, ಸಿಪಿಐ ಹೊಸಕೇರಪ್ಪ ಕೊಳ್ಳೂರ, ಸಿಡಿಸಿ ಸದಸ್ಯರಾದ ಮಲ್ಲಿಕಾರ್ಜುನ ಹಳಪೇಟಿ, ಸಂಗಣ್ಣ ಕಡಪಟ್ಟಿ, ಮಂಜುನಾಥ ಕೊಡಗಾನೂರ, ಮಹೇಶ ಬೆಳ್ಳಿಹಾಳ, ಅರವಿಂದ ಮಂಗಳೂರ, ಮಹಾಂತೇಶ ರೇವಡಿ, ಮಂಜುನಾಥ ಕಿರಸೂರ, ಚನ್ನಬಸಪ್ಪ ಹೊನವಾಡ, ಎಸ್‌.ಎಂ. ಹುನಕುಂಟಿ, ತಿಮ್ಮಣ್ಣ ದಾದ್ಮಿ, ಗುರುಬಸಪ್ಪ ಪಾಟೀಲ, ಚನ್ನಮಲ್ಲಮ್ಮ ಹಲಕಾವಟಗಿ ಇದ್ದರು. ದೈಹಿಕ ನಿರ್ದೇಶಕ ಬಿ.ವೈ. ಆಲೂರ ಸ್ವಾಗತಿಸಿದರು. ಪ್ರೊ| ಗಾಯತ್ರಿ ದಾದ್ಮಿ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next