Advertisement

ಮುಂಬಯಿ:ಲೈಟ್‌ ಆಫ್ ಏಷ್ಯಾ ಕಟ್ಟಡದಲ್ಲಿ ಭಾರೀ ಬೆಂಕಿ;ಇಬ್ಬರಿಗೆ ಗಾಯ

10:45 AM Jun 09, 2018 | Team Udayavani |

ಮುಂಬಯಿ: ನಗರದ 5 ಅಂತಸ್ಥಿನ ಕಟ್ಟಡದಲ್ಲಿ ಶನಿವಾರ ಬೆಳಗಿನ ಜಾವ 4.30 ರ ವೇಳೆಗೆ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಅವಘಡದಲ್ಲಿ ಬೆಂಕಿ ನಂದಿಸಲು ತೆರಳಿದ್ದ ಇಬ್ಬರು ಅಗ್ನಿ ಶಾಮಕದಳದ ಸಿಬಂದಿಗಳು ಏಣಿಯಿದ್ದ ಬಿದ್ದು ಗಾಯಗೊಂಡಿದ್ದಾರೆ. 

Advertisement

ಬಂದರು ಪ್ರದೇಶದ ಪಟೇಲ್‌ ಚೆಂಬರ್ಸ್‌ನ  ಲೈಟ್‌ ಆಫ್ ಏಷ್ಯಾ ರೆಸ್ಟೋರೆಂಟ್‌ ಕಟ್ಟಡದಲ್ಲಿ ಭಾರೀ ಬೆಂಕಿ ಕಾಣಿಸಕೊಂಡ ಬಳಿಕ ಸ್ಥಳಕ್ಕೆ 15 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳು ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಟ್ಟಡ ಸಂಪೂರ್ಣ ಹಾನಿಯಾಗಿದ್ದು ಒಂದು ಭಾಗ ಕುಸಿದು ಬಿದ್ದಿದೆ. 

ಜನನಿಭಿಡ ರಸ್ತೆಯ ಪಕ್ಕದಲ್ಲೇ ಕಟ್ಟಡವಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದ್ದು, ಇದೀಗ ಕಟ್ಟಡ ತೆರವು ಮಾಡದಿದ್ದಲ್ಲಿ ಅಪಾಯವಿದೆ. 

ಅಪಾಯಕಾರಿ ಕಟ್ಟಡ ಎಂಬ ವರ್ಗಕ್ಕೆ ಸೇರಿದ ಬ್ರಿಟೀಷ್‌ ಕಾಲದ ಕಟ್ಟಡ ಇದಾಗಿದ್ದು, ಕಟ್ಟಡವನ್ನು ಕೆಡವಿ ಹಾಕಲು ನಿರ್ಧರಿಸಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next